ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಡಿಸೆಂಬರ್ ಅಂತ್ಯದವರೆಗೂ ಮೈಕೊರೆಯುವ ಚಳಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 26 : ನಗರ ಸೇರಿದಂತೆ ರಾಜ್ಯದ ಹಲವಡೆ ಮೈಕೊರೆಯುವ ಚಳಿ ಮುಂದುವರೆದಿದ್ದು, ಬಹುತೇಕ ಕಡೆಗೆ ಇಬ್ಬನಿ ಸಹಿತ ಚಳಿ ಮೈ ನಡುಗಿಸುತ್ತಿದೆ. ಇದೇ ವಾತಾವರಣ ಡಿಸೆಂಬರ್ ಅಂತ್ಯದವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ದಟ್ಟ ಮಂಜು : ಬೆಂಗಳೂರು ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತದಟ್ಟ ಮಂಜು : ಬೆಂಗಳೂರು ವಿಮಾನ ಸಂಚಾರ ತಾತ್ಕಾಲಿಕ ಸ್ಥಗಿತ

ಡಿಸೆಂಬರ್ 27 ರವರೆಗೆ 27 ಡಿಗ್ರಿ ಗರಿಷ್ಠ ತಾಪಮಾನ ಹಾಗೂ 16 ಡಿಗ್ರಿ ಕನಿಷ್ಠ ತಾಪಮಾನವಿರಲಿದೆ. ಕೆಲವೆಡೆ ಈಗಾಗಲೇ 15-16 ಡಿಗ್ರಿ ಸೆ. ನಷ್ಟು ದಾಖಲಾಗಿದೆ. ಹಸಿರು ಪ್ರದೇಶಗಳಾಗಿರುವ ಲಾಲ್ ಬಾಗ್, ಹೆಸರಘಟ್ಟದಲ್ಲಿ 15 ಡಿಗ್ರಿ ಸೆಲ್ಷಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ ಎಂದು ಹೇಳಿದ್ದಾರೆ.

Bengaluru to witness comfortable cold weather

ಬೆಂಗಳೂರಿನ ಹೊರ ವಲಯದಲ್ಲಿ 5 ರಿಂದ 6 ಡಿಗ್ರಿ ಸೆ. ನಷ್ಟು ದಾಖಲಾಗಿದೆ. 16 ಡಿಗ್ರಿ ಸೆಲ್ಷಯಸ್ ಬೆಂಗಳೂರಿನ ಕನಿಷ್ಠ ತಾಪಮಾನವಾಗಿದೆ. ವಿಜಯಪುರದಲ್ಲಿ 9.2 ಡಿಗ್ರಿ ಸೆಲ್ಷಿಯಸ್ ತಾಪಮಾನ ದಾಖಲಾಗಿದೆ. ಬಾಗಲಕೋಟೆಯಲ್ಲಿ 10 ಡಿಗ್ರಿ ಸೆ. ಕನಿಷ್ಠ ತಾಪಮಾನ ಮಂಗಳವಾರ ದಾಖಲಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣಾ ಕೇಂದ್ರ ಮಾಹಿತಿ ಪ್ರಕಾರ ವಿಜಯಪುರರದ ದಡಮತ್ತಿ ಹೋಬಳಿಯಲ್ಲಿ 7.1 ಡಿಗ್ರಿ ಸೆ. ನಷ್ಟು ತಾಪಮಾನ ದಾಖಲಾಗಿದೆ. ಇನ್ನು 2 ದಿನಗಳಲ್ಲಿ ಕರ್ನಾಟಕದ ದಕ್ಷಿಣ ಭಾಗದ ಆಂತರಿಕ ಪ್ರದೇಶಗಳಲ್ಲಿ ಬೆಚ್ಚಗಿನ ವಾತಾವರಣ ನಿರ್ಮಾಣವಾಗಲಿದೆ. ಈ ಭಾಗದಲ್ಲಿ ಇನ್ನೆರಡು ದಿನಗಳ ಕಾಲ ಮಂಜು ಕವಿದ ವಾತಾವರಣೆ ಮುಂದುವರೆಯಲಿದೆ ಎಂದು ತಿಳಿಸಿದೆ.

English summary
Bengaluru has a comfortable weather other than any south Indian big cities, this year minimum temperature recorded 15 degree celsius in last week of December.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X