ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆಗಸ್ಟ್ ಅಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಶಿವಾನಂದ ಫ್ಲೈಓವರ್

|
Google Oneindia Kannada News

ಬೆಂಗಳೂರು, ಆಗಸ್ಟ್ 04: ಶಿವಾನಂದ ವೃತ್ತದ ಫ್ಲೈಓವರ್ ಆಗಸ್ಟ್ ಅಂತ್ಯದಲ್ಲಿ ಓಡಾಟಕ್ಕೆ ಮುಕ್ತವಾಗಲಿದೆ.

ಫ್ಲೈಓವರ್ ಶುರುವಾದ ಬಳಿಕ ಮೂರು ಸರ್ಕಾರ ಬದಲಾಯಿತು, ನಾಲ್ಕು ಮೇಯರ್‌ಗಳು ಬದಲಾವಣೆಯಾಯಿತು ಅಂತೂ ಇದೀಗ ಫ್ಲೈಓವರ್ ಆರಂಭಕ್ಕೆ ಮುಹೂರ್ತ ಸಿಕ್ಕಿದೆ.

493 ಮೀಟರ್ ಉದ್ದದ ಫ್ಲೈಓವರ್ ಕಾಮಗಾರಿ ಶೇ.82ರಷ್ಟು ಪೂರ್ಣಗೊಂಡಿದೆ. 16 ಪಿಲ್ಲರ್‌ಗಳಲ್ಲಿ 15 ಪಿಲ್ಲರ್‌ಗಳು ರೆಡಿ ಆಗಿವೆ. 16ನೇ ಪಿಲ್ಲರ್ ಸಮೀಪ ನೀರಿನ ಪೈಪ್‌ಲೈನ್ ಇದ್ದು ಅದನ್ನು ಬೇರೆಗೆ ಸ್ಥಳಾಂತರಿಸುವ ಕಾರ್ಯವಿರುವ ಕಾರಣ ಕಾಮಗಾರಿ ಸ್ವಲ್ಪ ನಿಧಾನವಾಗುತ್ತಿದೆ.

ಶಿವಾನಂದ ವೃತ್ತ ಫ್ಲೈಓವರ್ ಕಾಮಗಾರಿ ಮುಕ್ತಾಯ ಯಾವಾಗ?ಶಿವಾನಂದ ವೃತ್ತ ಫ್ಲೈಓವರ್ ಕಾಮಗಾರಿ ಮುಕ್ತಾಯ ಯಾವಾಗ?

ಫ್ಲೈಓವರ್‌ನ ಎರಡು ಬದಿ ಇರುವ ರಸ್ತೆಯನ್ನು ನವೀಕರಿಸಬೇಕಿದೆ, ಸೋಮವಾರ ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಫ್ಲೈಓವರ್ ಕಾಮಗಾರಿ ಪರಿಶೀಲನೆ ನಡೆಸಿದ್ದರು.

ನೀರು ಹಾಗೂ ಒಳಚರಂಡಿ ಪೈಪ್‌ಗಳಿದ್ದ ಕಾರಣ ಅವುಗಳನ್ನು ಸ್ಥಳಾಂತರಿಸಲು ನಾಲ್ಕು ತಿಂಗಳ ಸಮಯ ಹಿಡಿಯಿತು, ಬಳಿಕ ಫ್ಲೈಓವರ್ ಉದ್ದವನ್ನು ವಿಸ್ತರಿಸಲಾಯಿತು. ಹಾಗೆಯೇ ಈ ಯೋಜನೆಗೆ ಅನುಮತಿ ಪಡೆಯಲು ಸಾಕಷ್ಟು ಕಾಲಾವಕಾಶ ಹಿಡಿಯಿತು.

ಫ್ಲೈಓವರ್ ಮೊದಲು 326 ಮೀಟರ್ ಉದ್ದದ ಯೋಜನೆಯಾಗಿತ್ತು, ಬಳಿಕ ಉದ್ದವನ್ನು ವಿಸ್ತರಿಸಲಾಗಿತ್ತು, ಹಾಗೆಯೇ 19.8 ಕೋಟಿ ಯೋಜನೆಯು ಅಂತಿಮದಲ್ಲಿ 39.5 ಕೋಟಿ ರೂ. ಯೋಜನೆಯಾಗಿತ್ತು ಎಂದು ಗೌರವ್ ಗುಪ್ತ ಹೇಳಿದ್ದಾರೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಜಲಮಂಡಳಿಯಲ್ಲಿ 450 ಮಿಲಿ ಮೀಟರ್ ನೀರಿನ ಪೈಪ್ ಲೈನ್ ಬೇರೆಡೆ ಸ್ಥಳಾಂತರಿಸಲಾಗಿದೆ. ಅದರಡಿ 700 ಎಂಎಂ ನೀರಿನ ಪೈಪ್ ಲೈನ್ ಇದ್ದ ಪರಿಣಾಮ ಪಿಲ್ಲರ್ ಕಾಮಗಾರಿ ಮಾಡಲು ಸಾಧ್ಯವಾಗಿರಲಿಲ್ಲ. ಇದೀಗ ಪೈಪ್ ಲೈನ್ ಬದಲಿಸಿದ್ದು, ಪಿಲ್ಲರ್ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ.

ಮೇಲ್ಸೇತುವೆ ಎರಡು ಕಡೆ ರಸ್ತೆ ದುರಸ್ತಿಯಾಗಬೇಕಿದೆ. ನಂತರ ಬಂದ್ ಮಾಡಿರುವ ರಸ್ತೆಗಳನ್ನು ಹಂತ-ಹಂತವಾಗಿ ತೆರವು ಮಾಡಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು.

ಈ ಭಾಗದಲ್ಲಿ ಸಂಚಾರ ದಟ್ಟಣೆಯಾಗದಂತೆ ತ್ವರಿತವಾಗಿ ಕಾಮಗಾರಿ ಪೂರ್ಣಗೊಳಿಸಿಸುವಂತೆ ಮತ್ತು ಕಾಮಗಾರಿ ಮುಗಿದಿರುವ ಕಡೆ ಸರ್ವೀಸ್ ರಸ್ತೆಯನ್ನು ಸಾರ್ವಜನಿಕರ ಓಡಾಟಕ್ಕೆ ಅನುವು ಮಾಡಿಕೊಡಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಜನರ ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗುವಂತೆ ಕಾಮಗಾರಿ ನಡೆದ ಜಾಗದಲ್ಲಿ ಇರುವ ಉಪಕರಣಗಳು, ನಿರ್ಮಾಣ ವಸ್ತುಗಳನ್ನು ತೆರವುಗೊಳಿಸಲು ಕ್ರಮಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ.

 ಮೊದಲು ಎಷ್ಟು ಮೀಟರ್ ಫ್ಲೈಓವರ್‌ಗೆ ಅನುಮತಿ ಸಿಕ್ಕಿತ್ತು?

ಮೊದಲು ಎಷ್ಟು ಮೀಟರ್ ಫ್ಲೈಓವರ್‌ಗೆ ಅನುಮತಿ ಸಿಕ್ಕಿತ್ತು?

ಈ ಮೊದಲು 326.25ಮೀಟರ್ ಉದ್ದದ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿತ್ತು, ಆದರೆ ಕೆಲ ಸ್ಥಳೀಯರು ನ್ಯಾಯಾಲಯದ ಮೊರೆ ಹೋಗಿದ್ದರು. ನ್ಯಾಯಾಲಯವು ಸಂಚಾರ ದಟ್ಟಣೆ ಕಡಿಮೆ ಮಾಡಲು ಮೇಲ್ಸೇತುವೆ ಅಗತ್ಯವಿದೆ ಎಂದು ಹೇಳಿತ್ತು.

 ಕಾಮಗಾರಿ ವಿಳಂಬವಾಗಿದ್ದೇಕೆ?

ಕಾಮಗಾರಿ ವಿಳಂಬವಾಗಿದ್ದೇಕೆ?

2017ರ ಜೂನ್‌ನಿಂದ ಆರಂಭವಾದ ಕಾಮಗಾರಿ ಈಗಾಗಲೇ 5 ವರ್ಷ ಪೂರ್ಣಗೊಂಡಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗದಲ್ಲಿ ಮೂರು ನೀರು ಹಾಗೂ ಎರಡು ಸ್ಯಾನಿಟರಿ ಕೊಳವೆ ಬದಲಾಯಿಸಬೇಕಿತ್ತು. ಆ ಬಗ್ಗೆ ಒಟ್ಟಾರೆ ಕಾಮಗಾರಿ ಪೂರ್ಣಗೊಳಿಸುವುದಕ್ಕೆ ಒಂಬತ್ತು ತಿಂಗಳು ಅಂದರೆ, 2020ರ ಮೇ ವೇಳೆಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಹೇಳಲಾಗಿತ್ತು, ಆದರೆ ಕೊರೊನಾ ಲಾಕ್‌ಡೌನ್‌ನಿಂದಾಗಿ ಕಾಮಗಾರಿ ಮತ್ತಷ್ಟು ವಿಳಂಬವಾಗಿತ್ತು.

 3 ತಿಂಗಳ ಗಡುವು ನೀಡಲಾಗಿತ್ತು

3 ತಿಂಗಳ ಗಡುವು ನೀಡಲಾಗಿತ್ತು

ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿಯನ್ನು 3 ತಿಂಗಳಲ್ಲಿ ಪೂರ್ಣಗೊಳಿಸಿ ಸಾರ್ವಜನಿಕ ಓಡಾಟಕ್ಕೆ ಅನುವು ಮಾಡಿಕೊಡಬೇಕು. ಜೊತೆಗೆ ಶಿವಾನಂದ ವೃತ್ತದ ಬಳಿಯ ರೈಲ್ವೆ ಹಳಿ ಬಳಿ ಸುಗಮ ವಾಹನ ಸಂಚಾರಕ್ಕೆ ಹೆಚ್ಚುವರಿ ಬಾಕ್ಸ್ ಅಳವಡಿಸಲು ರೈಲ್ವೆ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಕ್ರಮಕೈಗೊಳ್ಳುವಂತೆ ಗೌರವ್ ಗುಪ್ತಾ ಫೆಬ್ರವರಿಯಲ್ಲಿ ಸೂಚನೆ ನೀಡಿದ್ದರು.

Recommended Video

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಮನೆ ಮತ್ತು ಕಚೇರಿ ಮೇಲೆ ಐಟಿ ದಾಳಿ | Oneindia Kannada
 ಫ್ಲೈಓವರ್‌ನಲ್ಲಿ 16 ಪಿಲ್ಲರ್‌ಗಳ ಅಳವಡಿಕೆ

ಫ್ಲೈಓವರ್‌ನಲ್ಲಿ 16 ಪಿಲ್ಲರ್‌ಗಳ ಅಳವಡಿಕೆ

ಶಿವಾನಂದ ವೃತ್ತದ ಬಳಿ 493 ಮೀಟರ್ ಉದ್ದದ ಮೇಲುಸೇತುವೆಯನ್ನು ಕೈಗೆತ್ತಿಕೊಂಡಿದ್ದು, ಅದಕ್ಕೆ 16 ಪಿಲ್ಲರ್​​ಗಳಿವೆ. ಅದರಲ್ಲಿ ಈಗಾಗಲೇ15 ಪಿಲ್ಲರ್​​ಗಳ ಕಾಮಗಾರಿ ಪೂರ್ಣಗೊಂಡಿದ್ದು, 1 ಪಿಲ್ಲರ್‌ ಕಾಮಗಾರಿ ಪ್ರಗತಿಯಲ್ಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮುಂಭಾಗ ಜಲಮಂಡಳಿಯಿಂದ 450 ಎಂ.ಎಂನ ನೀರಿನ ಪೈಪ್ ಲೈನ್​ನ್ನು ಈಗಾಗಲೇ ಬೇರೆಡೆ ಸ್ಥಳಾಂತರಿಸಿದ್ದು, ಅದರಡಿ 700 ಎಂ.ಎಂನ ನೀರಿನ ಪೈಪ್ ಲೈನ್ ಇರುವುದರಿಂದ ಒಂದು ಪಿಲ್ಲರ್ ಕಾಮಗಾರಿ ಬಾಕಿಯಿದೆ. ಈ ಪೈಕಿ 7 ದಿನಗಳ ಕಾಲ ಸಂಚಾರಿ ಪೊಲೀಸ್ ಇಲಾಖೆಯಿಂದ ಮಾರ್ಗ ಬದಲಾವಣೆಗೆ ಅನುಮತಿ ಪಡೆದು ತ್ವರಿತವಾಗಿ ನೀರಿನ ಪೈಪ್ ಲೈನ್ ಬೇರೆಡೆ ಸ್ಥಳಾಂತರಿಸಿ ಪಿಲ್ಲರ್ ಕಾಮಗಾರಿ ಪೂರ್ಣಗೊಳಿಸುವಂತೆ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದರು.

English summary
Bengaluru: The Flyover At Shivananda Circle Will Be Ready By August End.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X