ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಟಿ ಉದ್ಯೋಗ ಬೆಂಗಳೂರು ನಂ.1: ದೆಹಲಿಗೆ 2ನೇ ಸ್ಥಾನ

By Nayana
|
Google Oneindia Kannada News

ಬೆಂಗಳೂರು, ಜೂನ್ 12: ತಂತ್ರಜ್ಞಾನ ವಲಯದ ಉದ್ಯೋಗ ಅವಕಾಶಗಳಿಗೆ ಸಿಲಿಕಾನ್ ನಗರ ಬೆಂಗಳೂರು ನಂ.1 ಎಂದು ವರದಿಯೊಂದು ತಿಳಿಸಿದೆ. ದೆಹಲಿ-ಎನ್‌ಸಿಆರ್‌ ಮತ್ತು ಪುಣೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ದೆಹಲಿ, ಪುಣೆ ಅನುಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ ಎಂದು ವರದಿ ತಿಳಿಸಿದೆ. ತಂತ್ರಜ್ಞಾನ ಕ್ಷೇತ್ರದಲ್ಲಿ ಸೃಷ್ಟಿಯಾಗುವ ಶೇ.22ರಷ್ಟು ಉದ್ಯೋಗಿಗಳು ಬೆಂಗಳೂರಿನ ಪಾಲಾಗುತ್ತಿದೆ. ದೆಹಲಿ ಶೇ.11 ಮತ್ತು ಪುಣೆ ಶೇ.10 ಪಾಲನ್ನು ಹೊಂದಿದೆ ಎಂದು ಇಂಡೀಡ್ ಜಾಬ್‌ಸೈಟ್‌ನ ಸಮೀಕ್ಷೆ ತಿಳಿಸಿದೆ.

ಸಾಫ್ಟ್ ವೇರ್ ಡೆವಲಪರ್ ಗಳಿಗೆ ಸಂಚಲನ ಮೂಡಿಸಿದ ಮೈಕ್ರೋಸಾಫ್ಟ್ಸಾಫ್ಟ್ ವೇರ್ ಡೆವಲಪರ್ ಗಳಿಗೆ ಸಂಚಲನ ಮೂಡಿಸಿದ ಮೈಕ್ರೋಸಾಫ್ಟ್

ತಂತ್ರಜ್ಞಾನ ವಲಯದ ಉದ್ಯೋಗ ನೀಡುವ ಇತರ ನಗರಗಳಲ್ಲಿ ಹೈದರಾಬಾದ್ ಶೇ.9, ಮುಂಬೈ ಶೇ.8, ಚೆನ್ನೈ ಶೇ.7, ಮೊಹಾಲಿ ಶೇ.4, ಅಹಮದಾಬಾದ್ ಶೇ.3ರಷ್ಟು ಪಾಲನ್ನು ಹೊಂದಿದೆ. ಇತ್ತೀಚಿನ ಬ್ಲಾಕ್ ಚೈನ್ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉದ್ಯೋಗಿಗಳಿಗೂ ಬೆಂಗಳೂರಲ್ಲೇ ಹೆಚ್ಚು ಸೃಷ್ಟಿಯಾಗುತ್ತಿದೆ.

Bengaluru stands number One in tech jobs

20ರಿಂದ 29 ವರ್ಷ ವಯಸ್ಸಿನ ಹಾಗೂ ತಂತ್ರಜ್ಞಾನದಲ್ಲಿ ಹೆಚ್ಚು ಆಸಕ್ತಿ ಇರುವ ಯುವಜನತೆ ಉದ್ಯೋಗಕ್ಕಾಗಿ ಬೆಂಗಳೂರನ್ನು ಇಷ್ಟಪಡುತ್ತಾರೆ. 55 ವರ್ಷ ಮೀರಿದ ಹಿರಿಯರೂ ತಂತ್ರಜ್ಞಾನ ಉದ್ಯೋಗಗಳತ್ತ ಆಕರ್ಷಿತರಾಗುತ್ತಿದ್ದಾರೆ.

ಆದರೆ 40-49 ವರ್ಷ ವಯಸ್ಸಿನ ಜನತೆ ಅಷ್ಟಾಗಿ ಆಕರ್ಷಿತರಾಗುತ್ತಿಲ್ಲ. ಎಂದು ಸಮೀಕ್ಷೆ ತಿಳಿಸಿದೆ. ತಂತ್ರಜ್ಞಾನ ವಲಯದಲ್ಲಿ ಉದ್ಯೋಗಿಗಳಿಗೆ ನಿರಂತರ ಬೇಡಿಕೆ ಇನ್ನೂ ಮುಂದುವರೆದಿದೆ ಎಂದು ಇಂಡೀಡ್ ಹೇಳಿದೆ.

English summary
With 20 percent share of jobs opportunities in technology based industry, Bengaluru has stands at number one in the contry, survey revealed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X