ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಈ ಕಂಪನಿಯಲ್ಲಿ ನಿದ್ದೆ ಮಾಡುವ ಉದ್ಯೋಗಿಗಳಿಗೆ ಜೇಬು ತುಂಬಾ ಸಂಬಳ!

|
Google Oneindia Kannada News

ಬೆಂಗಳೂರು, ಮೇ 6: ಸಿಲಿಕಾನ್ ಸಿಟಿಯಲ್ಲಿ ದುಡಿಯೋ ಜನರಿಗೆ ಯಾವತ್ತೂ ಮೋಸವಿಲ್ಲ. ರಾಜಧಾನಿ ಬೆಂಗಳೂರಿನಲ್ಲಿ ದುಡಿದು ತಿನ್ನಬೇಕು ಎನ್ನುವವರಿಗೆ ಒಂದಿಲ್ಲೊಂದು ಉದ್ಯೋಗಗಳು ಕೈಬೀಸಿ ಕರೆಯುತ್ತವೆ. ಇಂಥ ಐಟಿ ಸಿಟಿಯಲ್ಲಿ ಕಂಪನಿಗಳು ನಿದ್ದೆ ಮಾಡುವ ಉದ್ಯೋಗಿಗಳಿಗೆ ಜೇಬು ತುಂಬಾ ಸಂಬಳ ಕೊಡುವುದಾಗಿ ಘೋಷಿಸುತ್ತಿವೆ.

ರಾಜ್ಯವಷ್ಟೇ ಅಲ್ಲದೇ ಅಕ್ಕ-ಪಕ್ಕದ ರಾಜ್ಯ ಮತ್ತು ವಿದೇಶಗಳಿಂದಲೂ ಬೆಂಗಳೂರು ನಗರಕ್ಕೆ ಉದ್ಯೋಗ ಅರಸಿಗೊಂಡು ಬಂದವರಿದ್ದಾರೆ. ಐಟಿ ವಲಯದಲ್ಲಿ ಅಂಥ ಸಾವಿರಾರು ಜನರಿಗೆ ಉದ್ಯೋಗ ಭಾಗ್ಯವೂ ಸಿಕ್ಕಿದೆ. ಇದರ ಮಧ್ಯದಲ್ಲಿ ಅದೇ ಐಟಿ ವಲಯದ ಕಂಪನಿಯೊಂದು ನೀಡಿರುವ ಆಫರ್ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ.

ನೀವು ಕಚೇರಿಗೆ ಕರೆದ್ರೆ ನಾವು ಕೆಲಸ ಬಿಡ್ತೀವಿ; ಆ್ಯಪಲ್, ಗೂಗಲ್ ಸಂಸ್ಥೆಗಳೇ ಕಂಗಾಲ್!?ನೀವು ಕಚೇರಿಗೆ ಕರೆದ್ರೆ ನಾವು ಕೆಲಸ ಬಿಡ್ತೀವಿ; ಆ್ಯಪಲ್, ಗೂಗಲ್ ಸಂಸ್ಥೆಗಳೇ ಕಂಗಾಲ್!?

ಬೆಂಗಳೂರಿನ ಐಟಿ ಕಂಪನಿಯೊಂದರಲ್ಲಿ ಉದ್ಯೋಗಿಗಳು ಕೆಲಸದ ಮಧ್ಯೆಯೇ ನಿದ್ದೆ ಮಾಡುವುದಕ್ಕೆ ಚಾನ್ಸ್ ಕೊಡಲಾಗಿದೆ. ನಿದ್ದೆ ಮಾಡುವುದಕ್ಕೂ ಈ ಕಂಪನಿಯು ಉದ್ಯೋಗಿಗಳಿಗೆ ಸಂಬಳವನ್ನು ನೀಡುತ್ತದೆ. ಕಂಪನಿಯೇ ಫಿಕ್ಸ್ ಮಾಡಿರುವ ಅವಧಿಯಲ್ಲಿ ನಿದ್ದೆ ಮಾಡಿದರೆ ಅದಕ್ಕೆ ಯಾವುದೇ ರೀತಿ ಸ್ಯಾಲರಿ ಕಟ್ ಮಾಡುವುದಿಲ್ಲ. ಇಂಥದೊಂದು ವಿಶೇಷ ಯೋಜನೆಗೆ ಕಂಪನಿಯು ವೇಕ್ ಫಿಟ್ ಅನ್ನೋ ಹೆಸರು ಕೊಟ್ಟಿದೆ. ವೇಕ್ ಫಿಟ್ ಯೋಜನೆಯ ಆಳ ಅಳತೆಯ ಜೊತೆಗೆ ಉದ್ಯೋಗಿಗಳಿಗೆ ಈ ಯೋಜನೆ ನೀಡಲು ಕಾರಣವೇನು ಎಂಬುದನ್ನು ಈ ವರದಿಯಲ್ಲಿ ಓದಿ ತಿಳಿಯಿರಿ.

ನಿದ್ದೆ ಮಾಡುವುದರ ಮೂಲಕ ಮಾನಸಿಕ ಒತ್ತಡಕ್ಕೆ ಬ್ರೇಕ್

ನಿದ್ದೆ ಮಾಡುವುದರ ಮೂಲಕ ಮಾನಸಿಕ ಒತ್ತಡಕ್ಕೆ ಬ್ರೇಕ್

ನಿರಂತರ ಕೆಲಸದ ಒತ್ತಡದ ಮಧ್ಯೆ ಉದ್ಯೋಗಿಗಳಿಗೆ ಮೈಂಡ್ ರಿಲ್ಯಾಕ್ಸ್ ಆಗಬೇಕಾಗಿರುತ್ತದೆ. ಈ ಅಂಶವನ್ನು ಗಮನದಲ್ಲಿ ಇಟ್ಟುಕೊಂಡು ವೇಟ್ ಫಿಕ್ ಅನ್ನೋ ಯೋಜನೆಯನ್ನು ಜಾರಿಗೊಳಿಸಲು ಕಂಪನಿಗಳು ಮುಂದಾಗಿವೆ. ಅಂದರೆ ಕೆಲಸದಿಂದಾಗಿ ಉಂಟಾಗುವ ಮಾನಸಿಕ ಒತ್ತಡವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಕ್ಕಾಗಿ ಕೆಲಸದ ಅವಧಿಯ ಮಧ್ಯೆ ಅರ್ಧ ಗಂಟೆ ನಿದ್ದೆ ಮಾಡುವುದಕ್ಕಾಗಿಯೇ ಸಮಯವನ್ನು ನೀಡಲಾಗುತ್ತದೆ.

ಈ-ಮೇಲ್ ಸಂದೇಶದಲ್ಲಿ ವೇಕ್ ಫಿಟ್ ಘೋಷಿಸಿದ ಸಹ-ಸಂಸ್ಥಾಪಕರು

ಈ-ಮೇಲ್ ಸಂದೇಶದಲ್ಲಿ ವೇಕ್ ಫಿಟ್ ಘೋಷಿಸಿದ ಸಹ-ಸಂಸ್ಥಾಪಕರು

ಗುರುವಾರ ಉದ್ಯೋಗಿಗಳಿಗೆ ಕಳುಹಿಸಿದ ಈ-ಮೇಲ್‌ನಲ್ಲಿ, ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಸಿಬ್ಬಂದಿಗೆ ಈಗ 30 ನಿಮಿಷಗಳವರೆಗೆ ಕೆಲಸದ ಅವಧಿ ಮಧ್ಯದಲ್ಲಿ ನಿದ್ರಿಸಲು ಅನುಮತಿಸಲಾಗುವುದು ಎಂದು ಘೋಷಿಸಿದರು. ‘ನಿಮಗೆ ನಿದ್ದೆ ಮಾಡುವ ಹಕ್ಕು'' ಎಂಬ ವಿಷಯದೊಂದಿಗೆ, ಸ್ಟಾರ್ಟಪ್‌ನ ಉದ್ಯೋಗಿಗಳು "ಅಧಿಕೃತ ನಿದ್ರೆಯ ಸಮಯದ" ಭಾಗವಾಗಿ ಮಧ್ಯಾಹ್ನ 2 ರಿಂದ 2.30 ರವರೆಗೆ ನಿದ್ದೆ ಮಾಡಬಹುದು ಎಂದು ಚೈತನ್ಯ ಹೇಳಿದ್ದಾರೆ. ಈ ಸಮಯದಲ್ಲಿ ಕಂಪನಿಯು ತನ್ನ 600 ಉದ್ಯೋಗಿಗಳ ಕ್ಯಾಲೆಂಡರ್‌ಗಳನ್ನು ಸ್ವಯಂಚಾಲಿತವಾಗಿ ನಿರ್ಬಂಧಿಸುತ್ತದೆ.

ರಾಮಲಿಂಗೇಗೌಡ ಕಳುಹಿಸಿದ ಇಮೇಲ್‌ನಲ್ಲಿ ಇರುವುದೇನು?

ರಾಮಲಿಂಗೇಗೌಡ ಕಳುಹಿಸಿದ ಇಮೇಲ್‌ನಲ್ಲಿ ಇರುವುದೇನು?

"ನಾವು ಈಗ ಆರು ವರ್ಷಗಳಿಂದ ನಿದ್ರೆಯ ವ್ಯವಹಾರದಲ್ಲಿದ್ದೇವೆ. ಅದಾಗ್ಯೂ, ವಿಶ್ರಾಂತಿಯ ಎಂಬ ಅಂಶಕ್ಕೆ ಸೂಕ್ತ ನ್ಯಾಯವನ್ನು ಒದಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ. ಮಧ್ಯಾಹ್ನದ ವೇಳೆಯಲ್ಲಿ ಚಿಕ್ಕನಿದ್ರೆ ಬೇಕಾಗುತ್ತದೆ. ನಾವು ಯಾವಾಗಲೂ ಚಿಕ್ಕನಿದ್ರೆಯನ್ನು ಗಂಭೀರವಾಗಿ ತೆಗೆದುಕೊಳ್ಳುತ್ತೇವೆ, ಆದರೆ ಇಂದಿನಿಂದ ನಾವು ವಿಷಯಗಳನ್ನು ಒಂದು ಹಂತಕ್ಕೆ ತೆಗೆದುಕೊಂಡು ಹೋಗುತ್ತೇವೆ," ಎಂದು ವೇಕ್‌ಫಿಟ್ ಸಹ-ಸಂಸ್ಥಾಪಕ ಚೈತನ್ಯ ರಾಮಲಿಂಗೇಗೌಡ ಕಳುಹಿಸಿದ ಸಂದೇಶದಲ್ಲಿ ಉಲ್ಲೇಖಿಸಲಾಗಿದೆ.

ನಾಸಾದ ಪ್ರಕಾರ ಮಧ್ಯಾಹ್ನದ ನಿದ್ದೆ ಏಕೆ ಅತ್ಯಗತ್ಯ?

ನಾಸಾದ ಪ್ರಕಾರ ಮಧ್ಯಾಹ್ನದ ನಿದ್ದೆ ಏಕೆ ಅತ್ಯಗತ್ಯ?

NASA ಮತ್ತು ಹಾರ್ವರ್ಡ್‌ನ ಅಧ್ಯಯನಗಳನ್ನು ಉಲ್ಲೇಖಿಸಿ, ಮಧ್ಯಾಹ್ನದ ನಿದ್ದೆಯು ಉತ್ತಮ ಕಾರ್ಯಕ್ಷಮತೆ ಮತ್ತು ಉತ್ಪಾದಕತೆಗೆ ಸಂಬಂಧಿಸಿವೆ ಎಂದು ಚೈತನ್ಯ ರಾಮಲಿಂಗೇಗೌಡ ಸಲಹೆ ನೀಡಿದರು. "ಮಧ್ಯಾಹ್ನ ನಿದ್ದೆಯು ಸ್ಮರಣೆ, ಏಕಾಗ್ರತೆ, ಸೃಜನಶೀಲತೆ ಮತ್ತು ಉತ್ಪಾದಕತೆಗೆ ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಹೇಳುತ್ತವೆ. NASA ಅಧ್ಯಯನವು 26-ನಿಮಿಷದ ಕ್ಯಾಟ್‌ನ್ಯಾಪ್ ಕಾರ್ಯಕ್ಷಮತೆಯನ್ನು ಶೇ.33ರಷ್ಟು ಹೆಚ್ಚಿಸುತ್ತದೆ ಎಂದು ಬಹಿರಂಗಪಡಿಸುತ್ತದೆ, ಆದರೆ ಹಾರ್ವರ್ಡ್ ಅಧ್ಯಯನವು ನಿದ್ದೆಯು ಒತ್ತಡವನ್ನು ಹೇಗೆ ತಡೆಯುತ್ತದೆ ಎಂಬುದನ್ನು ತೋರಿಸುತ್ತದೆ. ಅದಕ್ಕಿಂತ ಹೆಚ್ಚಾಗಿ, ವೇಕ್‌ಫಿಟ್ ಉತ್ತಮ ನಿದ್ರೆಯ ವಾತಾವರಣವನ್ನು ಸುಗಮಗೊಳಿಸಲು, ತನ್ನ ಕಛೇರಿಯಲ್ಲಿ ಸ್ನೇಹಶೀಲ ಚಿಕ್ಕನಿದ್ರೆ ಪಾಡ್‌ಗಳು ಮತ್ತು ಸ್ತಬ್ಧ ಕೊಠಡಿಗಳನ್ನು ರಚಿಸುಲು ಕೆಲಸ ಮಾಡುತ್ತಿದೆ," ಎಂದು ಅವರು ಬರೆದಿದ್ದಾರೆ.

ಟ್ವಿಟರ್‌ನಲ್ಲಿ ಶ್ಲಾಘನೆಗೆ ಪಾತ್ರವಾದ ವೇಕ್ ಫಿಟ್

ಟ್ವಿಟರ್‌ನಲ್ಲಿ ಶ್ಲಾಘನೆಗೆ ಪಾತ್ರವಾದ ವೇಕ್ ಫಿಟ್

ವೇಕ್‌ಫಿಟ್ ನೀತಿಯ ಬಗ್ಗೆ ಟ್ವಿಟರ್‌ನಲ್ಲಿ ಸಾಕಷ್ಟು ಶ್ಲಾಘನೆ ವ್ಯಕ್ತವಾಗಿದೆ. ''ಚೈತನ್ಯ ರಾಮಲಿಂಗೇಗೌಡರೇ ನನ್ನನ್ನು ನಂಬಿ ನೀವು ಕಾರ್ಪೊರೇಟ್ ಸಂಸ್ಕೃತಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದರ ಸಂಪೂರ್ಣ ಪ್ರಕ್ರಿಯೆಯನ್ನು ಮರುರೂಪಿಸಲಿದ್ದೀರಿ, ಇದು ಗೇಮ್ ಚೇಂಜರ್ ನಿರ್ಧಾರ ಮತ್ತು ಅದರ ರೀತಿಯ ಮೊದಲನೆಯದು. ತಡೆಗೋಡೆಯನ್ನು ಮುರಿದು ಈ ನಿರ್ಧಾರ ತೆಗೆದುಕೊಂಡ ಇಡೀ ಆಡಳಿತ ತಂಡಕ್ಕೆ ಅಭಿನಂದನೆಗಳು," ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

Recommended Video

ಶತಕದಂಚಿನಲ್ಲಿದ್ದ ವಾರ್ನರ್ ಗೆ ಬ್ಯಾಟಿಂಗ್ ಅವಕಾಶವನ್ನು ನೀಡದ ಪೊವೆಲ್ ಹೇಳಿದ್ದೇನು? | Oneindia Kannada

ನೀವು ಕಚೇರಿಗೆ ಕರೆದ್ರೆ ನಾವು ಕೆಲಸ ಬಿಡ್ತೀವಿ; ಆ್ಯಪಲ್, ಗೂಗಲ್ ಸಂಸ್ಥೆಗಳೇ ಕಂಗಾಲ್!?

English summary
Wakefit, a Bengaluru-based startup, has announced a 30-minute official nap time at work for all its employees everyday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X