ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿದೇಶದಿಂದ ಡ್ರಗ್ಸ್‌ ತರಿಸಿ ಮಾರಾಟ ಮಾಡುತ್ತಿದ್ದ ಬೆಂಗಳೂರು ಟೆಕ್ಕಿ ಬಂಧನ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 30: ವಿದೇಶದಿಂದ ಮಾದಕ ವಸ್ತುಗಳನ್ನು ತರಿಸಿ ಮಾರಾಟ ಮಾಡುತ್ತಿದ್ದ ಬೆಂಗಳೂರು ಮೂಲದ ಟೆಕ್ಕಿಯೊಬ್ಬನನ್ನು ಸಿಸಿಬಿ ಪೊಲೀಸರು ಇಂದು ಬಂಧಿಸಿದ್ದಾರೆ.

ಇನ್ನು ಟೆಕ್ಕಿಯ ಮನೆಯಲ್ಲಿ 4.99 ಗ್ರಾಂ LSD, MH ಸೀರೀಸ್ ಪ್ಯಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್, OCB ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್, 100 ml ಕೆಮಿಕಲ್ ಅಯಿಲ್ ಜಪ್ತಿ ಮಾಡಲಾಗಿದೆ. ಈ ಬಗ್ಗೆ ಹೆಚ್​ಎಸ್​ಆರ್​ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನ ಡ್ರಗ್ಸ್ ಕೇಸ್: ಸಿಪಿಐಎಂ ಕಾರ್ಯದರ್ಶಿ ಪುತ್ರ ಬಿನೀಶ್ ಬಂಧನ

ಸಾರ್ಥಕ್ ಆರ್ಯ ಬಂಧಿತ ಟೆಕ್ಕಿ. ವಿದೇಶದಿಂದ ಮಾದಕವಸ್ತು ತರಿಸಿ ನಗರದಲ್ಲಿ ಮಾರಾಟ ಮಾಡುತ್ತಿದ್ದ ಸಾರ್ಥಕ್ ಆರ್ಯ ಬೆಂಗಳೂರಿನ ಕಂಪನಿಯೊಂದರಲ್ಲಿ ಸಾಫ್ಟ್​ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.

Bengaluru Software Engineer Arrested By CCB For Selling Foreign Drugs

ಬಂಧಿತ ಸಾರ್ಥಕ್, ಫಾರಿನರ್ಸ್ ಪೋಸ್ಟ್ ಮೂಲಕ ಬೆಂಗಳೂರಿಗೆ ಡ್ರಗ್ಸ್ ತರಿಸುತ್ತಿದ್ದ. ಬಳಿಕ ಅದನ್ನು ಯಾರಿಗೆ ತಲುಪಬೇಕೋ ಅವರಿಗೆ ತಲುಪಿಸುತ್ತಿದ್ದ. ಫಾರಿನರ್ಸ್ ಪೋಸ್ಟ್ ಕೊರಿಯರ್ ಮೇಲೆ ಸಿಸಿಬಿ ನಿಗಾ ಇಟ್ಟಿತ್ತು.

ಬಂಧಿತನ ಮನೆಯಿಂದ 4.99 ಗ್ರಾಂ ಎಲ್ ಎಸ್ ಡಿ , ಎಮ್‌ ಹೆಚ್ ಸಿರೀಸ್ ಪ್ಯಾಕೆಟ್ ಸ್ಕೇಲ್, ಬ್ರೌನ್ ಸ್ಮೋಕ್ ಪೇಪರ್ ಪ್ಯಾಕೆಟ್, ಒಸಿಬಿ ಸ್ಲಿಮ್ ಸ್ಮೋಕ್ ಪೇಪರ್ ಪ್ಯಾಕೆಟ್, ರಾ ಟಿಪ್ಸ್ ಸ್ಮೋಕ್ ಪೇಪರ್ ಪ್ಯಾಕೆಟ್, 100ಎಂಎಲ್ ಕೆಮಿಕಲ್ ಆಯಿಲ್ ಅನ್ನು ಸಿಸಿಬಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಇತ್ತೀಚಿಗೆ ಬೆಲ್ಜಿಯಂನಿಂದ ಬೆಂಗಳೂರಿಗೆ ಬಂದ ಕೊರಿಯರ್ ಟ್ರ್ಯಾಕ್ ಮಾಡಿ ಪೋಸ್ಟ್ ಅಫೀಸಿನಲ್ಲಿ ಪರಿಶೀಲನೆ ಮಾಡಲಾಗಿತ್ತು. ಚಾಮರಾಜಪೇಟೆ ಫಾರಿನರ್ಸ್ ಪೋಸ್ಟ್ ಆಫೀಸ್​ನಲ್ಲಿ ಸಿಸಿಬಿ ಪೊಲೀಸರು ಆ ಕೊರಿಯರ್ ಅನ್ನು ಪರಿಶೀಲನೆ ಮಾಡಿದ್ದರು.

ಆಗ ಟ್ರ್ಯಾಕ್ ರೆಕಾರ್ಡ್ ಮೂಲಕ ಹೆಚ್​ಎಸ್​ಆರ್ ಲೇಔಟ್​ನ ಟೆಕ್ಕಿ ಸಾರ್ಥಕ್ ಆರ್ಯ ಎಂಬಾತನ ಮನೆ ಶೋಧ ನಡೆಸಿದ ಸಿಸಿಬಿ ವಿಶೇಷ ವಿಚಾರಣಾ ದಳದ ಸಿಬ್ಬಂದಿಗೆ ಆತನ ಮನೆಯಲ್ಲಿ ವಿದೇಶಿ ಮೂಲದ ಮಾದಕವಸ್ತು ಪತ್ತೆಯಾಗಿತ್ತು.

English summary
Bengaluru Techie Arreste by CCB police for selling foreign drugs in Bengauru On Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X