• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಜ್ಞಾನದ ಊಟ

|

ಬೆಂಗಳೂರು, , ಜನವರಿ, 11: ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನದಲ್ಲಿ ಜ್ಞಾನದ ಊಟ. ಹುಡುಕಿದಷ್ಟು ಮುಗಿದ ಸಾಹಿತ್ಯ ಭಂಡಾರ. ಭೇಟಿ ನೀಡಿದವರಿಗೊಂದು ಉಚಿತ ಪುಸ್ತಕದ ಕೊಡುಗೆ.

ನಿಮ್ಮ ಮನೆಯಲ್ಲಿ ಹಳೆಯ ಪುಸ್ತಕಗಳಿದ್ದರೆ ದಯವಿಟ್ಟು ಅದನ್ನು ತೂಕಕ್ಕೆ ಹಾಕಬೇಡಿ. ಮತ್ತೊಬ್ಬರ ಜ್ಞಾನ ವೃದ್ಧಿಸಲು ಅದು ನೆರವಾಗಬಲ್ಲದು ಎಂಬ ಮಾತನ್ನು ಪುಸ್ತಕ ಪರಿಷೆ ಹೇಳುತ್ತಿತ್ತು. ಮೇಳಕ್ಕೆ ಭೇಟಿ ನೀಡಿದವರಿಗೆ ಒಂದು ಪುಸ್ತಕ ಉಚಿತ ನೀಡಲಾಗುತ್ತಿದೆ.[ಡಿವಿಜಿ ಮಂಕುತಿಮ್ಮನ ಕಗ್ಗಕ್ಕೆ ಸರಳ ಕನ್ನಡದ ಸ್ಪರ್ಶ]

ಜನವರಿ 11ರ ವರೆಗೆ (ಸೋಮವಾರ) ಸಂಜೆವರೆಗೆ ಪುಸ್ತಕ ಹಬ್ಬ ನಡೆಯಲಿದೆ. ‘ಸೃಷ್ಟಿ ವೆಂಚರ್ಸ್‌' ಆಯೋಜಿಸಿರುವ ಪುಸ್ಕ ಪರಿಷೆಗೆ ಸಾಹಿತ್ಯ ಪ್ರೇಮಿಗಳು, ವಿದ್ಯಾರ್ಥಿಗಳು ಭೇಟಿ ನೀಡುತ್ತಿದ್ದಾರೆ. ಮಹಾನಗರಿಯ ಜನರಲ್ಲಿ ಸಾಹಿತ್ಯ ಪ್ರೇಮ ಕಡಿಮೆಯಾಗುತ್ತಿದೆ ಎಂಬ ಮಾತನ್ನು ಪುಸ್ತಕ ಪರಿಷೆ ಸುಳ್ಳು ಎಂದು ಸಾರಿ ಹೇಳಿದೆ. ಬನ್ನಿ ಪುಸ್ತಕ ಪರಿಷೆಯಲ್ಲಿ ನಾವು ಒಂದು ಸುತ್ತು ಹಾಕಿಕೊಂಡು ಬರೋಣ...

 ಯಾವ ಪುಸ್ತಕಗಳಿವೆ

ಯಾವ ಪುಸ್ತಕಗಳಿವೆ

ಪಂಪನಿಂದ ಹಿಡಿದು ಆಧುನಿಕ ಯುವ ಕವಿ, ಸಾಹಿತಿಗಳವರೆಗೆ, ಆಧ್ಯಾತ್ಮದಿಂದ ಆಧುನಿಕ ಆವಿಷ್ಕಾರಗಳ ವರೆಗೆ, ಅಡುಗೆ ಮನೆಯಿಂದ ಅಂತರಿಕ್ಷದವರೆಗೆ, ಅಂತರಂಗದ ಒಳತೋಟಿಗಳಿಂದ ಹಿಡಿದು ಬಹಿರಂಗದ ಪ್ರವಚನಗಳವರೆಗೆ ಹೀಗೆ ಅಲ್ಲಿ ಬಗೆ ಬಗೆಯ ಪುಸ್ತಕಗಳು ಲಭ್ಯ.

ಭರಪೂರ ಯಶಸ್ಸು

ಭರಪೂರ ಯಶಸ್ಸು

ಜನರ ಪ್ರತಿಕ್ರಿಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ಮುಂದೆ ಇದನ್ನು ವಾರಗಳ ಕಾಲ ನಡೆಸುವ ಉದ್ದೇಶವಿದೆ. ಇಲ್ಲಿಗೆ ಭೇಟಿ ನೀಡಲು ಸಾಧ್ಯವಾಗದವರು ನೇರವಾಗಿ ನಮ್ಮ ಕಚೇರಿಗೆ ಬರಬಹುದು ಎಂದು ಪರಿಷೆಯ ಸಂಘಟಕ ನಾಗರಾಜ್‌ ನಾವುಂದ ಹೇಳಿದರು.(ದೂ. 9945003479)

ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು

ಸಾಂಸ್ಕೃತಿಕ ಕಾರ್ಯಕ್ರಮದ ಮೆರುಗು

ಒಂದೆಡೆ ಯಾವ ಪುಸ್ತಕ ತೆಗೆದುಕೊಳ್ಳಬೇಕು ಎಂದು ನಾವು ಹುಡುಕುತ್ತಿದ್ದರೆ, ಮತ್ತೊಂದೆಡೆ ಕಿವಿಗೆ ಇಂಪಾದ ಸಂಗೀತ. ಬೆಳಿಗ್ಗೆ 9 ರಿಂದ ರಾತ್ರಿ 9ರ ವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗುತ್ತಿರುತ್ತವೆ ಎಂದು ಸಂಘಟಕರು ತಿಳಿಸಿದರು.

ಟ್ರಾಫಿಕ್ ಪೊಲೀಸ್ ಮಾಹಿತಿ

ಟ್ರಾಫಿಕ್ ಪೊಲೀಸ್ ಮಾಹಿತಿ

ಪುಸ್ತಕ ಮೇಳದಲ್ಲಿ ಟ್ರಾಫಿಕ್ ಪೊಲೀಸರು ಅಪಘಾತ ತಡೆ, ಕಾನೂನು ಪಾಲನೆ ಬಗ್ಗೆ ಮಾಹಿತಿ ನೀಡಿದ್ದು ವಿಶೇಷವಾಗಿತ್ತು. ಜನರೊಂದಿಗೆ ನೇರವಾಗಿ ಬೆರೆತ ಟ್ರಾಫಿಕ್ ಪೊಲೀಸರು ಅನೇಕ ಅನುಮಾನಗಳಿಗೆ, ಪ್ರಶ್ನೆಗೆ ಉತ್ತರಿಸಿದರು.

ಕಿಂಚಿತ್ತು ಹಣ ಪುಸ್ತಕಕ್ಕೆ ಮೀಸಲಿಡಿ

ಕಿಂಚಿತ್ತು ಹಣ ಪುಸ್ತಕಕ್ಕೆ ಮೀಸಲಿಡಿ

ಪ್ರತಿಯೊಬ್ಬರೂ ಪುಸ್ತಕ ಕೊಂಡು ಓದಬೇಕು. ಅದು ಯಾವುದೇ ಭಾಷೆಯದ್ದಾಗಿರಲಿ. ಇತರೆ ಕಾರ್ಯಗಳಿಗೆ ಖರ್ಚು ಮಾಡುವ ಹಣದಲ್ಲಿ ಶೇ. 10 ರಷ್ಟನ್ನಾದರೂ ಪುಸ್ತಕ ಖರೀದಿಗೆ ವಿನಿಯೋಗಿಸಬೇಕು ಎಂದು ಲೇಕಖ ಗಿರಿಮನೆ ಶ್ಯಾಮರಾವ್ ಹೇಳಿದರು.

ಗಣಿತ ಕಬ್ಬಿಣದ ಕಡಲೆಯಲ್ಲ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: Srushti Ventures book fair from attracts thousands of people. Encouraged by the good response for its previous book fairs, Srushti Ventures conduct a three-day ‘Pustaka Parishe' (book fair) from January 9 to 11.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more