ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇಶದಲ್ಲೇ ಮೊದಲ ಬಾರಿಗೆ ವಿದ್ಯುತ್ ಸ್ಥಗಿತವಿಲ್ಲದೇ ಲೈನ್ ಉನ್ನತೀಕರಣ ಯಶಸ್ವಿ

|
Google Oneindia Kannada News

ಬೆಂಗಳೂರು, ಏ.3: ಭಾರತದ ಮೊದಲ 'ಲೈವ್‌ ಲೈನ್' ಯೋಜನೆ ಮುಕ್ತಾಯಗೊಂಡಿದೆ. ವಿದ್ಯುತ್ ಸ್ಥಗಿತಗೊಳಿಸದೇ ಲೈವ್ ವಿದ್ಯುತ್ ಲೈನ್ ಅಳವಡಿಸಲಾಗಿದೆ.

66 ಕೆವಿ ಟ್ರಾನ್ಸ್‌ಮಿಷನ್ ವಿದ್ಯುತ್ ಲೈನ್ ಇದಾಗಿದೆ. ಯಾವುದೇ ವಿದ್ಯುತ್ ಕಾಮಗಾರಿ ನಡೆಯಬೇಕಿದ್ದರೂ ಸಾಮಾನ್ಯವಾಗಿ 2 ಗಂಟೆಗಳ ಕಾಲ ವಿದ್ಯುತ್ ಸ್ಥಗಿತಗೊಳಿಸಲಾಗುತ್ತಿತ್ತು.

ಆದರೆ ಇದೇ ಮೊದಲ ಬಾರಿಗೆ ವಿದ್ಯುತ್ ಸ್ಥಗಿತಗೊಳಸದೆ ವಿದ್ಯುತ್ ಲೈನ್ ಉನ್ನತೀಕರಣಗೊಳಿಸಲಾಗಿದೆ.

Bengaluru sees disruption-free upgradation of power line

ಬೆಂಗಳೂರಲ್ಲಿ ನಾಳೆ (ಏ.3)ಬೆಳಗ್ಗೆಯಿಂದಲೇ ಕರೆಂಟ್ ಇರಲ್ಲ, ಎಲ್ಲೆಲ್ಲಿ?ಬೆಂಗಳೂರಲ್ಲಿ ನಾಳೆ (ಏ.3)ಬೆಳಗ್ಗೆಯಿಂದಲೇ ಕರೆಂಟ್ ಇರಲ್ಲ, ಎಲ್ಲೆಲ್ಲಿ?

ಅಷ್ಟೇ ಅಲ್ಲದೆ ಕಿರಿದಾದ ಪ್ರದೇಶದಲ್ಲಿ ಈ ಲೈನ್ ಅಳವಡಿಸಲಾಗಿದೆ. ಈಗಿರುವುದಕ್ಕಿಂತ ಎರಡು ಪಟ್ಟು ಹೆಚ್ಚು ವಿದ್ಯುತ್ ಸರಬರಾಜು ಮಾಡಲಿದೆ.

ಇನ್ನು ಮಾನ್ಯತಾ ಟೆಕ್ ಪಾರ್ಕ್, ವೈಟ್‌ಫೀಲ್ಡ್, ಎಚ್‌ಎಸ್‌ಆರ್‌ ಲೇಔಟ್, ಯಲಹಂಕಕ್ಕೆ ಯೋಜನೆ ವಿಸ್ತರಿಸಲಾಗುತ್ತದೆ ಎಂದು ಸ್ಟೆರ್‌ಲೈಟ್ ಪವರ್‌ನ ಸಿಇಓ ಮನೀಶ್ ಅಗರ್‌ವಾಲ್ ತಿಳಿಸಿದ್ದಾರೆ.

ಬೆಂಗಳೂರಲ್ಲಂತೂ ಏನೇ ಸಣ್ಣಪುಟ್ಟ ಕಾಮಗಾರಿ ಇದ್ದರೂ ಕೂಡ ಗಂಟೆಗಟ್ಟಲೆ ವಿದ್ಯುತ್ ಸ್ಥಗಿತಗೊಳಿಸುತ್ತಾರೆ. ಗ್ರಾಹಕರು ಕರೆ ಮಾಡಿ ತರಾಟೆಗೆ ತೆಗೆದುಕೊಂಡ ಬಳಿಕವಷ್ಟೇ ಕರೆಂಟು ಕೊಡುತ್ತಾರೆ.

ಅಂಥಹ ಸಮಯದಲ್ಲಿ ಎಲೆಕ್ಟ್ರಾನಿಕ್ ಸಿಟಿಯಂತಹ ಪ್ರದೇಶದಲ್ಲೀ ಒಂದು ನಿಮಿಷವೂ ವಿದ್ಯುತ್ ಸಂಪರ್ಕ ಕಡಿತಗೊಳಿಸದೆ ವಿದ್ಯುತ್ ತಂತಿ ಉನ್ನತೀಕರಣಗೊಳಿಸಿರುವುದು ಅಚ್ಚರಿ ಮೂಡಿಸಿದೆ.

English summary
India’s first live-line project was successfully completed without switching off electricity supply in areas around Electronics City on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X