ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು 2020: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ ಶೇ.21ರಷ್ಟು ಇಳಿಕೆ

|
Google Oneindia Kannada News

ಬೆಂಗಳೂರು, ಜನವರಿ 25: 2020ರಲ್ಲಿ ನಗರದಲ್ಲಿ ರಸ್ತೆ ಅಪಘಾತಗಳಿಂದ ಮೃತಪಟ್ಟವರಲ್ಲಿ ಶೇ.21ರಷ್ಟು ಇಳಿಕೆಯಾಗಿದೆ.

2020ರಲ್ಲಿ 657 ಮಂದಿ ಮೃತಪಟ್ಟಿದ್ದಾರೆ. ಅದರಲ್ಲಿ 77 ಮಂದಿ ಮಹಿಳೆಯರಿದ್ದಾರೆ. 150 ಮಂದಿ 50ಕ್ಕಿಂತ ಅಧಿಕ ವರ್ಷದವರಾಗಿದ್ದಾರೆ. 465 ಮಂದಿ ಗಂಭೀರವಾಗಿ ಗಾಯಗೊಂಡಿದ್ದ ಕಾರಣ ಮೃತಪಟ್ಟಿದ್ದಾರೆ.

ದಟ್ಟ ಮಂಜಿನಿಂದ ಎಂಟು ವಾಹನಗಳ ಸರಣಿ ಅಪಘಾತ: ಮೂವರು ಸಾವುದಟ್ಟ ಮಂಜಿನಿಂದ ಎಂಟು ವಾಹನಗಳ ಸರಣಿ ಅಪಘಾತ: ಮೂವರು ಸಾವು

ಅದರಲ್ಲಿ 100ಕ್ಕಿಂತಲೂ ಹೆಚ್ಚು ಮಂದಿ ಉನ್ನತ ವ್ಯಾಸಂಗ ಮಾಡಿದವರಾಗಿದ್ದರು. 5 ಮಂದಿ ವೈದ್ಯರಾಗಿದ್ದಾರೆ,40ಕ್ಕೂ ಹೆಚ್ಚು ಮಂದಿ ತಾಂತ್ರಿಕ ಶಿಕ್ಷಣ ಪೂರೈಸಿದವರಿದ್ದಾರೆ.

ಕೊರೊನಾ ಲಾಕ್‌ಡೌನ್‌ನಿಂದಾಗಿ ಸಾವಿನ ಸಂಖ್ಯೆ ಕಡಿಮೆ

ಕೊರೊನಾ ಲಾಕ್‌ಡೌನ್‌ನಿಂದಾಗಿ ಸಾವಿನ ಸಂಖ್ಯೆ ಕಡಿಮೆ

ಜೂನ್‌, ಜುಲೈ ಮತ್ತು ಆಗಸ್ಟ್‌ನಲ್ಲಿ ಕೊರೊನಾ ಲಾಕ್‌ಡೌನ್‌ ನಿಯಮಗಳು ಬಿಗಿಯಾಗಿದ್ದ ಕಾರಣ ಹೆಚ್ಚಿನವರು ಮನೆಯಲ್ಲೇ ಉಳಿದಿದ್ದರು. ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡ ಹಿನ್ನೆಲೆಯಲ್ಲಿ ವಾಹನಗಳ ಓಡಾಟ ಕಡಿಮೆಯಾಗಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿವೆ.

ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಅಂಶ

ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಅಂಶ

2018, 2019 ಮತ್ತು 2020ರ ಸಾಲಿನಲ್ಲಿ ನಗರದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಕುರಿತು ನಗರ ಸಂಚಾರ ಪೊಲೀಸರು ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ವಿಶ್ಲೇಷಣಾ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.

ಅಪಘಾತಕ್ಕೆ ಬಲಿಯಾದವರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು

ಅಪಘಾತಕ್ಕೆ ಬಲಿಯಾದವರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚು

ಅಪಘಾತಕ್ಕೆ ಬಲಿಯಾದವರಲ್ಲಿ ದ್ವಿಚಕ್ರ ವಾಹನ ಸವಾರರೇ ಹೆಚ್ಚಿದ್ದಾರೆ. 2020ರಲ್ಲಿ ಮೃತಪಟ್ಟ 657 ಮಂದಿ ಪೈಕಿ 412 ದ್ವಿಚಕ್ರ ವಾಹನ ಸವಾರರೇ ಆಗಿದ್ದಾರೆ. ಇದರಲ್ಲಿ ವಾಹನ ಚಾಲನೆ ಮಾಡುತ್ತಿರುವವರು 332 ಹಾಗೂ ಹಿಂಬದಿ ಸವಾರರು 80 ಮಂದಿ. ದ್ವಿಚಕ್ರ ವಾಹನಗಳು ಡಿಕ್ಕಿ ಹೊಡೆದು 52ಕ್ಕೂ ಹೆಚ್ಚು ಪಾದಚಾರಿಗಳು ಮೃತಪಟ್ಟಿದ್ದಾರೆ. ಒಟ್ಟು 164 ಪಾದಚಾರಿಗಳು ರಸ್ತೆ ಅಪಘಾತಗಳಲ್ಲಿ ಮೃತಪಟ್ಟಿದ್ದಾರೆ.

ಉಲ್ಲಂಘನೆ ಪ್ರಕರಣ ಹೆಚ್ಚು

ಉಲ್ಲಂಘನೆ ಪ್ರಕರಣ ಹೆಚ್ಚು

2020ರಲ್ಲಿ ಲಾಕ್‌ಡೌನ್‌ ಕಾರಣ ವಾಹನ ಸಂಚಾರ ಕಡಿಮೆಯಾಗಿದ್ದರೂ, ಉಲ್ಲಂಘನೆ ಪ್ರಕರಣಗಳು ಮಾತ್ರ ಹಿಂದಿನ ಎರಡು ವರ್ಷಗಳಿಗೆ ಹೋಲಿಸಿದರೆ ಹೆಚ್ಚಾಗಿವೆ. 2020ರಲ್ಲಿ 83,83,737 ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ದಾಖಲಾಗಿವೆ. 2019ರಲ್ಲಿ 79,25,134 ಪ್ರಕರಣಗಳು ಹಾಗೂ 2018ರಲ್ಲಿ82,74,663 ಪ್ರಕರಣಗಳು ದಾಖಲಾಗಿವೆ.

Recommended Video

ರಾಜ್ಯದಲ್ಲಿ ಗಣಿಗಾರಿಕೆ ಅವಶ್ಯಕತೆ ಇದೆ, ಆದ್ರೆ illegal mining ವಿರುದ್ಧ ನಿರ್ದಾಕ್ಷಿಣ್ಯ ಕ್ರಮ- CM BSY | Oneindia Kannada
ಹೆಚ್ಚು ಅಪಘಾತ

ಹೆಚ್ಚು ಅಪಘಾತ

ಪದವಿ ಪೂರ್ವ ಶಿಕ್ಷಣ ಪಡೆದವರು 105, ಪದವೀಧರರು 72, ಸ್ನಾತಕೋತ್ತರ ಪದವೀಧರರು 12, ತಾಂತ್ರಿಕ ಶಿಕ್ಷಣ ಪಡೆದವರಿಂದ 31 ಸಾವು ಒಳಗೊಂಡ ಅಪಘಾತಗಳು ಸಂಭವಿಸಿವೆ. ವಿದ್ಯಾರ್ಹತೆ ಮೇಲೆ ಮಾರಣಾಂತಿಕ ಅಪಘಾತಗಳನ್ನು ವಿಂಗಡಣೆ ಮಾಡಿದಾಗ ಪ್ರೌಢ ಶಿಕ್ಷಣ ಹಂತಕ್ಕೆ ವ್ಯಾಸಂಗ ತೊರೆದವರಿಂದ ಹೆಚ್ಚು ಅಪಘಾತಗಳು ಸಂಭವಿಸಿವೆ. ಹೀಗಾಗಿ, ಪ್ರಾಥಮಿಕ ಹಂತದಲ್ಲೇ ರಸ್ತೆ ಸುರಕ್ಷತೆ ಕುರಿತು ಶಿಕ್ಷಣ ನೀಡಬೇಕು. ಈ ಮೂಲಕ ರಸ್ತೆ ಅಪಘಾತಗಳನ್ನು ನಿಯಂತ್ರಿಸಲು ಸಾಧ್ಯ, ಎಂದು ರವಿಕಾಂತೇಗೌಡ ತಿಳಿಸಿದರು.

2020ರಲ್ಲಿ ಸಾವು ಒಳಗೊಂಡ ಅಪಘಾತಗಳಲ್ಲಿ ಹೆಚ್ಚಿನವರು ಪ್ರೌಢ ಶಿಕ್ಷಣ ಮತ್ತು ಅದಕ್ಕಿಂತ ಕಡಿಮೆ ವ್ಯಾಸಂಗ ಮಾಡಿದ ವಾಹನ ಸವಾರರು, ಚಾಲಕರಿದ್ದಾರೆ. ಪ್ರೌಢಶಾಲೆ ವ್ಯಾಸಂಗ ಮಾಡಿದವರು 189, ಪ್ರಾಥಮಿಕ ಶಿಕ್ಷಣ 127, ಅನಕ್ಷರಸ್ಥರು 37 ಜನರಿದ್ದಾರೆ.

English summary
The number of people who died in road accidents in the city has reduced by more than 21% in 2020 compared to the previous year. Compared to 2018, the dip is 24%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X