ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಾಗತಿಕ ವಿಜ್ಞಾನ ಸ್ಪರ್ಧೆ: ಬೆಂಗಳೂರು ಬಾಲಕನಿಗೆ 2.9 ಕೋಟಿ ಬಹುಮಾನ

|
Google Oneindia Kannada News

ಬೆಂಗಳೂರು, ನವೆಂಬರ್ 15 : ಜಾಗತಿಕ ವಿಜ್ಞಾನ ವಿಡಿಯೋ ಸ್ಪರ್ಧೆ ಬ್ರೇಕ್ ಥ್ರೂ ಜೂನಿಯರ್ ಚಾಲೆಂಜ್ ಸ್ಪರ್ಧೆಯಲ್ಲಿ ಬೆಂಗಳೂರಿನ 16 ವರ್ಷದ ವಿದ್ಯಾರ್ಥಿ ಸಮಯ್ ಗೋದಿಕಾ 2.9 ಕೋಟಿ ರೂಗಳ ಜಾಗತಿಕ ಮಟ್ಟದ ಬಹುಮಾನವನ್ನು ಗಳಿಸಿ ಅದ್ವಿತೀಯ ಸಾಧನೆ ಮಾಡಿದ್ದಾರೆ.

ಜೀವ ಚಕ್ರೀಯ ಆವರ್ತನ(circadian rhythms) ವಿಷಯಕ್ಕೆ ಸಂಬಂಧಿಸಿದ ಸಿದ್ಧಪಡಿಸಿದ ವಿಡಿಯೋ ಜಾಗತಿಕ ಮಟ್ಟದಲ್ಲಿ ಮೊದಲ ಸ್ಥಾನ ಗಳಿಸಿದೆ. ಬೆಂಗಳೂರಿನ ನ್ಯಾಷನಲ್ ಪಬ್ಲಿಕ್ ಶಾಲೆಯ ಪಿಯುಸಿ ಪ್ರಥಮ ವರ್ಷದಲ್ಲಿ ಓದುತ್ತಿರುವ ಸಮಯ್ ಗೋದಿಕಾ ಮನುಷ್ಯನ ಮೆದುಳು, ಜೀವ ಚಕ್ರೀಯ ಆವರ್ತನ ಆಧರಿಸಿ ಮನುಷ್ಯನ ವರ್ತನೆ ಕುರಿತಂತೆ ಸಿದ್ಧಪಡಿಸಿದ ಮನುಷ್ಯನ ಮೆದುಳಿನ 24ಗಂಟೆಗಳ ಅವಧಿಯ ಸಂಪೂರ್ಣ ಚಿತ್ರೀಕರಣಕ್ಕೆ ಈ ಪ್ರಶಸ್ತಿ ಸಂದಿದೆ.

6 ಪ್ರತಿಭಾವಂತ ಸಂಶೋಧಕರಿಗೆ ಇನ್ಫೋಸಿಸ್ ಪ್ರಶಸ್ತಿ6 ಪ್ರತಿಭಾವಂತ ಸಂಶೋಧಕರಿಗೆ ಇನ್ಫೋಸಿಸ್ ಪ್ರಶಸ್ತಿ

ಕಳೆದ ವರ್ಷ 2017 ರ ಜಾಗತಿಕ ವಿಡಿಯೋ ಪ್ರದರ್ಶನ ಸ್ಪರ್ಧೆಯಲ್ಲೂ ಕೂಡ ಸಮಯ್ ಗೋದಿಕಾ ಅಂತಿಮ ಸುತ್ತು ತಲುಪಿದ್ದರು, ಕಳೆದ ವರ್ಷದ ಸ್ಪರ್ಧೆಯಲ್ಲಿ ಕ್ಯಾನ್ಸರ್, ಅಲ್ಸಮೈರ್, ಪಾರ್ಕಿಂಗ್‌ಸನ್ ಅಂತಹ ರೋಗಗಳಲ್ಲಿ ಮನುಷ್ಯ ತನ್ನಷ್ಟಕ್ಕೆ ತಾನೇ ನಿಯಂತ್ರಿಸಿಕೊಳ್ಳುವುದು ಹಾಗೂ ಅದರ ಮೇಲೆ ಪ್ರಯೋಗಕ್ಕೆ ಒಳಪಡುವ ಕುರಿತಂತೆ ವಿಡಿಯೋ ಸಿದ್ಧಪಡಿಸಿದ್ದ.

Bengaluru student Samay Godika wins Rs2.9 Cr for video making on science

ಜಗತ್ತಿನ ವಿವಿಧ ರಾಷ್ಟ್ರಗಳ 12 ಸಾವಿರ ವಿದ್ಯಾರ್ಥಿಗಳು ಈ ಬ್ರೇಕ್ ಥ್ರೂ ಜೂನಿಯರ್ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. 13-18 ವರ್ಷ ವಯೋಮಾನದ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. 4 ಲಕ್ಷ ಮಿಲಿನಯನ್ ಡಾಲರ್ ಎಂದರೆ 2.79 ಕೋಟಿ ರೂಗಳ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಸಮಯ್ ಗೋದಿಕಾ ಸಿದ್ಧಪಡಿಸಿದ್ದ ವಿಜ್ಞಾನ ವಿಡಿಯೋ ಅಂತಿಮವಾಗಿ ಪ್ರಶಸ್ತಿಗೆ ಆಯ್ಕೆಯಾಗಿದೆ.

English summary
A first PU student from National Public School in Bangalore, Samay Godika has won Breakthrough Junior Challenge worth Rs 2.9 crore for a video he made on circadian rhythm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X