ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಭೂಕಂಪದ ಆತಂಕದಿಂದ ಮುಕ್ತವಲ್ಲ!

By Mahesh
|
Google Oneindia Kannada News

ಬೆಂಗಳೂರು, ಏ.27: ಭೂಕಂಪ ಎಂದರೇನು? ಭೂಕಂಪನಕ್ಕೆ ನಿಜ ಕಾರಣಗಳೇನು? ಭಾರತದ ಯಾವ ಪ್ರದೇಶಗಳಲ್ಲಿ ಭೂಕಂಪ ಹೆಚ್ಚಾಗಿ ಕಂಡುಬರುತ್ತದೆ ಎಂಬುದಕ್ಕೆ ವೈಜ್ಞಾನಿಕ ನೆಲೆಗಟ್ಟಿನ ಉತ್ತರವನ್ನು ಈ ಲೇಖನದಲ್ಲಿ ಓದಿರುತ್ತೀರಿ. ಈ ಪಟ್ಟಿಯಲ್ಲಿ ಬೆಂಗಳೂರು ಇಲ್ಲವಲ್ಲ ಎಂದು ನೆಮ್ಮದಿಯ ನಿಟ್ಟುಸಿರು ಬಿಡುವ ಮುನ್ನ ಈ ಸುದ್ದಿಯನ್ನು ತಪ್ಪದೇ ಓದಿ.

ಸದ್ಯಕ್ಕೆ ಲಭ್ಯವಿರುವ ಮಾಹಿತಿ, ಸಮೀಕ್ಷೆ, ಸಂಶೋಧನೆ ಪ್ರಕಾರ ಭಾರತದಲ್ಲಿ ಭೂಕಂಪದ ಹೆಚ್ಚು ಆತಂಕ ಹೊಂದಿರುವ ಪ್ರದೇಶಗಳ ಪಟ್ಟಿಯಲ್ಲಿ ಬೆಂಗಳೂರು ಇಲ್ಲ. ದಕ್ಷಿಣ ಪ್ರಸ್ಥಭೂಮಿಯಲ್ಲಿರುವ ಬೆಂಗಳೂರು ಅತಿ ಕಡಿಮೆ ಭೂಕಂಪನ ಸಂಭವನೀಯ ವಲಯದಲ್ಲಿದೆ.[ಭೂಕಂಪದ ಬಗ್ಗೆ ಇನ್ನಷ್ಟು, ಅದರ ಆಳ ಮತ್ತು ಅಗಲ]

Bengaluru seismically safe, but can be shattered by strong Earthquake

ಅದರೆ, ನಾವು ಅಂದುಕೊಂಡಷ್ಟು ಶಾಲಾ ದಿನಗಳಲ್ಲಿ ಓದಿದಷ್ಟು ಸುರಕ್ಷಿತವಾಗಿ ಬೆಂಗಳೂರು ಉಳಿದಿಲ್ಲ. ಭೂಕಂಪದ ಕೇಂದ್ರ ಕ್ಷೇತ್ರ ಎನ್ನಲಾಗುವ epicentre ಬೆಂಗಳೂರಿನಿಂದ ಕೇವಲ 100 ಕಿ.ಮೀ ಅಂತರದಲ್ಲೇ ಇದೆ. [ಭೂಕಂಪ ಪೀಡಿತರಿಗೆ ಸಹಾಯವಾಣಿ]

ತುಮಕೂರು ಬಳಿ ಅಳಿಲುಘಟ್ಟ ಹೊಸಕೆರೆಯನ್ನು ಭೂಕಂಪ ಸಂಭವನೀಯ ಕೇಂದ್ರ ಪ್ರದೇಶ ಎಂದು ಗುರುತಿಸಲಾಗಿದೆ. ಎಂದು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನ ಸಂಶೋಧಕರು ಎಚ್ಚರಿಕೆಯ ಕರೆ ಗಂಟೆ ಬಾರಿಸಿದ್ದಾರೆ.

ಬೆಂಗಳೂರು ಯಾವ ವಲಯದಲ್ಲಿದೆ?

ಬೆಂಗಳೂರು ಯಾವ ವಲಯದಲ್ಲಿದೆ?

* ವಿಶ್ವದ ಅತ್ಯಂತ ಪುರಾತನ ಭೂ ಪ್ರದೇಶ ಎನಿಸಿರುವ ದಕ್ಷಿಣ ಪ್ರಸ್ಥಭೂಮಿಯಲ್ಲಿ ಬೆಂಗಳೂರಿದೆ.
* ಬೆಂಗಳೂರು ಭೂಕಂಪ ಸಂಭವನೀಯ ವಲಯಗಳಲ್ಲಿ ಅತಿ ಕಡಿಮೆ ವಲಯ (ಸೆಮಿಕ್ ಜೋನ್-2) ನಲ್ಲಿದೆ.
* ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ, ಗುಜರಾತಿನ ಕಛ್, ಬಿಹಾರದ ಉತ್ತರ ಭಾಗ ಮತ್ತು ಅಂಡಮಾನ್ ಹಾಗೂ ನಿಕೋಬಾರ್ ದ್ವೀಪಗಳು ಸದಾ ಕಾಲ ಭೂಕಂಪದ ಆತಂಕದ ಎದುರಿಸುತ್ತಿವೆ.

ಈಗ ಏಕೆ ಅತಂಕ ಹೆಚ್ಚಾಗಲಿದೆ?

ಈಗ ಏಕೆ ಅತಂಕ ಹೆಚ್ಚಾಗಲಿದೆ?

* ನೇಪಾಳದಲ್ಲಿ ಶನಿವಾರ(ಏ.26, 2015) ಹಾಗೂ ಭಾನುವಾರ ಸಂಭವಿಸಿದ ಭೂಕಂಪ ಹಾಗೂ ನಂತರದ ಪರಿಣಾಮಗಳನ್ನು ಗಮನಿಸಿದರೆ ಭಾರತದ ಹಲವೆಡೆ ಭೂಕಂಪದ ಕೇಂದ್ರ ಪ್ರದೇಶ ಹುಡುಕಾಟ ಜಾರಿಯಲ್ಲಿದೆ.
* ನೇಪಾಳದ ಕಠ್ಮಂಡುವಿನಿಂದ ಸುಮಾರು 200 ಕಿ.ಮೀ ದೂರದ ಪ್ರದೇಶದಲ್ಲಿ epicentre ಹೊಂದಿದ್ದರೂ ಹಾನಿ ಪ್ರಮಾಣ ಗಮನಿಸಿದರೆ ಎಂಥವರೂ ಬೆಚ್ಚಿ ಬೀಳುತ್ತಾರೆ.
* ಸುಮಾರು 2500ಕ್ಕೂ ಅಧಿಕ ಮಂದಿ ಸಾವು, ಆರೇಳು ಸಾವಿರ ಜನ ಗಾಯಾಳು, ಶೇ 80ರಷ್ಟು ಕಟ್ಟಡಗಳು ನಾಶವಾಗಿವೆ. ಇದಕ್ಕೆ ಹೋಲಿಸಿದರೆ ಬೆಂಗಳೂರಿನ ಎಪಿಸೆಂಟರ್ ಸಮೀಪವಾಗಿರುವುದು ಎಚ್ಚರಿಕೆ ಅಂಶವಾಗಿದೆ.

ಭೂಕಂಪ ಸಂಭವಿಸಿದರೆ ಭಾರಿ ವಿನಾಶ

ಭೂಕಂಪ ಸಂಭವಿಸಿದರೆ ಭಾರಿ ವಿನಾಶ

ಬೆಂಗಳೂರು ಹಾಗೂ ಸುತ್ತಮುತ್ತ ಗಗನಚುಂಬಿ ಕಟ್ಟಡಗಳ ನಿರಂತರ ನಿರ್ಮಾಣ ಕಾರ್ಯ, ಕಲ್ಲು ಕ್ವಾರಿಗಳ ಕೊರೆತ, ಸುರಂಗಗಳ ಕೊರೆತ, ಕಲ್ಲು ಬಂಡೆಗಳ ಸಿಡಿತದಿಂದ ಒಂದು ವೇಳೆ ಪ್ರಬಲ ಭೂಕಂಪ ಸಂಭವಿಸಿದರೆ ಭಾರಿ ವಿನಾಶ ಸಂಭವಿಸುತ್ತದೆ.

ಇದಕ್ಕೆ ಪೂರಕವಾಗಿ ಫಲವತ್ತಾದ ಭೂಮಿಗಳೆಲ್ಲ ರಸಾಯನಿಕಗಳಿಂದ ತುಂಬಿ ಹೋಗಿವೆ. ಕೆರೆಗಳೆಲ್ಲ ಬತ್ತಿವೆ. ಅಳಿದುಳಿದ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅಪಾರ್ಟ್ಮೆಂಟ್ ನಿರ್ಮಿಸಲಾಗುತ್ತದೆ. ಎತ್ತರದ ಕಟ್ಟಡಗಳ ನಿರ್ಮಾಣದಲ್ಲಿ ಯಾವುದೇ ಸುರಕ್ಷಿತ ವಿಧಾನಗಳನ್ನು ಅನುಸರಿಸಲಾಗುತ್ತಿಲ್ಲ.
ಕಟ್ಟಡಗಳು ಭೂಕಂಪ ಪ್ರೂಫ್ ಆಗಿಲ್ಲ

ಕಟ್ಟಡಗಳು ಭೂಕಂಪ ಪ್ರೂಫ್ ಆಗಿಲ್ಲ

ಬೆಂಗಳೂರು ನಗರ, ನಗರ ಹೊರವಲಯದಲ್ಲಿ ಬರುತ್ತಿರುವ ಗಗನಚುಂಬಿ ಕಟ್ಟಡಗಳ ನಿರ್ಮಾಣ ಕಾರ್ಯದಲ್ಲಿ ಸಿಮೆಂಟ್ ಬ್ರಿಕ್ಸ್, ಕಬ್ಬಿಣದ ಕಾಲಂಗಳನ್ನು (ಸ್ಥಂಬಗಳನ್ನು) ಹಾಕಿ ನಿರ್ಮಾಣ ಮಾಡಲಾಗುತ್ತಿದೆ, ಅಡಿಪಾಯದ ಕೆಳಗಿನ ಭೂಮಿ ಅಷ್ಟು ಸದೃಢವಾಗಿಲ್ಲ ಎಂದು ಭೂಗರ್ಭಶಾಸ್ತ್ರ ಇಲಾಖೆಯ ಸಮೀಕ್ಷಾ ವರದಿ ನೀಡಿ ಮುರ್ನಾಲ್ಕು ವರ್ಷ ಕಳೆದಿದೆ. ನಗರದಲ್ಲಿರುವ ಕಟ್ಟಡಗಳು ಭೂಕಂಪ ಪ್ರೂಫ್ ಆಗಿಲ್ಲ.

ಹೊಸದಾಗಿ ಕಲೆ ಹಾಕಲಾದ ಮಾಹಿತಿ

ಹೊಸದಾಗಿ ಕಲೆ ಹಾಕಲಾದ ಮಾಹಿತಿ

ಈಗ ಲಭ್ಯವಿರುವ ಮಾಹಿತಿ ಕಳೆದ 150 ವರ್ಷಗಳಲ್ಲಿ ಸಂಭವಿಸಿದ ಭೂಕಂಪ ಹಾಗೂ ಪರಿಣಾಮವನ್ನು ಆಧಾರವಾಗಿಟ್ಟುಕೊಂಡು ತಯಾರಿಸಲಾಗಿದೆ. 2001ರ ಜನವರಿ 29ರಲ್ಲಿ ರಿಕ್ಚರ್ ಮಾಪಕದಲ್ಲಿ 4.3 ಪ್ರಮಾಣದ ಭೂಕಂಪವನ್ನು ಎದುರಿಸಿದ ಬೆಂಗಳೂರು ಬೆಚ್ಚಿತ್ತು. ಅದರೆ, ಈ ಬಾರಿ ಸಣ್ಣ ಪ್ರಮಾಣದ ಭೂಕಂಪ ಕೂಡಾ ಭಾರಿ ಹಾನಿ ಉಂಟು ಮಾಡಬಹುದು. ಇದಕ್ಕೆ ಬಹುಮಡಿ ಕಟ್ಟಡಗಳು ಹಾಗೂ ಅವೈಜ್ಞಾನಿಕ ನಿರ್ಮಾಣವೇ ಕಾರಣ ಎಂದು ಐಐಎಸ್ಸಿ ಪ್ರೊಫೆಸರ್ ಪಂಜಮಣಿ ಅನ್ಬಳನ್ ಅಭಿಪ್ರಾಯಪಟ್ಟಿದ್ದಾರೆ.

ಎಲ್ಲೆಲ್ಲಿ ಭೂಕಂಪದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ

ಎಲ್ಲೆಲ್ಲಿ ಭೂಕಂಪದ ಬಗ್ಗೆ ಮಾಹಿತಿ ಕಲೆ ಹಾಕಲಾಗಿದೆ

ಹಾಸನದಲ್ಲಿ ಫೆಬ್ರವರಿಯಲ್ಲಿ ಲಘು ಕಂಪನಗಳು ಉಂಟಾದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಮೈಸೂರಿನ ಸರಗೂರು, ಚಿತ್ರದುರ್ಗದ ವಾಣಿ ವಿಲಾಸ್ ಸಾಗರ, ಕಾವೇರಿ ನದಿಕೊಳ್ಳದಂಥ ಅತ್ಯಂತ ಅತಿ ಕಡಿಮೆ ಭೂಕಂಪನ ಸಂಭವನೀಯ ವಲಯದಲ್ಲೂ ಮಾಹಿತಿ ಕಲೆ ಹಾಕಲಾಗಿದೆ. 1858, 1916, 2001ರಲ್ಲಿ ಭೂಕಂಪ ಕಂಡ ಬೆಂಗಳೂರಿನ ಬಂಡೆಗಳು ಸುಮಾರು 3.5 ಮಿಲಿಯನ್ ವರ್ಷಗಳಿಗೂ ಹಳೆಯದಾಗಿದ್ದು, ಸದಾ ಕಾಲ ಬದಲಾವಣೆಗೊಳಲ್ಪಟ್ಟಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

English summary
Bengaluru seismically safe but can be shattered by strong Earthquake as epicentre is just 100 km from Bengaluru warned Civil Engineering Safety Committee member of the Atomic Energy Regulatory Board S A Reddi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X