ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗರ್ಭಿಣಿ ವೈದ್ಯೆಯನ್ನು ರಾತ್ರೋ ರಾತ್ರಿ ಮನೆಯಿಂದ ಹೊರಹಾಕಿದ ಟೆಕ್ಕಿ ಪತಿ

|
Google Oneindia Kannada News

ಬೆಂಗಳೂರು, ಮೇ 1: ತಾನು ಗರ್ಭಿಣಿ ಎನ್ನುಉದನ್ನೂ ಲೆಕ್ಕಿಸದೆ ಹಗಲು ರಾತ್ರಿ ಕೊರೊನಾ ಸೋಂಕಿತರ ಸೇವೆಯಲ್ಲಿ ತೊಡಗಿದ್ದ ವೈದ್ಯೆಯನ್ನು ಪತಿ ಮನೆಯಿಂದ ಹೊರಹಾಕಿರುವ ಘಟನೆ ಬೆಂಗಳೂರಿನ ಜಯನಗರದಲ್ಲಿ ನಡೆದಿದೆ.

ಬೆಂಗಳೂರಿನ ಜಯನಗರದಲ್ಲಿ ಪತ್ನಿ ಗರ್ಭಿಣಿ ಎಂದು ನೋಡದೆ ಟೆಕ್ಕಿ ತಡರಾತ್ರಿ ಮನೆಯಿಂದ ಹೊರ ಹಾಕಿದ್ದಾನೆ. ಕೊರೊನಾದಿಂದ ಲಾಕ್‌ಡೌನ್ ಆದಾಗಿನಿಂದ ವೈದ್ಯೆಯ ಪತಿ ವರ್ಕ್ ಫ್ರಂ ಹೋಂ ಕೆಲಸ ಮಾಡುತ್ತಿದ್ದಾನೆ. ಟೆಕ್ಕಿಯ ಪತ್ನಿ ವೈದ್ಯೆಯಾಗಿರುವ ಕಾರಣ ಗರ್ಭಿಣಿಯಾಗಿದ್ದರೂ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಟೆಕ್ಕಿ ಪತಿ ಕೋಪಗೊಂಡು ಮನೆಯಲ್ಲಿ ಅಡುಗೆ ಮಾಡಲ್ಲ, ಮನೆ ಕ್ಲೀನ್ ಮಾಡಲ್ಲ. ಸದಾ ಆಸ್ಪತ್ರೆಯಲ್ಲೇ ಇರುತ್ತೀಯಾ ಎಂದು ಪತ್ನಿ ವೈದ್ಯೆಗೆ ಕಿರುಕುಳ ನೀಡುತ್ತಿದ್ದ. ಇದೇ ರೀತಿ ಕೆಲವು ದಿನಗಳಿಂದ ಟೆಕ್ಕಿ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.

Bengaluru Techie Harasses Pregnant Wife

ಗುರುವಾರ ತಡರಾತ್ರಿ ಮನೆಯಿಂದ ಹೊರಹಾಕಿದ್ದಾನೆ. ಸಹಿಸಿಕೊಳ್ಳಲಾಗದೆ ಪತ್ನಿ ವೈದ್ಯೆ ವನಿತಾ ಸಹಾಯವಾಣಿಗೆ ಫೋನ್ ಮಾಡಿ ದೂರು ನೀಡಿದ್ದಾರೆ.

ಗರ್ಭಿಣಿಯರ ಆರೋಗ್ಯಕ್ಕೆ ಸರ್ಕಾರದ ಹೊಸ ಕ್ರಮಗಳುಗರ್ಭಿಣಿಯರ ಆರೋಗ್ಯಕ್ಕೆ ಸರ್ಕಾರದ ಹೊಸ ಕ್ರಮಗಳು

ವನಿತಾ ಸಹಾಯವಾಣಿ ಮತ್ತು ಪೊಲೀಸರು ಗರ್ಭಿಣಿ ವೈದ್ಯೆಯ ಸಹಾಯಕ್ಕೆ ಬಂದಿದ್ದು, ಟೆಕ್ಕಿ ಪತಿಯ ವಿರುದ್ಧ ಎನ್‍ಸಿಆರ್ (ಗಂಭೀರ ಸ್ವರೂಪವಲ್ಲದ ಪ್ರಕರಣ) ದಾಖಲಿಸಿದ್ದು, ಪೊಲೀಸರು ಬುದ್ಧಿ ಹೇಳಿ ಕಳುಹಿಸಿದ್ದಾರೆ. ವೈದ್ಯೆ ಎಫ್‌ಐಆರ್ ದಾಖಲಿಸಲು ನಿರಾಕರಿಸಿದ್ದಾಳೆ.

English summary
A work-from-home techie allegedly harassed an overworked pregnant doctor wife in a clear case of domestic violence in Jayanagar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X