ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಫುಟ್‌ಪಾತ್ ಅತಿಕ್ರಮಣದ ವಿರುದ್ಧ ಸಂಚಾರಿ ಪೊಲೀಸರ ಸಮರ

|
Google Oneindia Kannada News

ಬೆಂಗಳೂರು, ಏಪ್ರಿಲ್ 26 : ಬಿಬಿಎಂಪಿ ಮಾಡಬೇಕಿದ್ದ ಕೆಲಸವನ್ನು ಬೆಂಗಳೂರು ಸಂಚಾರಿ ಪೊಲೀಸರು ಮಾಡುತ್ತಿದ್ದಾರೆ. ನಗರದಲ್ಲಿ ಒಂದೇ ದಿನದಲ್ಲಿ 600 ಅಕ್ರಮ ಫುಟ್‌ಪಾತ್ ಅತಿಕ್ರಮಣವನ್ನು ತೆರವುಗೊಳಿಸಲಾಗಿದೆ.

ಲೋಕಸಭಾ ಚುನಾವಣೆ ವಿಶೇಷ ಪುಟ

ಬೆಂಗಳೂರು ನಗರದ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಪಿ.ಹರಿಶೇಖರನ್ ಅವರ ನೇತೃತ್ವದಲ್ಲಿ ನಗರದ ಅಕ್ರಮ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯವನ್ನು ಕೈಗೊಳ್ಳಲಾಗಿದೆ. ಗುರುವಾರದಿಂದ ಈ ಕಾರ್ಯಾಚರಣೆ ಆರಂಭವಾಗಿದೆ.

ನಾಗರಿಕರ ಟ್ವೀಟ್‌ಗೆ ಸ್ಪಂದಿಸಿದ ಡಿಸಿಎಂ: ಟ್ವೀಟ್‌ನಲ್ಲೇನಿತ್ತು?ನಾಗರಿಕರ ಟ್ವೀಟ್‌ಗೆ ಸ್ಪಂದಿಸಿದ ಡಿಸಿಎಂ: ಟ್ವೀಟ್‌ನಲ್ಲೇನಿತ್ತು?

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಡಬೇಕಿದ್ದ ಕೆಲಸವನ್ನು ಸಂಚಾರ ಪೊಲೀಸರು ಮಾಡುತ್ತಿದ್ದಾರೆ. ಮೊದಲ ದಿನದ ಕಾರ್ಯಾಚರಣೆಯಲ್ಲಿಯೇ 600 ಅತಿಕ್ರಮಣಗಳನ್ನು ತೆರವುಗೊಳಿಸಲಾಗಿದೆ.

Bengaluru Traffic Police cleared the 600 footpath encroachments

ಹೆಬ್ಬಾಳ, ಹೊಸಕೆರೆಹಳ್ಳಿ, ಹಳೆ ವಿಮಾನ ನಿಲ್ದಾಣ ರಸ್ತೆ, ಬೆಳ್ಳಂದೂರು, ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆಯಲ್ಲಿ ಮೊದಲ ದಿನದ ಕಾರ್ಯಾಚರಣೆ ನಡೆದಿದೆ. ಫುಟ್‌ಪಾತ್ ಅತಿಕ್ರಮಣ ಮಾಡಿದ್ದ ತಳ್ಳುಗಾಡಿ, ಪೆಟ್ಟಿ ಅಂಗಡಿಗಳನ್ನು ತೆರವು ಮಾಡಲಾಗಿದೆ.

ನಮ್ಮ ಮೆಟ್ರೋ ನಿಲ್ದಾಣ: ಬಿಬಿಎಂಪಿಯಿಂದ ಫುಟ್ ಪಾತ್ ಅಭಿವೃದ್ಧಿನಮ್ಮ ಮೆಟ್ರೋ ನಿಲ್ದಾಣ: ಬಿಬಿಎಂಪಿಯಿಂದ ಫುಟ್ ಪಾತ್ ಅಭಿವೃದ್ಧಿ

ಹಲವು ರಸ್ತೆಗಳಲ್ಲಿ ಅಕ್ರಮವಾಗಿ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳ ಪಾರ್ಕಿಂಗ್ ಸ್ಥಳಗಳನ್ನು ನಿರ್ಮಾಣ ಮಾಡಲಾಗಿತ್ತು. ಫುಟ್‌ಪಾತ್‌ನಲ್ಲಿ ಅಕ್ರಮವಾಗಿ ವ್ಯಾಪಾರ ಮಾಡುತ್ತಿದ್ದವರನ್ನು ತೆರವುಗೊಳಲಾಗಿದೆ.

'ಬಿಬಿಎಂಪಿ ಹಲವು ಬಾರಿ ಅತಿಕ್ರಮಣ ತೆರವು ಮಾಡಿದೆ. ಆದರೆ, ಕೆಲವು ದಿನಗಳಲ್ಲಿ ವ್ಯಾಪಾರಿಗಳು ಮತ್ತೆ ವಾಪಸ್ ಬಂದಿದ್ದಾರೆ. ಆದರೆ, ಈಗ ಸಂಚಾರಿ ಪೊಲೀಸರು ಇದನ್ನು ಪ್ರತಿ ತಿಂಗಳು ಗಮನಿಸಲಿದ್ದಾರೆ. ಪುನಃ ಅಲ್ಲಿ ವ್ಯಾಪಾರ ಮಾಡಲು ಬಿಡುವುದಿಲ್ಲ' ಎಂದು ಹರಿಶೇಖರನ್ ಹೇಳಿದ್ದಾರೆ.

English summary
Bengaluru Traffic Police cleared the 600 footpath encroachments in the entire city on one day. Many petty shops and street vendors had encroached the footpaths.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X