ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಾಂತ್ರಿಕ ಉದ್ಯಮಕ್ಕೆ ಏಷ್ಯಾದಲ್ಲಿ ಬೆಂಗಳೂರೇ ದಿ ಬೆಸ್ಟ್ ಸಿಟಿ!

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 24: ಸಿಲಿಕಾನ್ ಸಿಟಿ ಎಂದೇ ಖ್ಯಾತಿ ಪಡೆದಿರುವ ಬೆಂಗಳೂರು ನಗರ ತಾಂತ್ರಿಕ ಉದ್ಯಮದಲ್ಲಿ ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಮತ್ತೊಮ್ಮೆ ಸಾಬೀತಾಗಿದೆ.

ಕೆನಡಾ ಮೂಲದ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ದೃಢಪಟ್ಟಿದ್ದು, ಬೆಂಗಳೂರಿನ ಸಾಮಾಜಿಕ, ಆರ್ಥಿಕ ಅಭಿವೃದ್ಧಿ ತಾಂತ್ರಿಕ ಉದ್ಯಮಕ್ಕೆ ಅತ್ಯಂತ ಹೇಳಿಮಾಡಿಸಿದ ನಗರವಾಗಿದೆ ಎಂದು ಸಮೀಕ್ಷೆ ಪ್ರಶಂಸಿಸಿದೆ.

ಭಾರತದ ಸಿಲಿಕಾನ್ ಸಿಟಿಯಾದ ಬೆಂಗಳೂರು ತಾಂತ್ರಿಕ ಉದ್ಯಮದ ಸೂಜಿಗಲ್ಲಿನಂತೆ ಬೆಳಯುತ್ತಿದ್ದು, ಬಹುರಾಷ್ಟ್ರೀಯ ಕಂಪನಿಗಳಿಂದ ಹಿಡಿದು ಸ್ಟಾರ್ಟ್ ಅಪ್ ಗಳಿಗೂ ಕೂಡ ಅತ್ಯಂತ ಪ್ರಶಸ್ತ ತಾಣವಾಗಿದೆ ಎಂದು ವರದಿ ಖಚಿತಪಡಿಸಿದೆ.

ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನ ಬೆಂಗಳೂರು-ಮೈಸೂರು ಟ್ರಾಫಿಕ್ ನಿರ್ವಹಣೆಗೆ ಜಪಾನ್ ತಂತ್ರಜ್ಞಾನ

ಏಷ್ಯಾದಲ್ಲಿ ಪ್ರಮುಖ ತಾಣಗಳು ತಾಂತ್ರಿಕ ಕ್ಷೇತ್ರ ಎಂಬ ವಿಷಯ ಕುರಿತು ಕೆನಡಾದ ಕೊಲಾಯರ್ಸ್ ರಿಸರ್ಚ್ ಎಂಬ ಸಂಸ್ಥೆ ಅಧ್ಯಯನ ನಡೆಸಿದ್ದು, ಈ ಅಧ್ಯಯನ ಆಧಾರದ ಆಧಾರದ ಮೇಲೆ ಬೆಂಗಳೂರು ನಗರ ಹಾಗೂ ಇಲ್ಲಿನ ಮಾನವ ಸಂಪನ್ಮೂಲ ಏಷ್ಯಾದಲ್ಲೇ ತಾಂತ್ರಿಕ ಉದ್ಯಮಕ್ಕೆ ಪೂರಕವಾದ ವಾತಾವರಣ ಹೊಂದಿದ್ದು ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿದೆ ಎಂಬುದಕ್ಕೆ ಹಲವಾರು ಆಧಾರಗಳನ್ನೂ ಕೂಡ ಒದಗಿಸಿದೆ.

Bengaluru stands the best place for tech industry in Asia

ಬೆಂಗಳೂರು ಏಷ್ಯಾದಲ್ಲೇ ಮೊದಲ ಸ್ಥಾನದಲ್ಲಿ ನಿಲ್ಲುವಂತಾಗಲು ಕಾರಣವೇನೆಂದರೆ 2022ರವರೆಗೆ ಕರ್ನಾಟಕದ ಜಿಡಿಪಿ ಅಭಿವೃದ್ಧಿ ದರ ಶೇ.9.6ರಷ್ಟು ಇರಲಿದೆ ಎಂದು ಸಮೀಕ್ಷೆಯಿಂದ ಬಹಿರಂಗಗೊಂಡಿದೆ ಈ ಕಾರಣಕ್ಕಾಗಿ ಇಲ್ಲಿನ ಸಾಮಾಜಿಕ, ಆರ್ಥಿಕ ಅಭಿವೃದ್ಧಿಯನ್ನು ಆಧರಿಸಿ ಬೆಂಗಳೂರು ಮಹತ್ವ ಪಡೆದುಕೊಂಡಿದೆ ಎನ್ನುತ್ತಾರೆ ಅಧ್ಯಯನ ನಡೆಸಿದ ಕೊಲಾಯರ್ಸ್ ಇಂಟರ್ ನ್ಯಾಷನಲ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕ ಜಾಯ್ ವರ್ಗೀಸ್.

ಬೆಂಗಳೂರು ನಗರದಲ್ಲಿ ಉನ್ನತ ಶಿಕ್ಷಣ ನೀಡುವ ಅತಿ ಹೆಚ್ಚು ಸಂಖ್ಯೆಯ ಶಿಕ್ಷಣ ಸಂಸ್ಥೆಗಳಿಗೆ ದೇಶದ ಇತರೆ ಪ್ರದೇಶಗಳಿಗೆ ಹೋಲಿಸಿದಲ್ಲಿ ಬೆಂಗಳೂರಿನಲ್ಲಿ ಉದ್ಯೋಗ ಒದಗಿಸುವ ಸಾಮರ್ಥ್ಯ ಐಟಿ ಕ್ಷೇತ್ರದಲ್ಲೂ ಹೆಚ್ಚಿದೆ.

ಸ್ಯಾಮ್ ಸಂಗ್ ಸಮೀಕ್ಷೆ : ವ್ಯವಹಾರ ಪರಿಕಲ್ಪನೆ ಬೆಂಗಳೂರಿಗರೇ ಬೆಸ್ಟ್ ಸ್ಯಾಮ್ ಸಂಗ್ ಸಮೀಕ್ಷೆ : ವ್ಯವಹಾರ ಪರಿಕಲ್ಪನೆ ಬೆಂಗಳೂರಿಗರೇ ಬೆಸ್ಟ್

ಹೀಗಾಗಿ ಸಹಜವಾಗಿಯೇ ಬೆಂಗಳೂರು ಸ್ಟಾರ್ಟ್ ಅಪ್, ಎಂಎನ್ ಸಿ ಕಂಪನಿಗಳ ತಾಂತ್ರಿಕ ಉದ್ಯಮದ ಪ್ರಮುಖ ತಾಣವಾಗಿ ಮಾರ್ಪಟ್ಟಿದೆ.ಪ್ರತಿ ವರ್ಷ ಬೆಂಗಳೂರಿನ ರಫ್ತು ಸಾಮರ್ಥ್ಯ 4 ಬಿಲಿಯನ್ ಡಾಲರ್ ಗಳಿದ್ದು ಸತತ 3 ವರ್ಷಗಳಿಂದ ಉದ್ಯಮವನ್ನು ಸಮರ್ಥವಾಗಿ ಮುಂದುವರೆಸಿಕೊಂಡು ಬಂದಿದೆ ಎನ್ನುತ್ತಾರೆ ವರ್ಗೀಸ್.

ಈ ಎಲ್ಲಾ ಕಾರಣಗಳಿಗಾಗಿ ಬೆಂಗಳೂರು ನಗರ ಟೆಕ್ನಾಲಜಿ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿದ್ದು ಒಟ್ಟು ಉದ್ಯಮದ ಶೇ.45 ರಷ್ಟು ಭಾಗವನ್ನು 2018ರ ಎರಡನೇ ಆರ್ಥಿಕ ತ್ರೈಮಾಸಿಕ ಅವಧಿಯಲ್ಲಿ ತನ್ನ ಪಾಲನ್ನು ಪ್ರದರ್ಶಿಸಿದೆ.

ಜಗತ್ತಿನ ವಾಸಿಸುವ ಅತಿ ದುಬಾರಿ ನಗರಗಳ 10 ಪಟ್ಟಿಯಲ್ಲಿ ಬೆಂಗಳೂರು ಸ್ಥಾನ ಪಡೆದಿದ್ದರೂ ಕೂಡ ಕಚೇರಿ ಸ್ಥಾಪನೆ ಹಾಗೂ ಉದ್ಯೋಗಿಗಳಿಗೆ ಕಡಿಮೆ ಸಂಬಳವನ್ನು ನೀಡುವ ಮೂಲಕ ಉದ್ಯಮ ಸ್ಥಾಪನೆಗೆ ಆಹ್ಲಾದಕರ ವಾತಾವರಣವನ್ನು ಬೆಂಗಳೂರು ಹೊಂದಿದ್ದು ಗ್ರೇಡ್ ಎ ದರ್ಜೆಯ ಕಚೇರಿಗಳು ಕೂಡ ದಕ್ಕುವುದರಿಂದ ಟೋಕಿಯೋ ಮೀರಿ ಬೆಂಗಳೂರು ನಗರ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

English summary
A recent survey conducted byvCanada based institution has revealed that the socio-economic conditions of Bengaluru is the best for technology entrepreneurs as its GDP growth is around 9.6 percent.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X