• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನಿಂದ ತ್ರಿಪುರಾಕ್ಕೆ ತೆರಳಲಿದೆ ಶ್ರಮಿಕ್ ರೈಲು

|
Google Oneindia Kannada News

ಬೆಂಗಳೂರು, ಮೇ 8: ಬೆಂಗಳೂರಿನಿಂದ ತ್ರಿಪುರಾಕ್ಕೆ ಮತ್ತೊಂದು ಶ್ರಮಿಕ್ ರೈಲು ಇಂದು ತೆರಳಲಿದೆ. ಸದ್ಯ ಅರಮನೆ ಮೈದಾನದ ಬಳಿ ತ್ರಿಪುರ ನಿವಾಸಿಗಳು ಸೇರಿದ್ದಾರೆ.

ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ನೂರಾರು ಸಂಖ್ಯೆಯಲ್ಲಿ ಜಮಾವಣೆಯಾಗಿದ್ದು, ದಾಖಲೆಗಳ ಪರಿಶೀಲನೆ, ಸೇವಾ ಸಿಂಧು ಮೂಲಕ ನೋಂದಣಿ ಎಲ್ಲವೂ ಸಾಂಗವಾಗಿ ನಡೆಯುತ್ತಿದೆ.

ಕಾರ್ಮಿಕರು, ವಲಸಿಗರ ಪಾಲಿನ ಸಾರಥಿ ಶ್ರಮಿಕ ರೈಲುಕಾರ್ಮಿಕರು, ವಲಸಿಗರ ಪಾಲಿನ ಸಾರಥಿ ಶ್ರಮಿಕ ರೈಲು

ಸೇವಾ ಸಿಂಧು ಪೋರ್ಟಲ್ ನಲ್ಲಿ ನೊಂದಾಯಿತ ಪ್ರಯಾಣಿಕರಿಗಷ್ಟೆ ಅವಕಾಶ, ಕಾರ್ಮಿಕರ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭಾನುವಾರ (ಮೇ 10) ಸಂಜೆ 7 ಗಂಟೆಗೆ ಚಿಕ್ಕಬಾಣವಾರ ರೈಲು ನಿಲ್ದಾಣ ದಿಂದ ಶ್ರಮಿಕ ರೈಲು ಹೊರಡಲಿದೆ.

ಮೂರು ರೈಲುಗಳಲ್ಲಿ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬಿಹಾರಕ್ಕೆ ತೆರಳಲು 53 ಸಾವಿರ ವಲಸೆ ಕಾರ್ಮಿಕರು ಹೆಸರು ನೋಂದಣಿ ಮಾಡಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ.

ನಮ್ಮ ಮೆಟ್ರೋ, ವಿವಿಧ ಅಪಾರ್ಟ್‌ಮೆಂಟ್, ಬಿಬಿಎಂಪಿಯ ಹಲವು ಕಾಮಗಾರಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರೈಲುಗಳನ್ನು ಬುಕ್ ಮಾಡಿ ಇವರನ್ನು ವಾಪಸ್ ಕಳಿಸಿದರೆ ಬೆಂಗಳೂರು ನಗರದಲ್ಲಿ ನಿರ್ಮಾಣ ಚಟುವಟಿಕೆಗೆ ಕಾರ್ಮಿಕರ ಕೊರತೆ ಎದುರಾಗಲಿದೆ.

ಶ್ರಮಿಕ ಟ್ರೈನ್ ಗಳು ನಾನ್ ಸ್ಟಾಪ್ ರೈಲುಗಳಾಗಿದ್ದು..ಒಂದೇ ಸ್ಥಳದಲ್ಲಿ ನಿಲ್ಲುತ್ತವೆ. 22 ಕೋಚ್ ಗಳಿರಲಿದ್ದು, ಪ್ರತಿ ಕೋಚ್ ನಲ್ಲಿ 54 ಪ್ರಯಾಣಿಕರಿಗೆ ಪ್ರಯಾಣದ ಅವಕಾಶವಿರುತ್ತದೆ. ಯಾವುದೇ ಸ್ಟೇಷನ್ ನಡುವೆ ನಿಲುಗಡೆ ಇರುವುದಿಲ್ಲ.

English summary
Bengaluru to Tripura Shramik Train schduled to run from Banavara station on May 10.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X