ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಂದೀಪ್ ಬೆಳಗ್ಗೆ 5.45ಕ್ಕೆ ತಂದೆಯಾದರು, 7.15ಕ್ಕೆ ಮತದಾನ ಮಾಡಿ ಬಂದರು!

|
Google Oneindia Kannada News

ಬೆಂಗಳೂರು, ಏಪ್ರಿಲ್ 18: ಕುಟುಂಬಕ್ಕೆ ಹೊಸ ಸದಸ್ಯ ಪ್ರವೇಶಿಸಿದರೆ ಅದೆಂಥ ಸಂಭ್ರಮ! ಗುರುವಾರದಂದು ತಮ್ಮ ಎರಡನೇ ಮಗುವಿನ ಆಗಮನದಿಂದ ಅಂಥದ್ದೇ ಸಂತಸದಲ್ಲಿದ್ದರು ಬೆಂಗಳೂರು ಮೂಲದ ಟೆಕಿ ಸಂದೀಪ್ ಮಿಶ್ರಾ. ಅವರ ಪತ್ನಿ ಹಾಗೂ ಮಗುವಿನ ಆರೋಗ್ಯದ ಬಗ್ಗೆ ಇಡೀ ಕುಟುಂಬಕ್ಕೆ ಸ್ವಲ್ಪ ಮಟ್ಟಿಗೆ ಆತಂಕ ಇತ್ತು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಬೆಳಗ್ಗೆ 5.45ಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿನ ಜನನ ಆಗಿತ್ತು.ಮೂವತ್ತೇಳು ವರ್ಷದ ಮಿಶ್ರಾ ಬೆಳಗ್ಗೆ 7.15 ಹೊತ್ತಿಗೆ ಹೊರಮಾವು ರಸ್ತೆಯಲ್ಲಿನ ಮತದಾನ ಕೇಂದ್ರಕ್ಕೆ (ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿ) ತೆರಳಿ ತಮ್ಮ ಮತ ಹಾಕಿದ್ದಾರೆ.

ಮಧ್ಯರಾತ್ರಿ ಮೂರು ಗಂಟೆ ಹೊತ್ತಿಗೆ ನನ್ನ ಪತ್ನಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಸ್ಪತ್ರೆಗೆ ಕರೆದೊಯ್ಯುವಾಗಲೇ ಮತದಾನ ಗುರುತಿನ ಚೀಟಿ ತೆಗೆದುಕೊಂಡು ಹೋಗಿದ್ದೆ. ಮಗು ಹುಟ್ಟಿತು. ನನ್ನ ಮಗುವನ್ನು ನೋಡಿದೆ. ನಂತರ ಮತದಾನ ಕೇಂದ್ರ ತೆರೆದ ಕೆಲವೇ ಹೊತ್ತಿಗೆ ಆಸ್ಪತ್ರೆಯಿಂದ ಮೂರು ಕಿ.ಮೀ. ದೂರವಿದ್ದ ಅಲ್ಲಿಗೆ ಕಾರಿನಲ್ಲಿ ತೆರಳಿದೆ ಎಂದಿದ್ದಾರೆ ಮಿಶ್ರಾ.

Bengaluru techie Sandeep votes just after wife gives birth

ಆ ಮತದಾನ ಕೇಂದ್ರದಲ್ಲಿ ಹಕ್ಕು ಚಲಾಯಿಸಿದ ಕೆಲವೇ ಮಂದಿಯಲ್ಲಿ ಮಿಶ್ರಾ ಕೂಡ ಒಬ್ಬರಾಗಿದ್ದರು. "ಮತ ಹಾಕುವುದು ನನ್ನ ಜವಾಬ್ದಾರಿ ಮತ್ತು ನನ್ನ ಕುಟುಂಬವನ್ನು ನೋಡಿಕೊಳ್ಳುವುದು ಸಹ ಜವಾಬ್ದಾರಿಯೇ. ಆದ್ದರಿಂದ ಬೆಳಗ್ಗೆ ಬೇಗ ಹೋಗಿ ಮತದಾನ ಮಾಡಿದೆ. ಇದೀಗ ನನ್ನ ಹೆಂಡತಿ ಮತ್ತು ಕುಟುಂಬದ ಹೊಸ ಸದಸ್ಯನ ಕಾಳಜಿ ಮಾಡಬಹುದು" ಎಂದು ಅವರು ಹೇಳಿದ್ದಾರೆ.

ಹೆರಿಗೆಗೆ ಇನ್ನು ಕೆಲವೇ ನಿಮಿಷವಿರುವಾಗ ವೋಟ್ ಮಾಡಿದ ಗರ್ಭಿಣಿಹೆರಿಗೆಗೆ ಇನ್ನು ಕೆಲವೇ ನಿಮಿಷವಿರುವಾಗ ವೋಟ್ ಮಾಡಿದ ಗರ್ಭಿಣಿ

ಮಿಶ್ರಾ ಅವರ ಪತ್ನಿ ಸುಧಾ ಅವರಿಗೆ ಮತದಾನ ಮಾಡಲು ಸಾಧ್ಯವಾಗದಿದ್ದ ಬಗ್ಗೆ ಬಹಳ ಬೇಸರ ಇದೆಯಂತೆ. ಆದರೆ ತಮ್ಮ ಪತಿ ಮತ ಚಲಾಯಿಸುವುದಕ್ಕೆ ಪೂರ್ಣ ಬೆಂಬಲ ನೀಡಿದರಂತೆ. ಬೆಂಗಳೂರಿನ ಮೂರು ಲೋಕಸಭಾ ಕ್ಷೇತ್ರಗಳೂ ಸೇರಿದ ಹಾಗೆ ಕರ್ನಾಟಕದಲ್ಲಿ ಹದಿನಾಲ್ಕು ಕ್ಷೇತ್ರಗಳಿಗೆ ಏಪ್ರಿಲ್ ಹದಿನೆಂಟನೇ ತಾರೀಕು ಮತದಾನ ಆಗಿದೆ.

English summary
The early morning birth of his second child and immediate medical concerns of his family did not deter Sandeep Mishra, a Bangalore-based techie, from casting his vote for the Lok Sabha polls in the state today.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X