• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಿಯಮ ಉಲ್ಲಂಘನೆ: ಬೆಂಗಳೂರಲ್ಲಿ 3 ದಿನದಲ್ಲಿ ಸಂಗ್ರಹವಾದ ದಂಡವೆಷ್ಟು?

|
Google Oneindia Kannada News

ಬೆಂಗಳೂರು, ಜೂನ್ 18: ಬೆಂಗಳೂರಲ್ಲಿ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡುತ್ತಿದ್ದಂತೆಯೇ ಜನರ ಸಂಚಾರ ಹೆಚ್ಚಾಗಿದೆ. ಹೀಗಿರುವಾಗ ಕೋವಿಡ್ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ, ಮೂರು ದಿನದಲ್ಲಿ ಬರೋಬ್ಬರಿ 10 ಲಕ್ಷ ರೂ ಸಂಗ್ರಹಿಸಿದ್ದಾರೆ.

ಪರಿಸ್ಥಿತಿ ಅರ್ಥಮಾಡಿಕೊಳ್ಳುವಂತೆ ಜನರಿಗೆ ಸಾಕಷ್ಟು ಸಮಯವನ್ನು ನೀಡಲಾಗಿದೆ ಎಂದು ಇಲಾಖೆ ನಿರ್ಧರಿಸಿದೆ. ಹೀಗಾಗಿ ಇನ್ನು ಮುಂದೆ ಯಾರಿಗೂ ಮೃದುತ್ವ ತೋರದಿರಲು ನಿರ್ಧರಿಸಿದ್ದು, ಮಾರ್ಗಸೂಚಿ ಪಾಲನೆ ಮಾಡದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಬೆಂಗಳೂರಿಗೆ ಹೋಗುವ ಪ್ಲ್ಯಾನ್ ಇದೆಯೇ? ನೀವು ತಿಳಿಯಬೇಕಾಗಿದ್ದಿಷ್ಟುಬೆಂಗಳೂರಿಗೆ ಹೋಗುವ ಪ್ಲ್ಯಾನ್ ಇದೆಯೇ? ನೀವು ತಿಳಿಯಬೇಕಾಗಿದ್ದಿಷ್ಟು

ಕಳೆದ ಮೂರು ದಿನಗಳಲ್ಲಿ 5,312 ಪ್ರಕರಣಗಳನ್ನು ದಾಖಲಿಸಿಕೊಳ್ಳಳಾಗಿದ್ದು, ಇದರಲ್ಲಿ 20 ಪ್ರಕರಣಗಳು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ (ಎನ್'ಡಿಎಂಎ) ಅಡಿಯಲ್ಲಿ ದಾಖಲಾಗಿದೆ. 3818 ಪ್ರಕರಣಗಳು ಮಾಸ್ಕ್ ಧರಿಸದೇ ಇರುವುದು, 1,494 ಪ್ರಕರಣಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಇರುವುದು ದಾಖಲಾಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಾಹನಗಳ ಫೋಟೋಗಳನ್ನು ಸಂಗ್ರಹಿಸಿದ್ದ ಪೊಲೀಸರು ಇದೀಗ ನೋಟಿಸ್ ಗಳನ್ನು ಜಾರಿ ಮಾಡಿ, ದಂಡ ಕಟ್ಟುವಂತೆ ಸೂಚಿಸುತ್ತಿದ್ದಾರೆ. ಇದರಂತೆ ಕೇವಲ ಮೂರು ದಿನಗಳಲ್ಲೇ ರೂ.10,24,750 ದಂಡ ವಸೂಲಿ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಸಂಗ್ರಹಿಸಲಾಗಿರುವ ಈ ಹಣವು ರಾಜ್ಯ ಬೊಕ್ಕಸಕ್ಕೆ ಹೋಗಲಿದ್ದು ರಾಜ್ಯದ ಆರ್ಥಿಕತೆ ಪರಿಸ್ಥಿತಿ ಸುಧಾರಿಸಲು ಇದು ಸಹಾಯ ಮಾಡಲಿದೆ. ಲಾಕ್ಡೌನ್ ವೇಳೆ ಸಾಕಷ್ಟು ಜನರಿಗೆ ಎಚ್ಚರಿಕೆ ನೀಡಿ ಬಿಡಲಾಗಿತ್ತು.

ಹೀಗಾಗಿ ದಂಡದ ಹಣ ಕಡಿಮೆಯಾಗಿದೆ. ಆದರೆ, ನಿಯಮ ಉಲ್ಲಂಘಿಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಮುಂದಿನ ದಿನಗಳಲ್ಲಿ ದಂಡದ ಮೊತ್ತವನ್ನು ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.

   ಜೆಡಿಎಸ್ ನಂತೆಯೇ ರಾಕ್ಷಸ ಕುಟುಂಬ ರಾಜಕಾರಣ ಬಿಜೆಪಿಯಲ್ಲೂ ಇದೆ | Oneindia Kannada

   ಲಾಕ್‌ಡೌನ್ ಸಮಯದಲ್ಲೂ ಕೆಲವರು ರಸ್ತೆಗಳಲ್ಲಿ ಅಡ್ಡಾಡುತ್ತಿರುವುದು ಕಂಡು ಬಂದಿತ್ತು. ಹೆಲ್ಮೆಟ್ ಧರಿಸದಿರುವುದು, ಸೀಟ್ ಬೆಲ್ಟ್ ಧರಿಸದಿರುವವರ ವಿರುದ್ಧವೂ ಪ್ರಕರಣ ಈ ಅವಧಿಯಲ್ಲಿ ಪ್ರಕರಣ ದಾಖಲಿಸಿಕೊಂಡಿಲ್ಲ.

   English summary
   While the city is going through the unlock period in phases, cops are not only noting down the details for violators, they are also booking cases against them.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X