ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Power Cut: ಬೆಂಗಳೂರಿನ ಈ ಪ್ರದೇಶಗಳಲ್ಲಿ ಫೆ.14ರಿಂದ 16ರವರೆಗೆ ವಿದ್ಯುತ್ ಕಡಿತ

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳ ಹಿಂದೆಯಷ್ಟೇ ವಿದ್ಯುತ್‌ ಕಡಿತದ ಬಗ್ಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಮಾಹಿತಿ ನೀಡಿತ್ತು. ಈಗ ಮತ್ತೆ ಬೆಂಗಳೂರಿನ ಪ್ರಮುಖ ಪ್ರದೇಶಗಳಲ್ಲಿ ವಿದ್ಯುತ್‌ ಕಡಿತವಾಗಲಿರುವ ಬಗ್ಗೆ ಬೆಸ್ಕಾಂ ತಿಳಿಸಿದೆ.

ಬೆಳಗಿನ ವಿಪರೀತ ಚಳಿ ಹಾಗೂ ಮಧ್ಯಾಹ್ನದ ಬಿರುಬಿಸಿಲಿಗೆ ಹೈರಾಣಾಗಿ ಹೋಗಿದ್ದಾರೆ. ಇದರ ನಡುವೆ ನಗರದಲ್ಲಿ ಹಲವು ತಿಂಗಳುಗಳಿಂದ ನಿರಂತರವಾಗಿ ಕಾಮಗಾರಿಗಳ ಹೆಸರಿನಲ್ಲಿ ಬೆಸ್ಕಾಂ ವಿದ್ಯುತ್ ಸಂಪರ್ಕ ಕಡಿತ ಮಾಡುತ್ತಿದೆ. ಈಗಾಗಲೇ ಫೆಬ್ರವರಿ 7(ಸೋಮವಾರ) ಮತ್ತು ಫೆಬ್ರವರಿ 8(ಮಂಗಳವಾರ)ರಂದು ಬೆಂಗಳೂರಿನಾದ್ಯಂತ ಹಲವಾರು ಪ್ರದೇಶಗಳು ವಿದ್ಯುತ್ ವ್ಯತ್ಯಯವನ್ನು ಎದುರಿಸಿದೆ. ಮತ್ತೆ ಫೆ.10, 11ರಂದು ಈ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಿದೆ.

 ಬೆಂಗಳೂರು: ಫೆ.10, 11ರಂದು ಈ ನಗರಗಳಲ್ಲಿ ವಿದ್ಯುತ್ ವ್ಯತ್ಯಯ ಬೆಂಗಳೂರು: ಫೆ.10, 11ರಂದು ಈ ನಗರಗಳಲ್ಲಿ ವಿದ್ಯುತ್ ವ್ಯತ್ಯಯ

ಈಗ ಮತ್ತೆ ಬೆಂಗಳೂರಿನಲ್ಲಿ ಫೆಬ್ರವರಿ 14 ರಿಂದ 16 ರವರೆಗೆ ವಿದ್ಯುತ್ ಕಡಿತವಾಗಲಿದೆ. ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ನಿರ್ವಹಣೆ ಮತ್ತು ಇತರ ಉನ್ನತೀಕರಣ ಕಾರ್ಯಗಳಿಂದಾಗಿ ವಿದ್ಯುತ್ ಕಡಿತ ಉಂಟಾಗುತ್ತದೆ. ಹೀಗಾಗಿ ನಗರದ ಯಾವ ಪ್ರದೇಶದಲ್ಲಿ ವಿದ್ಯುತ್ ಸಂಪರ್ಕದಲ್ಲಿ ವ್ಯತ್ಯಯ ಇರಲಿದೆ ಎಂಬ ಮಾಹಿತಿ ಇಲ್ಲಿದೆ.

ಫೆಬ್ರವರಿ 14

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿನಾಯಕನಗರ, ವಿಲ್ಸನ್ ಗಾರ್ಡನ್, ಜಾರಗನಹಳ್ಳಿ, ವೈವಿ ಅಣ್ಣಯ್ಯ ರಸ್ತೆ, ಬಿಕಾಸಿಪುರ, ಪ್ರತಿಮಾ ಇಂಡಸ್ಟ್ರಿಯಲ್ ಲೇಔಟ್, ಇಸ್ರೋ ಲೇಔಟ್, ಕುಮಾರಸ್ವಾಮಿ ಲೇಔಟ್, ವಸಂತ ವಲ್ಲಬ ನಗರ, ಕುವೆಂಪು ನಗರ ಮುಖ್ಯರಸ್ತೆ, ವಸಂತಪುರ, ಜೆಪಿ ನಗರ 1ನೇ ಹಂತ, ಶಾಕಾಂಬರಿ ನಗರ, ಪುಟ್ಟೇನಹಳ್ಳಿ ಪುಟ್ಟೇನಹಳ್ಳಿ ಮುಖ್ಯರಸ್ತೆ, ಬ್ಯಾಂಕ್ ಆಫ್ ಬರೋಡಾ ಕಾಲೋನಿ, ಚುಂಚಘಟ್ಟ ಗ್ರಾಮ, ಸುಪ್ರಜಾ ನಗರ, ಗಣಪತಿ ಪುರ, ಓಲ್ಡ್ ಬ್ಯಾಂಕ್ ಕಾಲೋನಿ, ಟೀಚರ್ಸ್ ಕಾಲೋನಿ, ಬೀರೇಶ್ವರ ನಗರ, ಗಣಪತಿಪುರ, ಕೋಣನಕುಂಟೆ ಕೈಗಾರಿಕಾ ಪ್ರದೇಶ, ಈಶ್ವರ ಲೇಔಟ್, ಲಕ್ಷ್ಮೀ ನಗರ, ಶಿವಶಕ್ತಿ ನಗರ, ದೊಡ್ಮನೆ ಕೈಗಾರಿಕಾ ಪ್ರದೇಶ, ಭವಾನಿ ನಗರ, ಬನಶಂಕರಿ 2ನೇ ಹಂತ, ಕದಿರೇನಹಳ್ಳಿ, ಕಿಮ್ಸ್ ಕಾಲೇಜು ರಸ್ತೆ, ಜೆ.ಪಿ.ನಗರ 2ನೇ ಹಂತ, ಜೆ.ಪಿ.ನಗರ 3ನೇ ಹಂತ, ಜೆ.ಪಿ.ನಗರ 4ನೇ ಹಂತ, ಜೆ.ಪಿ.ನಗರ 5ನೇ ಹಂತ, ರಾಮಾಂಜನೇಯ ನಗರ, ಗುರಪನಪಾಳ್ಯ, ಚಿನ್ನಪ್ಪನಗರ, ಮಾರತಹಳ್ಳಿ, ವಸಂತ ವಲ್ಲಭ ನಗರ, ನೃಪತುಂಗ ನಗರ, ಸಂತೃಪ್ತಿ ನಗರ, ಬಿಡಿಎ 9ನೇ ಹಂತ, ಬಿಡಿಎ 1ನೇ ಹಂತ ಮತ್ತು 2ನೇ ಹಂತದಲ್ಲಿ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪ್ರಕಾಶನಗರ, ಗಾಯತ್ರಿನಗರ, ರಾಮಮೋಹನಪುರ, ವೈಲೈಕಾವಲ್‌, ಮತ್ತಿಕೆರೆ ಮುಖ್ಯರಸ್ತೆ, ಎಸ್‌ಬಿಎಂ ಕಾಲೋನಿ, ಮತ್ತಿಕೆರೆ ಎಕ್ಸ್ಟೆಂಷನ್‌, ಯಶವಂತಪುರ 1ನೇ ಮುಖ್ಯರಸ್ತೆ, ಅಂಬೇಡ್ಕರ್ ನಗರ, ಕುವೆಂಪು ನಗರ, ಕೊಡಿಗೇಹಳ್ಳಿ, ಕೊಡಿಗೇಹಳ್ಳಿ, ತಿಂಡ್ಲು ಮುಖ್ಯರಸ್ತೆ, ರಾಘವೇಂದ್ರ ಕಾಲೋನಿ, ಹೆಗಡೆ ನಗರ, ಪುಟ್ಟೇನಹಳ್ಳಿ, ಕೆಎಚ್‌ಬಿ ಕ್ವಾರ್ಟರ್ಸ್, ಕೈಗಾರಿಕಾ ಪ್ರದೇಶ ಪೀಣ್ಯ 1ನೇ ಹಂತ, ಕುರುಬರಹಳ್ಳಿ ಬಸ್ ನಿಲ್ದಾಣ ಮತ್ತು ಜೆ.ಸಿ.ನಗರದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಪೀಡಿತ ಪ್ರದೇಶಗಳಲ್ಲಿ ನಾಗವಾರ ಪಾಳ್ಯ, ಕಸ್ತೂರಿ ನಗರ, ಎ ನಾರಾಯಣಪುರ, ಟ್ಯಾನರಿ ರಸ್ತೆ, ಎಚ್‌ಬಿಆರ್ ಲೇಔಟ್ 3ನೇ ಬ್ಲಾಕ್, ವಿಎಚ್‌ಬಿಸಿಎಸ್ ಲೇಔಟ್ ಮತ್ತು ಕೆಆರ್ ಪುರಂ ಮಾರ್ಕೆಟ್‌ನಲ್ಲಿ ವ್ಯತ್ಯಯವಾಗಲಿದೆ.

ಪಶ್ಚಿಮ ವಲಯದಲ್ಲಿ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸರಸ್ವತಿ ನಗರ, ಮೂಡಲಪಾಳ್ಯ, ಗಂಗೊಂಡನಹಳ್ಳಿ, ಬಸವೇಶ್ವರನಗರ, ಭೋವಿ ಕಾಲೋನಿ, ಎನ್‌ಎಚ್‌ಸಿಎಸ್ ಲೇಔಟ್, ಟೀಚರ್ಸ್ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಕೆಬ್ಬೇಹಳ್ಳಿ, ಅಮರಜ್ಯೋತಿ ನಗರ, ಶ್ರೀನಗರ, ರಂಗನಾಥ ಕಾಲೋನಿ, ಕೋಣೇಶ್ವರಹಳ್ಳಿ, ಉತ್ತರನಹಳ್ಳಿ, ರೋಡ್‌ನಗರ, ಕೋಣೇಶ್ವರಹಳ್ಳಿ, ಉತ್ತರನಹಳ್ಳಿ, ರೋಡ್‌ಹಳ್ಳಿ , ಭವಾನಿ ನಗರ, ಕೆಂಗೇರಿ ಮುಖ್ಯ ರಸ್ತೆ, ಬಿಡಿಎ ಪ್ರದೇಶ ಬ್ಲಾಕ್ -1, ಭುವನೇಶ್ವರ ನಗರ, ದೊಡ್ಡ ಬಸ್ತಿ ಮುಖ್ಯ ರಸ್ತೆ ಮತ್ತು ಭವಾನಿನಗರ ವ್ಯತ್ಯಯವಾಗಲಿದೆ.

ಫೆಬ್ರವರಿ 15

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರ, ಕುಮಾರಸ್ವಾಮಿ ಲೇಔಟ್, ಟೀಚರ್ಸ್ ಕಾಲೋನಿ, ಗೌಡನಪಾಳ್ಯ, ವಸಂತ ವಲ್ಲಬ ನಗರ, ಶಾರದ ನಗರ, ಬಿಡಿಎ ಕಾಂಪ್ಲೆಕ್ಸ್, ಕಿಮ್ಸ್ ಕಾಲೇಜು, ಬನಶಂಕರಿ 2ನೇ ಹಂತ, ಕಾವೇರಿನಗರ, ಆನೆಪಾಳ್ಯ, ನೀಲಸಂದ್ರ, ಚಲ್ಲಘಟ್ಟ, ಜೈ ಭೀಮಾ ನಗರ, ಹಳೆ ಮಡಿವಾಳ, ಪಾನಾಥ ಮಡಿವಾಳ ರಸ್ತೆ, ಗಾಂಧಿನಗರ ರಸ್ತೆ, ಐಟಿಪಿಎಲ್ ಮುಖ್ಯರಸ್ತೆ, ದೊಡ್ಡ ನೆಕುಂದಿ, ವೀವರ್ಸ್ ಕಾಲೋನಿ, 5ನೇ ಬ್ಲಾಕ್ ಬಿಡಿಎ ಮತ್ತು ದೊಡ್ಡನಾಗಮಂಗಲದಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನಾಗಪ್ಪ ಬ್ಲಾಕ್, ವೈಯಾಲೈಕಾವಲ್, ನ್ಯೂ ಬಿಇಎಲ್ ರಸ್ತೆ, ಜೆಪಿ ಪಾರ್ಕ್, ಎಚ್‌ಎಂಟಿ ಲೇಔಟ್, ಕಾಂಶೀರಾಮ್‌ ನಗರ, ತಿಂಡ್ಲು ಮುಖ್ಯರಸ್ತೆ, ಹೆಸರಘಟ್ಟ ರಸ್ತೆ, ಕೊಡಿಗೇಹಳ್ಳಿ, ಸಂತೋಷನಗರ, ವೀರಸಾಗರ, ವಿದ್ಯಾರಣ್ಯಪುರ, ಹೆಗಡೆ ನಗರ, ಮಾರಸಂದ್ರ, ನೆಲುಕುಂಟೆ, ಅಕ್ಕೆಹಳ್ಳಿ, ಹನಿೂರು, ಹನಿೂರು, ಚಳ್ಳಳ್ಳಿ, ಕರ್ಲಾಪುರ ಪಾಳ್ಯ, ಶ್ರೀರಾಮನಹಳ್ಳಿ, ಕೆಎಚ್‌ಬಿ ಕಾಲೋನಿ, ಬಾಗಲೂರು ಮುಖ್ಯರಸ್ತೆ, ಜಕ್ಕೂರು ಮುಖ್ಯರಸ್ತೆ, ಕಾವೇರಿ ನಗರ, ಭುವನೇಶ್ವರಿ ನಗರ, ಕನಕನಗರ, ಸಂತೋಷನಗರ, ಶೆಟ್ಟಿಹಳ್ಳಿ, ಮಲ್ಲಸಂದ್ರ, ಪ್ರಶಾಂತ್ ನಗರ, ವಿಎಚ್‌ಬಿಸಿಎಸ್ ಲೇಔಟ್, ಬಾಲಸುಬ್ರಹ್ಮಣ್ಯ ದೇವಸ್ಥಾನ, ಶಂಕರಮಠದಿಂದ ಕುರುಬರಹಳ್ಳಿ ರಸ್ತೆಯಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಕಸ್ತೂರಿ ನಗರ, ಉದಯನಗರ, ಸ್ವಾಮಿ ವಿವೇಕಾನಂದ ರಸ್ತೆ, ದೊಮ್ಮಲೂರು ಗ್ರಾಮ, ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು, ಜಯಮಹಲ್ ವಿಸ್ತರಣೆ, ವಿವೇಕಾನಂದ ನಗರ, ಕೆ ಚನ್ನಸಂದ್ರ, ಗೆದ್ದಲಹಳ್ಳಿ, ಗುಂಜೂರ ಮತ್ತು ಚನ್ನಸದ್ರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ. ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರದ ಕೆಲವು ಭಾಗಗಳು, ಜಡ್ಜಸ್ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಎನ್‌ಎಚ್‌ಸಿಎಸ್ ಲೇಔಟ್, ಟೀಚರ್ಸ್ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಕೆಬ್ಬೇಹಳ್ಳಿ, ಬಾಲಜ್ಯೋತಿ ನಗರ, ಟಿಎಚ್‌ಇಎಲ್‌ಜಿ ಪಾಲಜ್ಯೋತಿ ರಸ್ತೆ ಸೇರಿದಂತೆ ಮಾರೇನ ಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರದ ಭಾಗಗಳು, ನ್ಯಾಯಾಧೀಶರ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಎನ್‌ಎಚ್‌ಸಿಎಸ್ ಲೇಔಟ್, ಟೀಚರ್ಸ್ ಕಾಲೋನಿ, ಜೆ.ಸಿ.ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಕೆಬ್ಬೇಹಳ್ಳಿ, ಅಮರಜ್ಯೋತಿ ನಗರ, ಬಿ.ಎಚ್.ಇ.ಎಲ್.ಪಾಳ್ಯ ರಸ್ತೆ, ಟಿ.ಜಿ.ಇ.ಎಲ್. ಉಳ್ಳಾಲ ನಗರ, ಉತ್ತರಹಳ್ಳಿ ರಸ್ತೆ, ಕೋಡಿಪಾಳ್ಯ, ಅನ್ನಪೂರ್ಣೇಶ್ವರಿ ಲೇಔಟ್, ಕುವೆಂಪು ಮುಖ್ಯರಸ್ತೆ, ಗಂಗಾನಗರ, ಬಿಇಎಲ್ 1ನೇ ಹಂತ, ಬಿಇಎಲ್ 2ನೇ ಹಂತ, ಅಂಬೇಡ್ಕರ್‌ನಗರ ಮತ್ತು ಬಿಡಿಎ ಕಾಲೋನಿಯಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಫೆಬ್ರವರಿ 16

ಬೆಂಗಳೂರಿನ ದಕ್ಷಿಣ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಬಿಜಿ ರಸ್ತೆ, ಸಿಂಧಿ ಆಸ್ಪತ್ರೆ, ಸಿದ್ದಯ್ಯ ರಸ್ತೆ, ಲಾಲ್‌ಬಾಗ್ ರಸ್ತೆ, ಸುಧಾಮನಗರ, ಶಾಕಾಂಬರಿ ನಗರ, ಸಾರಕ್ಕಿ ಮಾರುಕಟ್ಟೆ, ಜರಗನಹಳ್ಳಿ, ಕೆಆರ್ ರಸ್ತೆ, ಕಿಮ್ಸ್ ಕಾಲೇಜು ರಸ್ತೆ, ಮಾರ್ಥಾಸ್ ಆಸ್ಪತ್ರೆ ರಸ್ತೆ, ಉತ್ತರಹಳ್ಳಿ ವೃತ್ತ, ಈಜಿಪುರ, ಚಿಕ್ಕ ಆಡುಗೋಡಿ, ಬೃಂದಾವನ ನಗರ, ಪಾಣತ್ತೂರು ಮುಖ್ಯ ರಸ್ತೆ, ಕುಂದಲಹಳ್ಳಿ ಗ್ರಾಮ, ವರ್ತೂರು ರಸ್ತೆ, ಮಾರತಹಳ್ಳಿ, ಆನಂದ ನಗರ, ಸಂತೃಪ್ತಿ ನಗರ, ಸೇವಾಶ್ರಮ ನಗರ, ಕಾಳೇನ ಅಗ್ರಹಾರ ಮತ್ತು ವಡ್ಡರಪಾಳ್ಯದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಉತ್ತರ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ನ್ಯೂ ಬಿಇಎಲ್ ರಸ್ತೆ, ಬಿಕೆ ನಗರ, ಮೋಹನ್ ಕುಮಾರ್ ನಗರ, ಪಂಪಾ ನಗರ, ಎಂಎಸ್ ಪಾಳ್ಯ, ಕೊಡಿಗೇಹಳ್ಳಿ ಟಾಟಾನಗರ, ದೇವಿ ನಗರ, ಲೊಟ್ಟೆಗೊಲ್ಲಹಳ್ಳಿ, ಸಾಯಿನಗರ 2ನೇ ಹಂತ, ಕೆಎಚ್‌ಬಿ ಕಾಲೋನಿ, ಭುವನೇಶ್ವರಿ ನಗರ, ಕನಕ ನಗರ ಮತ್ತು ಕಲ್ಯಾಣ ನಗರದಲ್ಲಿ ವಿದ್ಯುತ್‌ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರಿನ ಪೂರ್ವ ವಲಯದಲ್ಲಿ ಬೆಳಗ್ಗೆ 10ರಿಂದ ಸಂಜೆ 4ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. . ಸುದ್ದಗುಂಟೆ ಪಾಳ್ಯ, ಎ ನಾರಾಯಣಪುರ, ದೂರವಾಣಿ ನಗರ, ಕೆಜಿ ಪುರ ಮುಖ್ಯರಸ್ತೆ, ಉದಯನಗರ, ಕೆಜಿ ಪುರ, ಗೌತಮಪುರ, ಜೋಗುಪಾಳ್ಯ, ಇಲ್ಪೆ ತೋಪು, ಗೋವಿಂದಪುರ, ರಷದ್ ನಗರ, ಎಚ್‌ಬಿಆರ್, ಅಯ್ಯಪ್ಪನಗರ ಮತ್ತು ಗೋಕುಲ ಎಕ್ಸೆಟೆಂಷನ್‌ನಲ್ಲಿ ವಿದ್ಯುತ್‌ ಕಡಿತವಾಗಲಿದೆ, ಪಶ್ಚಿಮ ವಲಯದಲ್ಲಿ ಬೆಳಗ್ಗೆ 9ರಿಂದ ಸಂಜೆ 5ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸರಸ್ವತಿ ನಗರ, ಮಾರೇನಹಳ್ಳಿ, ಮೂಡಲಪಾಳ್ಯ, ಗಂಗೊಂಡನಹಳ್ಳಿ ಮುಖ್ಯರಸ್ತೆ, ಬಸವೇಶ್ವರನಗರ, ನ್ಯಾಯಾಧೀಶರ ಕಾಲೋನಿ, ಭೋವಿ ಕಾಲೋನಿ ಮುಖ್ಯರಸ್ತೆ, ಶಿಕ್ಷಕರ ಕಾಲೋನಿ, ಜೆಸಿ ನಗರ, ಅಗ್ರಹಾರದಾಸರಹಳ್ಳಿ, ಕಾಮಾಕ್ಷಿಪಾಳ್ಯ, ಹನುಮಂತರಾಯನ ಪಾಳ್ಯ, ಅಮರಜ್ಯೋತಿ ರಸ್ತೆ, ವಿದ್ಯಾಪೀಠದ ರಸ್ತೆ ಗಂಟಕನದೊಡ್ಡಿ, ವೀರಸಂದ್ರ, ಕೆಂಗೇರಿ ಮುಖ್ಯರಸ್ತೆ, ದುಬಾಸಿಪಾಳ್ಯ, ಮಲ್ಲತ್ತಹಳ್ಳಿ ಲೇಔಟ್ ಮತ್ತು ಭವಾನಿನಗರದಲ್ಲಿ ವಿದ್ಯುತ್‌ ಕಡಿತ ಉಂಟಾಗಲಿದೆ. (ಒನ್‌ಇಂಡಿಯಾ ಸುದ್ದಿ)

English summary
Bengaluru to face power cuts from February 14 to 16: Here's full Details.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X