ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾಫ್ಟ್‌ವೇರ್ ಹಿಂದಿಕ್ಕಿದ ಹಾರ್ಡ್‌ವೇರ್‌ಗೆ ಹೆಚ್ಚು ಸಂಬಳ: ಬೆಂಗಳೂರೇ ಅಗ್ರಗಣ್ಯ

|
Google Oneindia Kannada News

ಬೆಂಗಳೂರು, ನವೆಂಬರ್ 22: ಹಾರ್ಡ್‌ವೇರ್ ನೆಟ್‌ವರ್ಕ್ ಮತ್ತು ಮಾಹಿತಿ ತಂತ್ರಜ್ಞಾನ ಹಾಗೂ ಅದರ ಸಂಬಂಧಿ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಸಂಬಳ ನೀಡುವ ಪರಿಪಾಠ ದೇಶದಲ್ಲಿ ಚಾಲ್ತಿಯಲ್ಲಿದ್ದು, ಆ ಪೈಕಿ ಬೆಂಗಳೂರು ನಗರ ಅತಿ ಹೆಚ್ಚು ಸಂಬಳ ನೀಡುವ ನಗರವಾಗಿ ಹೊರಹೊಮ್ಮಿದೆ.

ಸಾಂಪ್ರದಾಯಿಕ ಗ್ರಾಹಕರ ಸೇವಾ ವಲಯದಲ್ಲಿ ಹಾರ್ಡ್ ವೇರ್ ಮತ್ತು ಐಟಿ ಸಂಬಂಧಿ ಕ್ಷೇತ್ರಗಳಲ್ಲಿ ಸಂಬಳ ನೀಡುವ ವಿಚಾರಕ್ಕೆ ಬೆಂಗಳೂರು ಮುಂಚೂಣಿಯಲ್ಲಿದ್ದರೆ ಮುಂಬೈ ಮತ್ತು ದೆಹಲಿ ನಂತರದ ಸ್ಥಾನದಲ್ಲಿದೆ.

ಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಸಮೀಕ್ಷೆಅತಿ ಹೆಚ್ಚು ಸಂಬಳ ನೀಡುವ ನಗರ ಬೆಂಗಳೂರು: ಸಮೀಕ್ಷೆ

ಸೈನಾಪ್ಸಿಸ್ ಇಂಡಿಯಾ ಕಂಪನಿ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದ್ದು, ಬೆಂಗಳೂರು ನಗರದಲ್ಲಿ ಹಾರ್ಡ್ ವೇರ್ ಕ್ಷೇತ್ರದಲ್ಲಿ ಸರಾಸರಿ 15 ಲಕ್ಷ , ಐಟಿ ಹಾಗೂ ಐಟಿ ಸಂಬಂಧಿ ಕ್ಷೇತ್ರಗಳಲ್ಲಿ ಸರಾಸರಿ 12 ಲಕ್ಷ ಹಾಗೂ ಗ್ರಾಹಕರ ಸೇವಾವಲಯದಲ್ಲಿ ಸರಾಸರಿ 9 ಲಕ್ಷ ರೂಪಾಯಿಗಳ ಸಂಬಳ ನೀಡಿಕೆ ಜಾರಿಯಲ್ಲಿದ್ದು, ಇದು ದೇಶದ ಇತರೆ ಎಲ್ಲ ನಗರಗಳಿಗಿಂತ ನೀಡುವ ಅತಿ ಹೆಚ್ಚು ಸಂಬಳವಾಗಿದೆ.

Bengaluru stands first in paying highest salary across the country

ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಬಳವಾಗಿ 11,67,337 ಲಕ್ಷ ರೂ ನೀಡಲಾಗುತ್ತಿದ್ದು, ಮುಂಬೈನಲ್ಲಿ 9,03,929 ಲಕ್ಷ ರೂ, ದೆಹಲಿಯಲ್ಲಿ 8,99,486 ಲಕ್ಷ ರೂ ವೇತನ ನೀಡಲಾಗುತ್ತಿದೆ.

ವಿದೇಶದಲ್ಲಿ ದುಡಿಯುತ್ತಿರುವವರ ಪೈಕಿ ದಕ್ಷಿಣ ಭಾರತದ ರಾಜ್ಯದವರು ಮುಂಚೂಣಿಯಲ್ಲಿವಿದೇಶದಲ್ಲಿ ದುಡಿಯುತ್ತಿರುವವರ ಪೈಕಿ ದಕ್ಷಿಣ ಭಾರತದ ರಾಜ್ಯದವರು ಮುಂಚೂಣಿಯಲ್ಲಿ

ತಜ್ಞರ ಪ್ರಕಾರ ಹಾರ್ಡ್ ವೇರ್ ಮತ್ತು ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ಇಷ್ಟು ಅತಿ ಹೆಚ್ಚು ಸಂಬಳ ನೀಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದ್ದು, ವಿಶೇಷವಾಗಿ ಚಿಪ್ ಡಿಸೈನ್ ಹಾಗೂ ನ್ಯೂಯೇಜ್ ನೆಟ್‌ವರ್ಕಿಂಗ್ ಕ್ಷೇತ್ರದಲ್ಲಿ ದುಡಿಯುತ್ತಿರುವ ನಿಪುಣರಿಗೆ ಅತಿ ಹೆಚ್ಚು ಸಂಬಳ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.

ಭಾರತೀಯರು ಹೆಚ್ಚು ಚಿಂತೆಗೀಡಾಗಿರುವುದು ಯಾವುದರ ಬಗ್ಗೆ ಗೊತ್ತೇ?ಭಾರತೀಯರು ಹೆಚ್ಚು ಚಿಂತೆಗೀಡಾಗಿರುವುದು ಯಾವುದರ ಬಗ್ಗೆ ಗೊತ್ತೇ?

ಕಂಡಕ್ಟರ್ ತಯಾರಿಕಾ ಸಂಸ್ಥೆಯ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಶಿವಾನಂದ್ ಕೋಟೇಶ್ವರ ಅವರ ಪ್ರಕಾರ ಚಿಪ್ ಡಿಸೈನ್ ಉದ್ಯಮದಲ್ಲಿ ಭಾರತ ಸಾಕಷ್ಟು ಮುಂದುವರೆದಿದ್ದು, ಬೇಡಿಕೆಗೆ ತಕ್ಕಂತೆ ಇತರೆ ರಾಷ್ಟ್ರಗಳಿಗೆ ಪೂರೈಸಬೇಕಾದ ಒತ್ತಡದ ಹಿನ್ನೆಲೆಯಲ್ಲಿ ಚಿಪ್ ಡಿಸೈನ್ ತಜ್ಞರಿಗೆ ಅತಿ ಹೆಚ್ಚು ಸಂಬಳ ನೀಡಬೇಕಾದ ಅಗತ್ಯತೆ ಕಂಡುಬಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

English summary
According to new survey, Bengaluru stands first in paying highest salary across the country as Mumbai and Delhi followed by. Hardware and networking industry is paying highest salary followed by IT and ITes and consumer service sector.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X