ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ದಕ್ಷಿಣದಲ್ಲಿ 2,014 ಸಕ್ರಿಯ ಕಂಟೈನ್ಮೆಂಟ್ ಝೋನ್

|
Google Oneindia Kannada News

ಬೆಂಗಳೂರು, ಜುಲೈ 20 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣ ಹೆಚ್ಚುತ್ತಲೇ ಇದೆ. ನಗರದಲ್ಲಿ ಜಾರಿಯಲ್ಲಿರುವ ಒಂದು ವಾರದ ಲಾಕ್ ಡೌನ್ ಬುಧವಾರ ಮುಂಜಾನೆ 5 ಗಂಟೆಗೆ ಅಂತ್ಯಗೊಳ್ಳಲಿದೆ. ಲಾಕ್ ಡೌನ್ ವಿಸ್ತರಣೆ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

Recommended Video

ನೂತನ BBMP ಕಮಿಷನರ್ Manjunath Prasad ಕೊರೊನ ನಿಯಂತ್ರಿಸುತ್ತಾರಾ ? | Oneindia Kannada

ಬೆಂಗಳೂರು ನಗರದಲ್ಲಿ ಭಾನುವಾರ 2,156 ಕೊರೊನಾ ವೈರಸ್ ಸೋಂಕಿನ ಹೊಸ ಪ್ರಕರಣ ದಾಖಲಾಗಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 31,777ಕ್ಕೆ ಏರಿಕೆಯಾಗಿದೆ. ನಗರದಲ್ಲಿನ ಒಟ್ಟು ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ 6,160.

ಬೆಂಗಳೂರು ನಗರದಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ ಬೆಂಗಳೂರು ನಗರದಲ್ಲಿ ಲಾಕ್ ಡೌನ್ ವಿಸ್ತರಣೆ ಇಲ್ಲ

ನಗರದ ದಕ್ಷಿಣ ಭಾಗದಲ್ಲಿಯೇ ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆ ಹೆಚ್ಚಾಗಿದೆ. ಬಿಬಿಎಂಪಿ ವಾರ್ ರೂಂ ಮಾಹಿತಿ ಪ್ರಕಾರ ದಕ್ಷಿಣದಲ್ಲಿ 2014 ಸಕ್ರಿಯ ಕಂಟೈನ್ಮೆಂಟ್ ಝೋನ್‌ಗಳಿವೆ. ಪೂರ್ವದಲ್ಲಿ 1056, ಪಶ್ಚಿಮದಲ್ಲಿ 976, ಬೊಮ್ಮನಹಳ್ಳಿಯಲ್ಲಿ 733, ಆರ್. ಆರ್. ನಗರ ವಲಯದಲ್ಲಿ 405, ಮಹದೇವಪುರದಲ್ಲಿ 358, ಯಲಹಂಕದಲ್ಲಿ 262 ಮತ್ತು ದಾಸರಹಳ್ಳಿಯಲ್ಲಿ 103 ಝೋನ್‌ಗಳಿವೆ.

ಆ ಭಗವಂತ ಬಂದರೂ ಬೆಂಗಳೂರು ಕಾಪಾಡುವುದು ಕಷ್ಟ!ಆ ಭಗವಂತ ಬಂದರೂ ಬೆಂಗಳೂರು ಕಾಪಾಡುವುದು ಕಷ್ಟ!

Bengaluru South Has More Number Of Containment Zones

ವಾರ್ಡ್‌ಗಳ ಲೆಕ್ಕ : ಕಂಟೈನ್ಮೆಂಟ್ ಝೋನ್‌ಗಳನ್ನು ವಾರ್ಡ್‌ವಾರು ವಿಭಾಗ ಮಾಡಿದರೆ ದಕ್ಷಿಣದಲ್ಲಿ 44, ಪಶ್ಚಿಮದಲ್ಲಿ 41, ಪೂರ್ವದಲ್ಲಿ 30, ಬೊಮ್ಮನಹಳ್ಳಿಯಲ್ಲಿ 15, ಮಹದೇವಪುರದಲ್ಲಿ 11, ಯಲಹಂಕದಲ್ಲಿ 8 ವಾರ್ಡ್‌ಗಳಿವೆ.

ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ!ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಎತ್ತಂಗಡಿ!

ಬಿಬಿಎಂಪಿಯ ಮಾಹಿತಿಯಂತೆ 7,746 ರಸ್ತೆಗಳಲ್ಲಿ ಕೋವಿಡ್ - 19 ಸೋಂಕಿನ ಪ್ರಕರಣ ಪತ್ತೆಯಾಗಿದೆ. 945 ಅಪಾರ್ಟ್‌ಮೆಂಟ್, 25 ಕೊಳಗೇರಿ ಪ್ರದೇಶ ಮತ್ತು ಒಂದು ಹೋಟೆಲ್‌ನಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪತ್ತೆಯಾಗಿವೆ.

Mum

English summary
Active containment zones in the Bengaluru city 6,160. As per Bruhat Bengaluru Mahanagara Palike war room data Bengaluru south has 2,014 active containment zones.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X