ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಕಸ ಬೆಳಗಾವಿಗೆ, ಅಚ್ಚರಿಯಾದರೂ ಸತ್ಯ

|
Google Oneindia Kannada News

ಬೆಂಗಳೂರು, ಜುಲೈ 09 : ರಾಜಧಾನಿ ಬೆಂಗಳೂರಿನಲ್ಲಿ ಉತ್ಪಾದನೆಯಾಗುವ ಕಸವನ್ನು ಸುಮಾರು 500 ಕಿ.ಮೀ.ದೂರದ ಬೆಳಗಾವಿಗೆ ಕಳಿಸಲಾಗುತ್ತದೆ. ಅಚ್ಚರಿಯಾದರೂ ಇದು ಸತ್ಯ, ಬಿಬಿಎಂಪಿ ಈ ಕುರಿತು ಒಂದು ಹಂತದ ಮಾತುಕತೆ ಮುಕ್ತಾಯಗೊಳಿಸಿದೆ.

ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 4,500 ಟನ್ ಘನ ತ್ಯಾಜ್ಯ ಸಂಗ್ರಹವಾಗುತ್ತದೆ. ಇದರ ಪೈಕಿ 1,500 ಟನ್ ತ್ಯಾಜ್ಯವನ್ನು ಬೆಳಗಾವಿಗೆ ಕಳಿಸಲಾಗುತ್ತದೆ. ಪ್ರತಿ ಟನ್‌ಗೆ ಕಸವನ್ನು ಸಾಗಣೆ ಮಾಡಲು ಸುಮಾರು 2 ಸಾವಿರ ರೂ. ಖರ್ಚಾಗಲಿದೆ ಎಂದು ಅಂದಾಜಿಸಲಾಗಿದೆ.

ಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆದರೆ ತೆರಬೇಕಾಗುತ್ತದೆ ಭಾರಿ ದಂಡಬೆಂಗಳೂರು: ಎಲ್ಲೆಂದರಲ್ಲಿ ಕಸ ಎಸೆದರೆ ತೆರಬೇಕಾಗುತ್ತದೆ ಭಾರಿ ದಂಡ

ಬಿಬಿಎಂಪಿ ಬೆಂಗಳೂರಿನ ಕಸವನ್ನು ಬೆಳಗಾವಿಗೆ ಕಳಿಸುವ ಕುರಿತು ವರದಿ ನೀಡುವಂತೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮನವಿ ಮಾಡಿತ್ತು. ಬೆಳಗಾವಿಯಲ್ಲಿರುವ ಸಕ್ಕರೆ ಕಾರ್ಖನೆಗಳು 1500 ಟನ್ ಘನತ್ಯಾಜ್ಯವನ್ನು ಪಡೆಯಲು ಆಸಕ್ತಿ ತೋರಿಸಿವೆ.

ಸೆ.1ರಿಂದ ಬೆಂಗಳೂರಲ್ಲಿ ಮನೆಗಳಿಂದ ಹಸಿ ಕಸ ಮಾತ್ರ ಸಂಗ್ರಹಸೆ.1ರಿಂದ ಬೆಂಗಳೂರಲ್ಲಿ ಮನೆಗಳಿಂದ ಹಸಿ ಕಸ ಮಾತ್ರ ಸಂಗ್ರಹ

Bengaluru to send solid waste to Belagavi

ಒಣ ಘನ ತ್ಯಾಜ್ಯವನ್ನು ಬಿಬಿಎಂಪಿಯಿಂದ ಪಡೆಯಲಿರುವ ಬೆಳಗಾವಿಯ ಸಕ್ಕರೆ ಕಾರ್ಖನೆಗಳು ಅವುಗಳನ್ನು ಉರುವಲಾಗಿ ಉಪಯೋಗ ಮಾಡಿಕೊಳ್ಳಲಿವೆ. ತ್ಯಾಜ್ಯ ಪಡೆಯುವ ಬಗ್ಗೆ ಬಿಬಿಎಂಪಿಗೆ ಕಾರ್ಖನೆಗಳು ಈಗಾಗಲೇ ಪ್ರಸ್ತಾವನೆಯನ್ನು ಸಲ್ಲಿಸಿವೆ.

ಸರ್ಕಾರಿ ಕಚೇರಿಗಳಲ್ಲಿ ಕಸ ಸಂಸ್ಕರಣೆ : ಬಿಬಿಎಂಪಿ ಶಿಫಾರಸುಸರ್ಕಾರಿ ಕಚೇರಿಗಳಲ್ಲಿ ಕಸ ಸಂಸ್ಕರಣೆ : ಬಿಬಿಎಂಪಿ ಶಿಫಾರಸು

1500 ಟನ್ ಒಣ ಘನ ತ್ಯಾಜ್ಯವನ್ನು ಬೆಳಗಾವಿಗೆ ಸಾಗಣೆ ಮಾಡಲು ಪ್ರತಿ ಟನ್‌ಗೆ ಸುಮಾರು 2 ಸಾವಿರ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಆದರೆ, ಬಿಬಿಎಂಪಿ ಯಾವುದೇ ಸಾಗಣೆ ವೆಚ್ಚವನ್ನು ನೀಡುವುದಿಲ್ಲ. ನಗರದ ರಸ್ತೆಗಳಲ್ಲಿ ಸಂಗ್ರಹವಾದ ಕಸವನ್ನು ಸಂಗ್ರಹಿಸಿ ನೀಡುತ್ತದೆ.

4 ಸಾವಿರ ಟನ್ ಕಸದಲ್ಲಿ 1500 ಟನ್ ಬೆಳಗಾವಿಗೆ ಕಳಿಸಿದರೆ ಉಳಿದ ಕಸವನ್ನು ನಗರದ ಹೊರವಲಯದ ಖಾಲಿ ಜಾಗಗಳಿಗೆ ಸಾಗಣೆ ಮಾಡಲಾಗುತ್ತದೆ. ಜಾಗಗಳನ್ನು ಗುರುತಿಸಲು ಈಗಾಗಲೇ ಬಿಬಿಎಂಪಿ ಟೆಂಡರ್ ಕರೆದಿದೆ.

English summary
Bengaluru to send solid waste to Belagavi. Sugar factories in Belagavi demand for 1,500 tonnes of mixed waste and they will use it as fuel in their boilers. Nearly 4,500 tonnes of solid waste produced in the city every day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X