ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : 5,938 ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 19 : ಬೆಂಗಳೂರು ನಗರದ 5,938 ಸ್ಥಳಗಳಲ್ಲಿ ಉಚಿತ ವೈ-ಫೈ ಸೌಲಭ್ಯ ಒದಗಿಸಲಾಗುತ್ತದೆ. ಬಿಬಿಎಂಪಿಯು ಈ ಸ್ಥಳಗಳನ್ನು ಗುರುತಿಸಿದ್ದು, ಒಂದು ತಿಂಗಳಿನಲ್ಲಿ ವೈ-ಫೈ ಸೌಲಭ್ಯ ಒದಗಿಸಲಾಗುತ್ತದೆ.

ಸಾರ್ವಜನಿಕ ಸ್ಥಳಗಳಲ್ಲಿ ಉಚಿತವಾಗಿ ವೈ-ಫೈ ಸೌಲಭ್ಯ ಒದಗಿಸಲು ಬಿಬಿಎಂಪಿ ಮುಂದಾಗಿದ್ದು, ಸ್ಥಳಗಳನ್ನು ಗುರುತಿಸಲಾಗಿದೆ. ಆದರೆ, ಸೌಲಭ್ಯ ನೀಡುವ ಕಂಪನಿಗಳು ಪಾವತಿ ಮಾಡಬೇಕಿರುವ ಶುಲ್ಕದ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ.

ಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈಬೆಂಗಳೂರಿನ 6 ಸಾವಿರ ಸ್ಥಳಗಳಲ್ಲಿ ಬಿಬಿಎಂಪಿಯಿಂದ ಉಚಿತ ವೈಫೈ

ಇಂಡಸ್ ಟವರ್, ಎಸಿಟಿ, ಡಿವಿಒಐಎಸ್ ಹಾಗೂ ಹನಿಕೋಂಬ್ ಕಂಪನಿಗಳ ಜೊತೆ ಉಚಿತ ವೈ-ಫೈ ಸೌಲಭ್ಯ ಒದಗಿಸುವ ಕುರಿತು ಚರ್ಚೆ ನಡೆದಿದೆ. ಬಿಬಿಎಂಪಿ ಗುರುತಿಸಿದ ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಲು ಕಂಪನಿಗಳು ಒಪ್ಪಿಗೆ ಸೂಚಿಸಿವೆ.

6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ6 ತಿಂಗಳಿನಲ್ಲಿ ಬೆಂಗಳೂರು ತುಂಬಾ ಉಚಿತ ವೈ-ಫೈ

Bengaluru to get free wifi service in 5938 place

ವೈ-ಫೈ ಸೌಲಭ್ಯ ಒದಗಿಸುತ್ತಿರುವ ತಮಗೆ ವಿಧಿಸುತ್ತಿರುವ ಶುಲ್ಕ ಹೆಚ್ಚಾಗಿದೆ ಎಂದು ಕಂಪನಿಗಳು ಹೇಳಿವೆ. 2 ಚದರ ಅಡಿ ಜಾಗದಲ್ಲಿ ವೈ-ಫೈ ಬಾಕ್ಸ್ ಅಳವಡಿಸಲಾಗುತ್ತದೆ. ಇದಕ್ಕಾಗಿ 62,000 ರೂ. ಸಾಧನ ಮತ್ತು ಶೇ 18ರಷ್ಟು ಜಿಎಸ್‌ಟಿಯನ್ನು ಪಾವತಿ ಮಾಡಬೇಕು.

ದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆದಕ್ಷಿಣ ಕನ್ನಡದ ಕೆಲವು ಗ್ರಾಮಗಳಲ್ಲಿ ಸಿಗಲಿದೆ ಉಚಿತ ವೈಫೈ ಸೇವೆ

ಡಿವಿಒಎಸ್ ಹಾಗೂ ಹನಿಕೋಂಬ್ ಕಂಪನಿಗಳು 2516 ಸ್ಥಳಗಳಲ್ಲಿ ವೈ-ಫೈ ಸೌಲಭ್ಯ ಒದಗಿಸಲಿವೆ. ಎಸಿಟಿ 766 ಕಡೆ ಮತ್ತು 140 ಕಡೆ ಇಂಡಸ್ ಸಂಸ್ಥೆ ಸೌಲಭ್ಯವನ್ನು ನೀಡಲಿದೆ. ಶುಲ್ಕ ಹೆಚ್ಚಾಗಿದೆ, ಇದರ ಬದಲು ತಿಂಗಳಿಗೆ 500 ರೂ. ಶುಲ್ಕವನ್ನು ಪಾವತಿ ಮಾಡುವ ವ್ಯವಸ್ಥೆ ಮಾಡಬೇಕು ಎಂದು ಬಿಬಿಎಂಪಿಯನ್ನು ಒತ್ತಾಯಿಸಿವೆ.

ಇಂಡಸ್ ಕಂಪನಿ 60 ಕಡೆ ವೈ-ಫೈ ಬಾಕ್ಸ್ ಆಳವಡಿಕೆ ಮಾಡಿದೆ. ಆದರೆ, ನಿವಾಸಿಗಳು ಬಾಕ್ಸ್ ಆಳವಡಿಕೆ ಮಾಡಲು ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಬಿಬಿಎಂಪಿಯೇ 198 ವಾರ್ಡ್‌ಗಳಲ್ಲೂ ಸ್ಥಳ ಗುರುತಿಸಬೇಕು ಎಂದು ಕಂಪನಿಗಳು ಹೇಳಿವೆ.

30 ನಿಮಿಷ ಉಚಿತ : 5,938 ಸ್ಥಳಗಳಲ್ಲಿ ನೀಡು ವೈ-ಫೈ ಸೌಲಭ್ಯ ಮೊದಲ 30 ನಿಮಿಷ ಉಚಿತವಾಗಿರುತ್ತದೆ. ಬಳಿಕ ಶುಲ್ಕವನ್ನು ಪಾವತಿ ಮಾಡಬೇಕಿರುತ್ತದೆ.

English summary
Soon Bengaluru will get free wifi service in 5938 place's. The Bruhat Bengaluru Mahanagara Palike (BBMP) identified place's.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X