ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೇಂದ್ರದಿಂದ ಬೆಂಗಳೂರಿಗೆ 300 ಎಲೆಕ್ಟ್ರಿಕ್ ಬಸ್ ಕೊಡುಗೆ?

|
Google Oneindia Kannada News

ಬೆಂಗಳೂರು, ಆಗಸ್ಟ್ 14 : ಉದ್ಯಾನ ನಗರಿ ಬೆಂಗಳೂರಿನ ರಸ್ತೆಗಳಲ್ಲಿ ಎಲೆಕ್ಟ್ರಿಕ್ ಬಸ್‌ಗಳ ಸಂಚಾರ ಶೀಘ್ರದಲ್ಲಿಯೇ ಆರಂಭವಾಗಲಿದೆ. ಕೇಂದ್ರ ಸರ್ಕಾರ 5595 ಬಸ್‌ಗಳನ್ನು 64 ನಗರಗಳಿಗೆ ಪೂರೈಕೆ ಮಾಡುತ್ತಿದೆ.

ವಾಯು ಮಾಲಿನ್ಯ ತಡೆಯಲು ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಲು ತೀರ್ಮಾನಿಸಲಾಗಿದೆ. ದೇಶದ ಮಹಾನಗರಗಳಲ್ಲಿ ಶೀಘ್ರದಲ್ಲಿಯೇ ಬಸ್ ರಸ್ತೆಗೆ ಇಳಿಯಲಿದ್ದು, ಬೆಂಗಳೂರು ನಗರಕ್ಕೆ 300 ಬಸ್‌ಗಳು ಸಿಗಲಿವೆ.

ವಿದ್ಯಾರ್ಥಿಗಳಿಂದ ಬಿಎಂಟಿಸಿಗೆ ಹರಿದುಬಂದಿದ್ದು ಬರೋಬ್ಬರಿ 27 ಕೋಟಿವಿದ್ಯಾರ್ಥಿಗಳಿಂದ ಬಿಎಂಟಿಸಿಗೆ ಹರಿದುಬಂದಿದ್ದು ಬರೋಬ್ಬರಿ 27 ಕೋಟಿ

ಕರ್ನಾಟಕ ರಾಜ್ಯಕ್ಕೆ 400 ಬಸ್‌ಗಳು ಸಿಗಲಿವೆ. ಇವುಗಳಲ್ಲಿ 300 ಬಸ್ ಬೆಂಗಳೂರಿಗೆ. ಹುಬ್ಬಳ್ಳಿ-ಧಾರವಾಡಕ್ಕೆ 50, ಮೈಸೂರು ನಗರಕ್ಕೆ 50 ಬಸ್ ಸಿಗಲಿವೆ. ಸಾಮಾನ್ಯ ಬಸ್‌ಗಳಿಗಿಂತ ವಿಭಿನ್ನವಾದ ಇವು, ಸಂಪೂರ್ಣ ಪರಿಸರ ಸ್ನೇಹಿಯಾಗಿವೆ.

ವೋಲ್ವೊ ಬಸ್‌ ಸೇವೆ ನಗರಕ್ಕಿಲ್ಲ, ಹೊರವಲಯಕ್ಕೆ ಮಾತ್ರ, ಕಾರಣವೇನು?ವೋಲ್ವೊ ಬಸ್‌ ಸೇವೆ ನಗರಕ್ಕಿಲ್ಲ, ಹೊರವಲಯಕ್ಕೆ ಮಾತ್ರ, ಕಾರಣವೇನು?

Electric Bus

ಬೆಂಗಳೂರು ನಗರದಲ್ಲಿ ಪ್ರತಿದಿನ ಸುಮಾರು 6000 ಬಿಎಂಟಿಸಿ ಬಸ್‌ಗಳು ಸಂಚಾರ ನಡೆಸುತ್ತವೆ. ಈ ಬಸ್ ಹೊರಹಾಕುವ ಕಾರ್ಬನ್ ಅಂಶ ದೊಡ್ಡ ಪ್ರಮಾಣದ್ದು. ಆದ್ದರಿಂದ, ನಗರದಲ್ಲಿ ಎಲೆಕ್ಟ್ರಿಕ್ ಬಸ್ ಸಂಚಾರ ಆರಂಭಿಸಬೇಕು ಎಂದು ಬಿಎಂಟಿಸಿ ಉದ್ದೇಶಿಸಿತ್ತು.

ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!ಬಿಎಂಟಿಸಿಗೆ ಬಿಳಿಯಾನೆಯಾದ ವೋಲ್ವೊ ಬಸ್, ನಷ್ಟವೇ ಹೆಚ್ಚು!

ಬಿಎಂಟಿಸಿಯೇ ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲು ಮುಂದಾಗಿತ್ತು. ಆದರೆ, ಟೆಂಟರ್ ಪ್ರಕ್ರಿಯೆ, ದರದ ಹಿನ್ನಲೆಯಲ್ಲಿ ಈ ಯೋಜನೆ ಕಾರ್ಯ ರೂಪಕ್ಕೆ ಬಂದಿರಲಿಲ್ಲ. ಈಗ ಕೇಂದ್ರ ಸರ್ಕಾರ ಬಸ್ ನೀಡಲಿದೆ.

English summary
Soon Bengaluru will get 300 electric bus. Union government will allot 5595 bus for 64 city's of country. Mysuru and Hubballi-Dharwad will also get 50 buses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X