ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Power Cut: ಫೆ.26, 27ರಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ

|
Google Oneindia Kannada News

ಬೆಂಗಳೂರು, ಫೆಬ್ರವರಿ 26: ಬೆಂಗಳೂರು ಮಹಾನಗರದಲ್ಲಿ ಬೆಸ್ಕಾಂ ವಾರಾಂತ್ಯವೂ ಶಾಕ್ ನೀಡಿದೆ. ವಿದ್ಯುತ್ ಕೇಂದ್ರಗಳಲ್ಲಿ ತುರ್ತು ಕಾರ್ಯ ನಿರ್ವಹಣೆ ಕೈಗೆತ್ತಿಕೊಂಡಿರುವುದು ಮತ್ತು ಅಲ್ಲಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ದಿನವೂ ವಿದ್ಯುತ್ ವ್ಯತ್ಯಯ ಸಮಸ್ಯೆ ಬೆಂಗಳೂರಿಗರನ್ನು ಕಾಡುತ್ತಲಿದ್ದು, ವಿದ್ಯುತ್ ಕಡಿತ ಸಮಸ್ಯೆ ಮನೆಯಿಂದ ಕೆಲಸ ಮಾಡುತ್ತಿರುವವರಿಗೆ ಕೋಪ ತರಿಸುವಂಥ ಕೆಲಸವಾಗಿದೆ. ವಾರಾಂತ್ಯ ದಿನಗಳಾದ ಶನಿವಾರ (ಫೆಬ್ರವರಿ 26) ಮತ್ತು ಭಾನುವಾರ (ಫೆಬ್ರವರಿ 27) ದಂದು ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಆಗಲಿದೆ. ಬೆಂಗಳೂರಿನ ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯಗಳ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.

ಫೆ.26 ವಿದ್ಯುತ್ ಸಂಪರ್ಕ ಕಡಿತ ಪ್ರದೇಶಗಳು
ದಕ್ಷಿಣ ವಲಯ: ಶನಿವಾರ ಬೆಳಗ್ಗೆ 10ರಿಂದ ಸಂಜೆ 7 ಗಂಟೆಯವರೆಗೆ ಜಯನಗರ 4ನೇ ಬ್ಲಾಕ್ ಪೊಲೀಸ್ ಠಾಣೆ ಕೆ.ಆರ್. ರಸ್ತೆ, 8ನೇ ಬ್ಲಾಕ್ ಜಯನಗರ, 40ನೇ ಕ್ರಾಸ್, ರಿಚ್ಮಂಡ್ ಸರ್ಕಲ್, ಎಸ್.ಕೆ.ಲೇನ್, ರಂಗಪ್ಪ ಕ್ರಾಸ್, ಪಾಪಯ್ಯ ರಸ್ತೆ, ಮೂಡಲಪ್ಪ ರಸ್ತೆ, ಸುಶೀಲಾ ರಸ್ತೆ, ಚಿಕ್ಕಮಾವಲಿ, ವೆಂಕಟಪ್ಪ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶ, ಬಿಕಿಸಿಪುರ, ಮಾವು ತೋಟ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಕಾಶಿ ನಗರ ಕೆರೆ, ಇಸ್ರೋ ಲೇಔಟ್‌ನಲ್ಲಿ ಕರೆಂಟ್ ಇರುವುದಿಲ್ಲ.

Bengaluru To Face Power Cuts From February 26th And February 27th; Full Details

ಇನ್ನು ಕುಮಾರಸ್ವಾಮಿ ಲೇಔಟ್, ಪೈಪ್ ಲೈನ್ ರಸ್ತೆ, ಬಿಡಿಎ ಕಾಂಪ್ಲೆಕ್ಸ್, ಕಿಮ್ಸ್ ಕಾಲೇಜು, 7ನೇ ಕ್ರಾಸ್, 21ನೇ ಮುಖ್ಯ, 13ನೇ ಕ್ರಾಸ್, 14ನೇ ಕ್ರಾಸ್, ಆಹಾರ ದೇವರು ಆರ್.ಕೆ. ಲೇಔಟ್, ಪದ್ಮನಾಭನಗರ, ಮಾರುತಿ ನಗರ, ಹಳೆ ಮಡಿವಾಳ, ಡಾಲರ್ಸ್ ಕಾಲೋನಿ, ಮಾರತಳ್ಳಿ, ಕಾವೇರಿ ಲೇಔಟ್, ವಿನಾಯಕ ಲೇಔಟ್, ಬಾಲಾಜಿ ಲೇಔಟ್, ಚೌಡೇಶ್ವರಿ ದೇವಸ್ಥಾನ ರಸ್ತೆ, ತುಳಸಿ ಥಿಯೇಟರ್ ರಸ್ತೆಯಲ್ಲಿ ವಿದ್ಯುತ್ ಕಡಿತ.

ಉತ್ತರ ವಲಯ:
ಶನಿವಾರ ಬೆಳಗ್ಗೆ 10ರಿಂದ ಸಂಜೆ 7 ಮತ್ತು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೆಲೆಬ್ರಿಟಿ ಲೇಔಟ್, ದಡ್ಡತೊಗ್ಗರ್, ಕೆ.ಟಿ. ಪುರ, ಟಿಬಿ ಕ್ರಾಸ್, ಹೆಸರಘಟ್ಟ, ಬಿಜಿಎಸ್ ಕಾಲೇಜು, ಸಿಸಿಬಿಎಫ್, ಸಿಪಿಡಿಒ, ಕೆಎಂಎಫ್, ಸೆಂಟ್ರಲ್ ಪೌಲ್ಟ್ರಿ, ಡ್ಯಾನಿಶ್ ಫಾರ್ಮ್ ಭಾಗಗಳು ನೆಲಮಂಗಲ & ಕಾನಸಾವಾಡಿ ಒ & ಎಂ, ದೋಡಬಲೈಕೆರೆ, ಕೆಂಪಾಪುರ, ಲುಡುಗರ, ಸಿಲ್ವ್ಪುರಾ, ರಾಘವೇಂದ್ರಧಾಮ, ಕುಂಬಾರಹಳ್ಳಿ, ಪಾರ್ವತಮ್ಮ ಲೇಔಟ್, ನಾರಾಯಣ ಲೇಔಟ್, ಎಂ.ಎಸ್. ಪಾಳ್ಯ, ಏರ್ ಫೋರ್ಸ್ ರಸ್ತೆ, ಗಣೇಶ ಲೇಔಟ್, ಮದರ್ ತೆರೇಸಾ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Bengaluru To Face Power Cuts From February 26th And February 27th; Full Details

ಪಶ್ಚಿಮ ವಲಯ:
ಬೆಳಗ್ಗೆ 10:30 ರಿಂದ ಸಂಜೆ 7 ಗಂಟೆಯವರೆಗೆ ಬಸವೇಶ್ವರ ಲೇಔಟ್, ಸುಬ್ಬಣ್ಣ ಗಾರ್ಡನ್ "ನಂಜರಸಪ್ಪ ಲೇಔಟ್ ಸ್ಕೈಲೈನ್ BBMP ಪಾರ್ಕ್ ಹತ್ತಿರ ಬಾಪೂಜಿ ಎಚ್‌ಬಿಸಿಎಸ್ ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಗಂಗೊಂಡನಹಳ್ಳಿ, ಮೈಕೋ ಲೇಔಟ್, ಬಿಸಿಸಿ ಲೇಔಟ್‌ನಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಲಿದೆ.

ಕೆಎಚ್‌ಬಿ ಕಾಲೋನಿ, ಕಮಾನು ಸುತ್ತಮುತ್ತಲಿನ ಮತ್ತು ಸಿದ್ದಯ್ಯ ಪುರಾಣಿಕ್ ರಸ್ತೆ, 6ನೇ ಮುಖ್ಯ ಕೆಎಚ್‌ಬಿ ಕಾಲೋನಿ, ಕೆಎಚ್‌ಬಿ ಕಾಲೋನಿ 2ನೇ ಮುಖ್ಯ, 4ನೇ ಮುಖ್ಯ 3ನೇ A & 3ನೇ B ಕ್ರಾಸ್, ಗಣೇಶ ದೇವಸ್ಥಾನ, ಬಿಬಿಎಂಪಿ ಪಾರ್ಕ್ ಮತ್ತು GEMS ಶಾಲೆ ಸುತ್ತಮುತ್ತಲಿನ 2ನೇ ಮುಖ್ಯ, 1ನೇ ಮುಖ್ಯ, 3ನೇ ಮುಖ್ಯ ಮತ್ತು 4ನೇ ಮುಖ್ಯ ಮತ್ತು ಹಳೆಯ ಅಂಚೆ ಕಚೇರಿ ಮುಖ್ಯರಸ್ತೆ, ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ಕರೆಂಟ್ ಇರುವುದಿಲ್ಲ.

ಇಂಡಸ್ಟ್ರಿಯಲ್ ಟೌನ್ 4ನೇ ಮುಖ್ಯ, 4ನೇ ಕ್ರಾಸ್, 5ನೇ ಕ್ರಾಸ್ ಹೆಗ್ಗನಹಳ್ಳಿ, ವೃಷಭಾವತಿ ನಗರ, ಮಾರುತಿ ನಗರ, ಕೆಜಿಹೆಚ್ಎಸ್ ಲೇಔಟ್, ಹಳೆಯ ಹೊರ ವರ್ತುಲ ರಸ್ತೆ, ಬಿ.ಕೆ.ಎಂ.ಪಿ. ಲೇಔಟ್, ಬಿ.ಕೆ.ಎಂ.ಪಿ. ಜಯಲಕ್ಷ್ಮಮ್ಮ ಲೇಔಟ್, ಮೂಡಲಪಾಳ್ಯ ರಸ್ತೆ, ಡಿ ಗ್ರೂಪ್ ಲೇಔಟ್, ಹೊಸಹಳ್ಳಿ ರಸ್ತೆ, ತಮ್ಮನಾಯಕನಹಳ್ಳಿ, ಚಿಕ್ಕಹೊಸಹಳ್ಳಿ, ಚೂಡಹಳ್ಳಿ, ಕರಕಗಟ್ಟಾ, ಅರೇಹಳ್ಳಿ, ಜನತಾ ಕಾಲೋನಿ, ನಲ್ಲೈನ್ ​​ದೊಡ್ಡಿ, ಬಾಗ್ಲದೊಡ್ಡಿ, ಸುರಗಜಕ್ಕನಹಳ್ಳಿ, ಸೊಪ್ಪಹಳ್ಳಿ, ಆಡೂರ, ಕರಕಲಗಟ್ಟಾದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

Bengaluru To Face Power Cuts From February 26th And February 27th; Full Details

ಫೆ.27ರ ವಿದ್ಯುತ್ ವ್ಯತ್ಯಯದ ಪ್ರದೇಶಗಳು
ದಕ್ಷಿಣ ವಲಯ: ಭಾನುವಾರ ಬೆಳಗ್ಗೆ 10 ರಿಂದ ಸಂಜೆ 7 ಗಂಟೆಯವರೆಗೆ ಮತ್ತು ಬೆಳಗ್ಗೆ 11ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜೆಸಿ ಇಂಡಸ್ಟ್ರಿಯಲ್ ಲೇಔಟ್, ಗ್ರೀನ್ ಹೌಸ್ ಲೇಔಟ್, ದೊಡ್ಡತೋಗೂರುನಲ್ಲಿ ವಿದ್ಯುತ್ ಕಡಿತ.

ಪೂರ್ವ ವಲಯ:
ಬೆಳಗ್ಗೆ 10 ರಿಂದ ಸಂಜೆ 7 ಮತ್ತು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ, ಪೈ ಲೇಔಟ್, ಬ್ರಿಲಿಯಂಟ್ ಸ್ಕೂಲ್ ಹತ್ತಿರ, ಕೆಜಿ ಪುರ ಮುಖ್ಯ ರಸ್ತೆ, 6ನೇ ಕ್ರಾಸ್, 8ನೇ ಕ್ರಾಸ್, 13ನೇ ಮುಖ್ಯ, 15ನೇ ಮುಖ್ಯ, NAL ಕಾಂಪೌಂಡ್ ಮತ್ತು ವೇಣುಗೋಪಾಲ್ TC, ಪ್ರಶಾಂತ್ ಲೇಔಟ್, ಉಪಕಾರ್ ಲೇಔಟ್, ಪೃಥ್ವಿ ಲೇಔಟ್, ನಾಯ್ಡು ಲೇಔಟ್, ECC ರಸ್ತೆ, ಒಳ ವೃತ್ತ, ಕರುಮಾರಿಯಪ್ಪ ದೇವಸ್ಥಾನದ ಬೀದಿ, ಭುವನೇಶ್ವರಿ ರಸ್ತೆ, ಭೈರಪ್ಪ ಲೇಔಟ್, ವಿನಾಯಕ ಲೇಔಟ್, ರುಸ್ತುಮ್ಜಿ ಲೇಔಟ್, ಅಂಬೇಡ್ಕರ್ ನಗರ ಗುಟ್ಟಾ, ವೈಟ್‌ಫೀಲ್ಡ್ ಮುಖ್ಯ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯ:
ಭಾನುವಾರ ಬೆಳಗ್ಗೆ 10:30 ರಿಂದ ಸಂಜೆ 7 ಗಂಟೆಯವರೆಗೆ ಬಸವೇಶ್ವರ ಲೇಔಟ್, ಸುಬ್ಬಣ್ಣ ಗಾರ್ಡನ್, ನಂಜರಸಪ್ಪ ಲೇಔಟ್, ಸ್ಕೈಲೈನ್ BBMP ಪಾರ್ಕ್ ಹತ್ತಿರ, ಬಾಪೂಜಿ HBCS ಲೇಔಟ್, ಕೆನರಾ ಬ್ಯಾಂಕ್ ಕಾಲೋನಿ, ಗಂಗೊಂಡನಹಳ್ಳಿ, ಮೈಕೋ ಲೇಔಟ್, ಬಿಸಿಸಿ ಲೇಔಟ್, ವಾಟರ್ ಟ್ಯಾಂಕ್ ಹಿಂದೆ, ಗಂಗೊಂಡನಹಳ್ಳಿ 6ನೇ ಮುಖ್ಯರಸ್ತೆ, ಗಂಗೊಂಡನಹಳ್ಳಿಯ ಮುಖ್ಯ ರಸ್ತೆ, ಗಂಗೊಂಡನಹಳ್ಳಿ 6ನೇ ಮುಖ್ಯರಸ್ತೆ. 3ನೇ A & 3ನೇ B ಕ್ರಾಸ್, ಗಣೇಶ ದೇವಸ್ಥಾನ, ಬಿಬಿಎಂಪಿ ಪಾರ್ಕ್ ಮತ್ತು GEMS ಶಾಲೆ ಸುತ್ತಮುತ್ತ 2ನೇ ಮುಖ್ಯ, 1ನೇ ಮುಖ್ಯ, 3ನೇ ಮುಖ್ಯ ಮತ್ತು 4ನೇ ಮುಖ್ಯ ಮತ್ತು ಹಳೆಯ ಅಂಚೆ ಕಛೇರಿ 1ನೇ ಮುಖ್ಯರಸ್ತೆ, 2ನೇ ನಿಮಿಷದ ರಸ್ತೆ ಕೆಎಚ್‌ಬಿ ಕಾಲೋನಿ ಮತ್ತು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಸುತ್ತಮುತ್ತ ವಿದ್ಯುತ್ ಸಮಸ್ಯೆ ತಲೆದೋರಲಿದ್ದು, ಜನರಿಗೆ ಬೆಸ್ಕಾಮ ಸಹಕರಿಸುವಂತೆ ಮನವಿ ಮಾಡಿದೆ.

Recommended Video

ಸ್ವಾತಂತ್ರ್ಯ ರಕ್ಷಣೆಗಾಗಿ ರಷ್ಯಾ ವಿರುದ್ಧ ಯುದ್ಧಮಾಡಲು ರೆಡಿಯಾದ ಉಕ್ರೇನ್ ಅಧ್ಯಕ್ಷ | Oneindia Kannada

ಬೆಂಗಳೂರಿನ ಜನರಿಗೆ ವಿದ್ಯುತ್ ಕಡಿತ ಸಮಸ್ಯೆ ಹೊಸದಲ್ಲ. ಕಳೆದ ಹಲವಾರು ತಿಂಗಳಿನಿಂದ, ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತಲೆದೋರುತ್ತಿದ್ದು, ಜನರಿಗೆ ಕಷ್ಟವಾಗುತ್ತಿದೆ. ಅದರಲ್ಲೂ ಕೊರೊನಾ ಕಾರಣದಿಂದ ಹೆಚ್ಚಿನ ಜನರು ಮನೆಯಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ (ವರ್ಕ್ ಫ್ರಂ ಹೋಮ್) ಈ ವಿದ್ಯುತ್ ಸಮಸ್ಯೆ ಅವರಿಗೆ ಹೆಚ್ಚಿನ ತೊಂದರೆ ಮಾಡುತ್ತದೆ.

ದಿನದಲ್ಲಿ ಒಂದೆರೆಡು ಗಂಟೆಗಳಾದರೆ ಅಷ್ಟೊಂದು ಕಷ್ಟವೆನಿಸದು. ಆದರೆ 5 ಗಂಟೆಗಳಿಗಿಂತ ಹೆಚ್ಚು ವಿದ್ಯುತ್ ಇಲ್ಲದೆ ಜನರು ಪರದಾಡುವಂತಾಗುತ್ತದೆ. ಅಲ್ಲದೇ ಕೇವಲ ಒಂದು ದಿನ ಮಾತ್ರವಾಗಿದ್ದರೂ ಹೇಗೋ ಸಾಧ್ಯವಿತ್ತು. ಆದರೆ ಕಳೆದ ಕೆಲವು ತಿಗಳುಗಳಿಂದ ವಿದ್ಯುತ್ ಕಡಿತ ಸಮಸ್ಯೆಯಾಗಿದ್ದು, ಬೆಸ್ಕಾಂನ ಈ ನಡೆಗೆ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

English summary
The Bengaluru Electricity Supply Company Limited (BESCOM) has announced that several areas in Bengaluru city will face interruptions in power supply On February 26th And February 27th.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X