ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸುಬ್ರಹ್ಮಣ್ಯಪುರ ಕೆರೆ ಅತಿಕ್ರಮಣ ತೆರವಿಗೆ ಗಡುವು

|
Google Oneindia Kannada News

ಬೆಂಗಳೂರು, ಡಿಸೆಂಬರ್ 14: ನಗರದ ಸುಬ್ರಹ್ಮಣ್ಯ ಕೆರೆ ಅತಿಕ್ರಮಣ ತೆರವಿಗೆ ಒಂದು ವಾರಗಳ ಗಡುವು ನೀಡಲಾಗಿದೆ.

ಈ ಕುರಿತು ಲೋಕಾಯುಕ್ತ ನ್ಯಾಯಮೂರ್ತಿ ಕರ್ನಾಟಕ ರಾಜ್ಯ ಕೊಳಗೇರಿ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡು ಒಂದು ವಾರದಲ್ಲಿ ಅತಿಕ್ರಮಣ ತೆರವುಗೊಳಿಸುವಂತೆ ಸೂಚನೆ ನೀಡಲಾಗಿದೆ.

ಒಡೆದ ಹುಳಿಮಾವು ಕೆರೆ; ಸಮಿತಿ ರಚನೆ ಮಾಡಿದ ಸರ್ಕಾರಒಡೆದ ಹುಳಿಮಾವು ಕೆರೆ; ಸಮಿತಿ ರಚನೆ ಮಾಡಿದ ಸರ್ಕಾರ

ಕೆರೆ ಸಮೀಕ್ಷೆ ನಡೆಸಿ ಅತಿಕ್ರಮಣದ ವರದಿ ನೀಡಲು ಭೂಮಪನ ಇಲಾಖೆ ಅಧಿಕಾರಿಗಳಿಗೆ ಹಾಗೂ ಕೋಳಿವಾಡ ಸಮಿತಿಗೆ ಸೂಚಿಸಲಾಗಿತ್ತು. ಆದರೆ, ಕೆರೆಯ ಕೆಲವು ದಾಖಲೆಗಳನ್ನು ಸಲ್ಲಿಸುವ ಮೂಲಕ ಸುಳ್ಳು ವರದಿ ನೀಡಿರುವ ಸಂಗತಿಯನ್ನು ನಮ್ಮ ಬೆಂಗಳೂರು ಫೌಂಡೇಶನ್ ಲೋಕಾಯುಕ್ತ ಗಮನಕ್ಕೆ ತಂದಿತ್ತು.

Bengaluru Subramanyapura Lake Deadline For Encroachment

ಸುಬ್ರಹ್ಮಣ್ಯಪುರ ಮತ್ತು ತಲಘಟ್ಟಪುರ ಕೆರೆಗಳನ್ನು ಒತ್ತುವರಿ ಮಾಡಿದ ಪ್ರದೇಶದಲ್ಲಿ ಕೊಳೆಗೇರಿ ನಿವಾಸಿಗಳು ವಾಸವಾಗಿದ್ದಾರೆ. ಇವರನ್ನು ಮಂಡಳಿ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಿಗೆ ಶೀಘ್ರವಾಗಿ ಸ್ಥಳಾಂತರಿಸುವಂತೆ ಹೇಳಿದೆ.

ತಲಘಟ್ಟಪುರ ಕೆರೆಯ ಅತಿಕ್ರಮಣ ತೆರವಿಗೆ ಲೋಕಾಯುಕ್ತ ನ್ಯಾಯಾಲಯ ಏ.25ರಂದು ಸ್ಥಳೀಯ ತಹಸೀಲ್ದಾರರಿಗೆ ನಿರ್ದೇಶನ ನೀಡಿತ್ತು. ಆರೆ ಜಿಲ್ಲಾಧಿಕಾರಿಗಳ ಒಪ್ಪಿಗೆಗೆ ಕಾಯುತ್ತಿರುವುದಾಗಿ ತಹಸೀಲ್ದಾರರು ತಿಳಿಸಿದ್ದಾರೆ.

English summary
Lokayukta pulls up Karnataka Slum Development Board for delay in clearing Subramanyapura Lake encroachment.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X