ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದು ಕಸದ ಮಾರ್ಕೆಟ್, ಒಣ ಕಸ ಮಾರಿ ಹಣ ಪಡೆಯಿರಿ

|
Google Oneindia Kannada News

ಬೆಂಗಳೂರು, ಡಿ.13 : ಮಾರುಕಟ್ಟೆಗೆ ಹೋಗಿ ಹಣ ನೀಡಿ ವಸ್ತುಗಳನ್ನು ತರುತ್ತೀರಿ, ಅದೇ ರೀತಿ ಮನೆಯಲ್ಲಿರುವ ಒಣ ಕಸವನ್ನು ಮಾರಿ ನಿಮ್ಮ ಜೇಬು ತುಂಬಿಸಿಕೊಳ್ಳಬಹುದು. ಬೆಂಗಳೂರಿನ ಬಿಟಿಎಂ ಲೇಔಟ್‌ನಲ್ಲಿ ಇಂತಹ ಕಸದ ಘಟಕ ಶನಿವಾರ ಆರಂಭಗೊಳ್ಳಲಿದೆ.

ಹಾಲಿನ ಕವರ್, ಹಳೆಯ ತಂತಿ, ವೈರ್, ಮೊಬೈಲ್ ಬಿಡಿಭಾಗಗಳು, ಬಿಸ್ಕೆಟ್ ಕವರ್‌ಗಳು, ಪ್ಲಾಸ್ಟಿಕ್ ಚಮಚ, ಲೋಟ, ಬಕೆಟ್, ಟಬ್, ತೆಂಗಿನಕಾಯಿ ಕರಟ, ಕೊಕಾಕೋಲಾ, ಮಾಜಾ ಮುಂತಾದ ತಂಪು ಪಾನೀಯಗಳ ಬಾಟಲಿಗಳನ್ನು ನೀವು ಮಾರಾಟ ಮಾಡಿ ಹಣಗಳಿಸಬಹುದು. [ಕಸದ ಮಾರುಕಟ್ಟೆ ಫೇಸ್ ಬುಕ್ ಪುಟ]

kasa market

ಮಡಿವಾಳದ ಬಿಬಿಎಂಪಿ ಸದಸ್ಯ ಬಿ.ಎನ್.ಮಂಜುನಾಥ ರೆಡ್ಡಿ ಅವರು ಇಂತಹ ಕಸ ಮಾರ್ಕೆಟ್‌ಅನ್ನು ಆರಂಭಿಸಲು ಯೋಜನೆ ತಯಾರಿಸಿದ್ದರು. ಅದು ಇಂದು ಕಾರ್ಯರೂಪಕ್ಕೆ ಬಂದಿದ್ದು, ಕೇಂದ್ರ ರೇಷ್ಮೇ ಮಂಡಳಿ ಫ್ಲೈ ಓವರ್‌ ಕೆಳಗೆ 180*80 ಚದರಡಿ ಸ್ಥಳದಲ್ಲಿ ಕಸದ ಮಾರ್ಕೆಟ್ ಆರಂಭವಾಗುತ್ತಿದೆ. [ಕಸ ವಿಂಗಡನೆ ಮಾಡದಿದ್ದರೆ ದಂಡ ಕಟ್ಟಬೇಕು]

ಸದ್ಯ, ಈ ಮಾರ್ಕೆಟ್‌ನಲ್ಲಿ 10 ಟನ್ ಒಣ ತ್ಯಾಜ್ಯ ಸಂಗ್ರಹಣೆ ಮಾಡಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಘಟಕದಲ್ಲಿ ಹೆಚ್ಚು ಕಸ ಸಂಗ್ರಹಿಸಲು ವ್ಯವಸ್ಥೆ ಮಾಡಲಾಗುತ್ತದೆ. ಒಣ ಕಸದ ಮಾರ್ಕೆಟ್ ನಿರ್ವಹಣೆಯನ್ನು ನಿರ್ಮಲ್ ಎನ್ವಿರೋ ಸೆಲ್ಯೂಷನ್ಸ್ ಎಂಬ ಸಂಸ್ಥೆ ಹೊತ್ತುಕೊಂಡಿದೆ.

market

ಒಣ ತ್ಯಾಜ್ಯಕ್ಕೆ ಸೂಕ್ತವಾದ ಬೆಲೆ ಮತ್ತು ವಿಲೇವಾರಿಗೆ ಸೂಕ್ತ ಸ್ಥಳ ಎಂಬ ಧ್ಯೇಯ ವಾಕ್ಯದಡಿ ಈ ಒಣ ಕಸದ ಮಾರ್ಕೆಟ್‌ಅನ್ನು ಆರಂಭಿಸಲಾಗಿದೆ. ನೀವು ಮಾರ್ಕೆಟ್‌ಗೆ ಹೋಗಿ ಹಣಕೊಟ್ಟು ವಸ್ತುಗಳನ್ನು ಖರೀದಿ ಮಾಡುವಂತೆ ಇಲ್ಲಿ ಒಣ ಕಸ ಕೊಟ್ಟು ಹಣ ಪಡೆಯಬಹುದು.

ಯಾವ ಕಸಕ್ಕೆ ಎಷ್ಟು ಹಣ?

* ಡೈರಿ ಮಿಲ್ಕ್, ಓರಿಯೋ ಬಿಸ್ಕೆಟ್‌ ಖಾಲಿ ಕವರ್ ಕೆ.ಜಿ.ಗೆ 1 ರೂ.
* ಪಾಸ್ಟಿಕ್ ಚಮಚ, ಲೋಟ, ಬಕೆಟ್, ಟವ್‌ಗಳಿಗೆ 14 ರೂ.
* ತೆಂಗಿನಕಾಯಿ ಕರಟ 3 ರೂ.
* ತಂಪುಪಾನೀಯಗಳ ಬಾಟಲಿ 16 ರೂ.
* ಟಾಲ್ಕಂ ಪೌಡರ್‌ ಡಬ್ಬಗಳಿಗೆ 60 ರೂ.
ಈ ಮಳಿಗೆ ವಾರದ ಎಲ್ಲಾ ದಿನ 10 ರಿಂದ ಸಂಜೆ 6 ಗಂಟೆಯ ತನಕ ತೆರೆದಿರುತ್ತದೆ.

English summary
Now make money by selling dry waste of any quantity of waste. ‘Kasa Market’ (Waste Market) a joint initiative of Bruhat Bangalore Mahanagara Palike (BBMP) and Nirmal Enviro Solution Private Limited will open to the public on Saturday. Kasa Market is located below the Madiwala flyover.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X