ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಸ್ಟಾರ್ಟ್ ಅಪ್ ಸಿಇಒ ಎಡಗೈ ಕಚ್ಚಿದ ಮೊಸಳೆ

|
Google Oneindia Kannada News

ರಾಮನಗರ, ಜೂನ್ 26: ಬೆಂಗಳೂರಿನಲ್ಲಿ ಕಂಪೆನಿಯೊಂದನ್ನು ನಡೆಸುವ ಇಪ್ಪತ್ತಾರು ವರ್ಷದ-ಐಐಟಿ ಪದವೀಧರ ಮೊಸಳೆ ದಾಳಿಯಲ್ಲಿ ಕೈ ಕಳೆದುಕೊಂಡಿದ್ದು, ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಮನಗರದ ತಟ್ಟೆಕೆರೆ ಅರಣ್ಯ ಪ್ರದೇಶದ ಕೆರೆಯಲ್ಲಿ ಘಟನೆ ನಡೆದಿದೆ.

ತಲಕಾವೇರಿ ವನ್ಯಜೀವಿ ಧಾಮ ಪರಿಸರ ಸೂಕ್ಷ್ಮ ಪ್ರದೇಶ: ಕೇಂದ್ರ ಘೋಷಣೆತಲಕಾವೇರಿ ವನ್ಯಜೀವಿ ಧಾಮ ಪರಿಸರ ಸೂಕ್ಷ್ಮ ಪ್ರದೇಶ: ಕೇಂದ್ರ ಘೋಷಣೆ

ಮುದಿತ್ ದಂಡವತೆ ಭಾನುವಾರ ಎಡಗೈ ಕಳೆದುಕೊಂಡವರು. ಅವರೇ ನೀಡಿದ ಮಾಹಿತಿಯಂತೆ, ರಾಮನಗರದಲ್ಲಿ ದೇವಸ್ಥಾನಕ್ಕೆಂದು ತೆರಳಿದ್ದರಂತೆ. ಆ ನಂತರ ತನ್ನ ಸ್ನೇಹಿತರು ಹಾಗೂ ಎರಡು ನಾಯಿಗಳ ಜತೆ ನಡೆದು ಹೋಗುತ್ತಿದ್ದರಂತೆ. ಆಗ ನಾಯಿಗಳು ನೀರಿಗೆ ಜಿಗಿದಿವೆ. ಅವುಗಳನ್ನು ದಂಡವತೆ ಅನುಸರಿಸಿದ್ದಾರೆ. ಆಗ ಮೊಸಳೆ ದಾಳಿ ಮಾಡಿದೆ.

Bengaluru Start-Up CEO Loses Arm In Crocodile Attack

ರಕ್ತ ಸೋರುತ್ತಿದ್ದ ದಂಡವತೆಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆ ನಂತರ ಬೆಂಗಳೂರಿನ ಹಾಸ್ ಮ್ಯಾಟ್ ಆಸ್ಪತ್ರೆಗೆ ಸೇರಿಸಲಾಗಿದೆ. ದಂಡವತೆ ಅವರ ಎಡಗೈಯನ್ನು ಮೊಸಳೆ ಕಚ್ಚಿ ತಿಂದಿರುವುದರಿಂದ ಅದನ್ನು ಮತ್ತೆ ಜೋಡಣೆ ಮಾಡಲು ಸಾಧ್ಯವಿಲ್ಲ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

Bengaluru Start-Up CEO Loses Arm In Crocodile Attack

ನಾಯಿಯನ್ನು ಹೊರಗೆ ತೆಗೆಯುವ ಆತುರದಲ್ಲಿ ಮೊಸಳೆಯನ್ನು ಗಮನಿಸಲಿಲ್ಲ ಎಂದು ದಂಡವತೆ ಅವರು ಸೇಹಿತರಿಗೆ ತಿಳಿಸಿದ್ದಾರೆ. "ದಂಡವತೆ ವಿರುದ್ಧ ಯಾರೂ ದೂರು ನೀಡಿಲ್ಲ. ಆದರೆ ಪ್ರವೇಶ ನಿರ್ಬಂಧ ಕಾಡು ಪ್ರದೇಶದಲ್ಲಿ ಪ್ರವೇಶ ಮಾಡಿದ್ದರಿಂದ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ" ಎಂದು ರಾಮನಗರದ ಎಸ್ ಪಿ ಬಿ.ರಮೇಶ್ ತಿಳಿಸಿದ್ದಾರೆ.

English summary
Mudit Dandwate, a 26-year-old IIT graduate, entered a restricted forest area near of Ramanagara without permission. He was attacked by a crocodile and lost his left forearm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X