ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಿರಿಯ ನಾಗರಿಕರ ಸಾಮಾಜಿಕ ಕೆಲಸಕ್ಕೊಂದು ಸಲಾಂ

|
Google Oneindia Kannada News

ಬೆಂಗಳೂರು, ಜೂ. 02: ಸರ್ಕಾರಿ ಅಥವಾ ಖಾಸಗಿ ಕೆಲಸ ಯಾವುದರಲ್ಲೇ ಇರಲಿ ನಿವೃತ್ತಿಯಾದ ನಂತರ ಏನು ಮಾಡುತ್ತಾರೆ? ಆರಾಮಾಗಿ ಪಾರ್ಕ್ ನಲ್ಲಿ ಸಂಜೆ ಹರಟೆ ಹೊಡೆಯುತ್ತ, ಇಲ್ಲವೇ ದೂರದ ಊರಲ್ಲಿ ಒಂದು ಮನೆಯನ್ನೋ, ಅಲ್ಪ ಜಮೀನನ್ನೋ ತೆಗೆದುಕೊಂಡು ನೆಮ್ಮದಿಯ ಜೀವನ ಕಳೆಯುವುದು ಸಾಮಾನ್ಯ. ಆದರೆ ಬೆಂಗಳೂರಿನ ಹಿರಿಯ ನಾಗರಿಕರ ಗುಂಪೊಂದು ಇದೆಲ್ಲದರ ಜತೆಗೆ ಸಾಮಾಜಿಕ ಕೆಲಸವೊಂದನ್ನು ಮಾಡುತ್ತಿದೆ.

ಅನಾಥ ಮಕ್ಕಳ ಶಿಕ್ಷಣಕ್ಕೆ ಟೊಂಕ ಕಟ್ಟಿ ನಿಂತಿರುವ ಹಿರಿಯ ನಾಗರಿಕರ ದಿನಚರಿಯ ಕತೆ ಕೇಳಲೇಬೇಕು. 91 ವರ್ಷದ ಪಾರ್ಥಸಾರಥಿ ಪ್ರತಿದಿನ ಬೆಂಗಳೂರು ಹೊರವಲಯದ ಹೊಸಕೋಟೆ ಪ್ರಯಾಣಿಸುತ್ತಾರೆ. ಅಲ್ಲಿಯ ಅನಾಥ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಅಮೆರಿಕದಿಂದ ಹಿಂದಿರಿಗಿರುವ ಪಾರ್ಥಸಾರಥಿ ತಮ್ಮ ಮನೆಯ ಕೆಲಸ ಎಂದುಕೊಂಡೇ ಮಾಡುತ್ತಿದ್ದಾರೆ.[26 ಮೈಲಿ ಓಡಲು 92 ವರ್ಷದ ಅಜ್ಜಿಗೆ 7 ಗಂಟೆ ಸಾಕು!]

ಸೀನಿಯರ್ ಸಿಟಿಜನ್ ಹೆಸರಿನ ಎನ್ ಜಿಒ ವೊಂದು 2001 ರಲ್ಲಿ ಆರಂಭವಾಗಿತ್ತು. ಪಾರ್ಥಸಾರಥಿ ಅದರ ಒಬ್ಬ ಸದಸ್ಯರಾಗಿ ಅಂದಿನಿಂದ ಕಾರ್ಯನಿರ್ವಹಿಸುತ್ತ ಬಂದಿದ್ದಾರೆ. ಅನಾಥ ಮಕ್ಕಳು ಪ್ರಾಥಮಿಕ ಶಿಕ್ಷಣವನ್ನು ಹೇಗೋ ಪಡೆದುಕೊಳ್ಳುತ್ತಾರೆ. ಆದರೆ ಅವರಿಗೆ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಸಾಧ್ಯವಾಗುವುದಿಲ್ಲ. ಸರ್ಕಾರ ಇವರ ಉನ್ನತ ಶಿಕ್ಷಣದ ಬಗ್ಗೆ ಗಮನ ನೀಡಬೇಕಿದೆ ಎಂದು ಹಿರಿಯ ಸದಸ್ಯ ಪಾರ್ಥಸಾರಥಿ ಹೇಳುತ್ತಾರೆ. ಎನ್ ಜಿಒದ ಮತ್ತಷ್ಟು ಮಾಹಿತಿ ಪಡೆಯಲು ಇಲ್ಲಿ ಕ್ಲಿಕ್ಕಿಸಿ [ಚಿತ್ರಗಳು ಫೇಸ್ ಬುಕ್]

ಹಿರಿಯನಾಗರಿಕರ ಫೇಸ್ ಬುಕ್ ಖಾತೆ

85 ವರ್ಷದ ಭರತ್ ಸರೋನ್ ವಾಲಾ ಅಧ್ಯಕ್ಷ

85 ವರ್ಷದ ಭರತ್ ಸರೋನ್ ವಾಲಾ ಅಧ್ಯಕ್ಷ

ಎನ್ ಜಿಒ ದ ಅಧ್ಯಕ್ಷ 85 ವರ್ಷದ ಭರತ್ ಸರೋನ್ ವಾಲಾ, ಇಂಥ ಕೆಲಸ ಮಾಡಲು ನಮಗೆ ತುಂಬಾ ಸಂತಸವಾಗುತ್ತಿದೆ. ಇದನ್ನು ನಿರಂತರವಾಗಿ ಮುಂದುವರಿಸಿಕೊಂಡು ಬಂದಿದ್ದೇವೆ ಎಂದು ಹೇಳುತ್ತಾರೆ.

70 ಹಿರಿಯ ನಾಗರಿಕರು ಸದಸ್ಯರು

70 ಹಿರಿಯ ನಾಗರಿಕರು ಸದಸ್ಯರು

2001 ರಲ್ಲಿ ಎನ್ ಜಿಒ ಆರಂಭವಾದಾಗ ಕೇವಲ ನಾಲ್ಕು ಜನ ಸದಸ್ಯರಿದ್ದರು. ಆದರೆ ಇಂದು ಸದಸ್ಯರ ಸಂಖ್ಯೆ 70 ಕ್ಕೆ ಏರಿದೆ. ಪ್ರತಿಯೊಬ್ಬರು ತಮ್ಮ ಕ್ಷೇತ್ರ ವ್ಯಾಪ್ತಿಯ ಅನಾಥ ಮಕ್ಕಳನ್ನು ಗುರುತಿಸಿ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ.

ಏನೇನು ಸೌಲಭ್ಯ ನೀಡಲಾಗುತ್ತಿದೆ?

ಏನೇನು ಸೌಲಭ್ಯ ನೀಡಲಾಗುತ್ತಿದೆ?

ಅನಾಥ ಮಕ್ಕಳಿಗೆ ಬೆಳಗಿನ ತಿಂಡಿ ನೀಡಲಾಗುತ್ತಿದೆ. ಇದರೆ ಜತೆಗೆ ಶಿಕ್ಷಣದ ಗುಣ ಮಟ್ಟ ಸುಧಾರಣೆ ಮತ್ತು ಆರೋಗ್ಯ ತಪಾಸಣೆ ಎಂಬ ಸಂಗತಿಗಳನ್ನು ಕಟ್ಟಿನಿಟ್ಟಾಗಿ ಪಾಲಿಸಿಕೊಂಡು ಬರಲಾಗುತ್ತಿದೆ.

ಸಮತೋಲಿತ ಆಹಾರ ಪರಿಕಲ್ಪನೆ

ಸಮತೋಲಿತ ಆಹಾರ ಪರಿಕಲ್ಪನೆ

ಹೊಸಕೋಟೆಯ ಮೂರು ಹಳ್ಳಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಪೌಷ್ಟಿಕಾಂಶ ಕೊರತೆಯಿಂದ ನರಳುತ್ತಿರುವವರನ್ನು ಗುರುತಿಸಿ ಸಮತೋಲಿತ ಆಹಾರ ನೀಡಲಾಗುತ್ತಿದೆ.

ಕಾರ್ಪೋರೇಟ್ ಕಂಪನಿಗಳ ಸಹಕಾರ

ಕಾರ್ಪೋರೇಟ್ ಕಂಪನಿಗಳ ಸಹಕಾರ

ಬೆಂಗಳೂರಿನ ಹೆಣ್ಣೂರು ರಸ್ತೆಯಲ್ಲಿರುವ ಕಚೇರಿಯಲ್ಲಿ ಆಡಳಿತ ಮಂಡಳಿ ಸಭೆಯನ್ನು ನಡೆಸಲಾಗುತ್ತದೆ. ಅಲ್ಲದೇ ಎನ್ ನಜಿಒ ಕಾರ್ಪೋರೇಟ್ ಕಂಪನಿಗಳ ಸಹಕಾರವನ್ನು ಪಡೆದುಕೊಳ್ಳುತ್ತಿದೆ.

ಹಣದ ಮೂಲ ಯಾವುದು?

ಹಣದ ಮೂಲ ಯಾವುದು?

ವಾರ್ಷಿಕವಾಗಿ ಪ್ರತಿಯೊಬ್ಬರು ಕನಿಷ್ಠ 5 ಸಾವಿರ ರು. ಗಳನ್ನು ಎನ್ ಜಿಒ ದ ಸಾಮಾಜಿಕ ಕೆಲಸಕ್ಕೆ ದೇಣಿಯಾಗಿ ನೀಡಿಕೊಳ್ಳುತ್ತಾರೆ. ಇದರ ಜತೆ ಸದಸ್ಯತ್ವದ ಹಣ 1 ಸಾವಿರ ರು. ಸೇರಿಕೊಳ್ಳುತ್ತದೆ.

ಹಿರಿಯರಿಗೊಂದು ಸಲಾಂ

ಹಿರಿಯರಿಗೊಂದು ಸಲಾಂ

ಇಳಿ ವಯಸ್ಸಿನಲ್ಲಿ ಗ್ರಾಮೀಣ ಭಾಗಕ್ಕೆ ತೆರಳಿ ಅಲ್ಲಿನ ಅನಾಥ ಮಕ್ಕಳನ್ನು ಗುರುತಿಸಿ ಅವರನ್ನು ಶಾಲೆಗೆ ಸೇರಿಸಿ ಸಕಲ ಸೌಲಭ್ಯ ಕಲ್ಪಿಸಿಕೊಡುವುದು ನಿಜಕ್ಕೂ ಸವಾಲಿನ ಕೆಲಸ. ಅನಾಥ ಮಕ್ಕಳನ್ನು ತಮ್ಮ ಮೊಮ್ಮಕ್ಕಳಿಗಿಂತ ಅಧಿಕವಾಗಿ ಪ್ರೀತಿಸುತ್ತ ನಿರಂತರ ಸಾಮಾಜಿಕ ಕೆಲಸದಲ್ಲಿ ತೊಡಗಿಕೊಂಡಿರುವ ಈ ಹಿರಿಯ ನಾಗರಿಕರಿಗೆ ಸಲಾಂ ಹೇಳಲೇಬೇಕು.

English summary
While most people look forward to their retirement to relax and spend time with their family, these senior citizens chose to make better use of the second innings of their life. The NGO has come a long way since 2001 when it began functioning with just four retirees. Today Senior Citizens Bangalore has 70 members in the age group of 50 to 91 years. They started out with an objective to provide good education to underprivileged children, but today they work on three broader areas: school support, humanitarian home and rural uplift.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X