ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅತ್ತ ಸಾವಿರಾರು ಬೆಂಕಿ ದುರಂತ ಘಟನೆ; ಇತ್ತ ಅಗ್ನಿಶಾಮಕ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ

|
Google Oneindia Kannada News

ಬೆಂಗಳೂರು, ಏ. 12: ಕಳೆದ ಐದು ವರ್ಷದಲ್ಲಿ ರಾಜ್ಯಾದ್ಯಂತ ಐದು ಸಾವಿರಕ್ಕೂ ಹೆಚ್ಚು ಅಗ್ನಿ ಅವಘಡ ಘಟನೆಗಳು ವರದಿಯಾಗಿವೆ. ಒಂದು ವರದಿ ಪ್ರಕಾರ 2017 ಜನವರಿ 1ರಿಂದ 2022 ಮಾರ್ಚ್ 10 ರವರೆಗೆ 5144 ಕಟ್ಟಡಗಳಿಗೆ ಬೆಂಕಿ ತಗುಲಿದ ಘಟನೆಗಳು ಸಂಭವಿಸಿವೆ. ಇವುಗಳ ಪೈಕಿ ಬೆಂಗಳೂರು ನಗರವೊಂದರಲ್ಲೇ ಮೂರು ಸಾವಿರ ಸಂಖ್ಯೆ ಸಮೀಪದಷ್ಟು ಬೆಂಕಿ ದುರಂತ ಘಟನೆಗಳು ನಡೆದಿವೆ ಎನ್ನಲಾಗಿದೆ. ಅಂದರೆ ಬೆಂಗಳೂರಿನಲ್ಲಿ ದಿನವೊಂದಕ್ಕೆ ಸರಾಸರಿ ಕನಿಷ್ಠ ಒಂದು ಕಟ್ಟಡವಾದರೂ ಬೆಂಕಿ ದುರಂತಕ್ಕೆ ಈಡಾಗಿರುವುದು ತಿಳಿದುಬರುತ್ತದೆ.

ಇಷ್ಟೊಂದು ಪ್ರಮಾಣದ ದುರಂತ ಘಟನೆಗಳನ್ನು ನಿಭಾಯಿಸುವಷ್ಟು ಬಲವಾಗಿದೆಯಾ ಅಗ್ನಿಶಾಮಕ ಇಲಾಖೆ ಎಂದು ಅಚ್ಚರಿ ಎನಿಸಬಹುದು. ಈ ಘಟನೆಗಳನ್ನ ಇಲಾಖೆ ಸಮರ್ಥವಾಗಿ ಎದುರಿಸಿರುವುದು ಹೌದು. ಸಿಬ್ಬಂದಿ ಕೊರತೆ ನಡುವೆಯೂ ಇಲಾಖೆ ಈ ಸಾವಿರಾರು ಬೆಂಕಿ ಅವಘಡ ಘಟನೆಗಳನ್ನುನಿಭಾಯಿಸಿ ಹಲವು ಜನರ ಜೀವ ಉಳಿಸಿದೆ. ಸಿಬ್ಬಂದಿ ಕೊರತೆ ಗಣನೀಯವಾಗಿ ಕಾಡುತ್ತಿದ್ದರೂ ಇಲಾಖೆ ಪಡುತ್ತಿರುವ ಶ್ರಮ ಪ್ರಶಂಸನೀಯ.

Amarnath Yatra 2022: ಅಮರನಾಥ ಯಾತ್ರೆಗೆ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ? Amarnath Yatra 2022: ಅಮರನಾಥ ಯಾತ್ರೆಗೆ ತೆರಳಲು ಟಿಕೆಟ್ ಬುಕ್ಕಿಂಗ್ ಮಾಡುವುದು ಹೇಗೆ?

2678 ಸಿಬ್ಬಂದಿ ಕೊರತೆ:
ಈ ಇಲಾಖೆಯಲ್ಲಿ ಶೇ. 38ರಷ್ಟು ಸಿಬ್ಬಂದಿ ಕೊರತೆ ಇರುವುದು ಕಂಡುಬಂದಿದೆ. ಇಲಾಖೆಯಲ್ಲಿ ಇರುವ 7086 ವಿವಿಧ ಒಟ್ಟು ಹುದ್ದೆಗಳ ಪೈಕಿ 2678 ಹುದ್ದೆಗಳು ನೇಮಕವಾಗದೇ ಹಾಗೇ ಉಳಿದಿವೆ. ಇವುಗಳಲ್ಲಿ ಬಹುತೇಕ ಮುಕ್ಕಾಲು ಭಾಗದಷ್ಟು ಕೆಲಸಗಳು ಫೈರ್ ಫೈಟರ್‌ಗಳದ್ದಾಗಿವೆ.

Bengaluru See Over 2800 Fire Incidents in last 5 years as Fire Dept faces Staff Shortage

ಎಷ್ಟೆಷ್ಟು ಹುದ್ದೆಗಳು ನೇಮಕವಾಗಬೇಕಿದೆ?
ಫೈರ್ ಸ್ಟೇಷನ್ ಆಫೀಸರ್ಸ್: 104
ಹೆಚ್ಚುವರಿ ಫೈರ್ ಸ್ಟೇಷನ್ ಆಫೀರ್ಸ್: 123
ಚೀಫ್ ಫೈರ್ ಫೈಟರ್ಸ್: 119
ವಾಹನ ಚಾಲಕರು: 348

ಇನ್ನೊಂದು ತಿಂಗಳಲ್ಲಿ ಫೈರ್ ಫೈಟರ್‌ಗಳ ನೇಮಕಾತಿ:
ಟೈಮ್ ಆಫ್ ಇಂಡಿಯಾದಲ್ಲಿ ಪ್ರಕಟವಾಗಿರುವ ವರದಿಯಲ್ಲಿ ರಾಜ್ಯ ಅಗ್ನಿ ಮತ್ತು ತುರ್ತು ಸೇವೆ ಇಲಾಖೆ ನಿರ್ದೇಶಕ ಕೆ ಶಿವಕುಮಾಮಾರ್ ಅವರು ಇನ್ನೊಂದು ತಿಂಗಳಲ್ಲಿ 1567 ಫೈರ್ ಫೈಟರ್ ಹುದ್ದೆಗಳನ್ನು ನೇಮಕಾತಿ ಮಾಡುವ ಪ್ರಕ್ರಿಯೆ ಪೂರ್ಣಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಖಾಲಿ ಇರುವ ಇನ್ನುಳಿದ ಹುದ್ದೆಗಳು ಬೇರೆ ಬೇರೆ ವಿಭಾಗಗಳದ್ದು ಎಂದು ಹೇಳಲಾಗಿದೆ.

Bengaluru See Over 2800 Fire Incidents in last 5 years as Fire Dept faces Staff Shortage

ಬೆಂಗಳೂರಿನಲ್ಲಿ ದಿನವೊಂದಕ್ಕೆ ಏಳೆಂಟು ಪ್ರಕರಣಗಳು:
ಬೆಂಗಳೂರಿನಲ್ಲಿ ಮೊದಲೇ ಹೇಳಿದಂತೆ ಸರಾಸರಿಯಾಗಿ ದಿನವೊಂದಕ್ಕೆ ಕನಿಷ್ಠ ಒಂದಾದರೂ ಅಗ್ನಿದುರಂತ ಘಟನೆ ನಡೆಯುತ್ತದೆ. ಇದಷ್ಟೇ ಅಲ್ಲ, ಸ್ಕ್ರಾಪ್ ಯಾರ್ಡ್, ಕಾರ್ಖಾನೆ, ಕಸದ ಗುಂಡಿ, ಗ್ಯಾರೇಜ್ ಇತ್ಯಾದಿಗಳಲ್ಲಿ ಯಾವುದಾದರೂ ಅವಘಡ ಘಟನೆಗಳು ಬೆಂಗಳೂರಿನಲ್ಲಿ ನಿತ್ಯ ಇರುತ್ತವಂತೆ. ಕೆ ಶಿವಕುಮಾರ್ ಅವರು ಬೆಂಗಳೂರಿನಲ್ಲಿ ಇಂಥ ಪ್ರಕರಣಗಳು ದಿನವೊಂದಕ್ಕೆ ಏಳೆಂಟಾದರೂ ಎದುರಾಗುತ್ತವಂತೆ.

Bengaluru See Over 2800 Fire Incidents in last 5 years as Fire Dept faces Staff Shortage

ಸದ್ಯ ಹೋಂ ಗಾರ್ಡ್‌ಗಳ ಸೇವೆ ಬಳಕೆ:
ಸಿಬ್ಬಂದಿ ಕೊರತೆ ನಡುವೆಯೂ ಇಷ್ಟೊಂದು ಪ್ರಮಾಣದ ಅಗ್ನಿ ದುರಂತ ಘಟನೆಗಳನ್ನ ಅಗ್ನಿಶಾಮಕ ಸಿಬ್ಬಂದಿ ಹೇಗೆ ನಿಭಾಯಿಸುತ್ತದೆ ಎಂದು ಅಚ್ಚರಿ ಎನಿಸಿರಬಹುದು. ಕಳೆದ ಕೆಲ ವರ್ಷಗಳಿಂದ ಇಲಾಖೆಯು ಒಂದು ಸಾವಿರಕ್ಕೂ ಹೆಚ್ಚು ಹೋಂ ಗಾರ್ಡ್ ಸಿಬ್ಬಂದಿಯನ್ನು ಬೆಂಕಿ ನಂದಿಸುವ ಕಾರ್ಯದಲ್ಲಿ ನೆರವಾಗಿ ಬಳಸಿಕೊಂಡಿದೆ.

ದುರಂತಗಳ ಸಂಖ್ಯೆ:
ಕಳೆದ 5 ವರ್ಷದಲ್ಲಿ ರಾಜ್ಯದಲ್ಲಿ ಸಂಭವಿಸಿದ ಅಗ್ನಿದುರಂತ ಘಟನೆಗಳು: 5144
ಬೆಂಗಳೂರಿನಲ್ಲಿ ಸಂಭವಿಸಿದ ಬೆಂಕಿದುರಂತ ಘಟನೆ: 2847

Bengaluru See Over 2800 Fire Incidents in last 5 years as Fire Dept faces Staff Shortage

ಅಗ್ನಿ ದುರಂತಕ್ಕೆ ಪ್ರಮುಖ ಕಾರಣಗಳೇನು?:
ಬೆಂಗಳೂರಿನಲ್ಲಿ ಸಂಭವಿಸಿದ 2847 ಅಗ್ನಿ ಅವಘಡ ಘಟನೆಗಳಿಗೆ ಪ್ರಮುಖ ಕಾರಣವಾಗಿರುವುದು ಶಾರ್ಟ್ ಸರ್ಕ್ಯೂಟ್ ಅಂತೆ. ಶೇ. 66 ಪ್ರಕರಣಗಳಲ್ಲಿ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದೆ. ಗ್ಯಾಸ್ ಸೋರಿಕೆ ಎರಡನೇ ಪ್ರಮುಖ ಕಾರಣವಾಗಿದೆ. ಹಾಗೆಯೇ, ಸಿಗರೇಟ್, ಆಯಿಲ್ ಸೋರಿಕೆ, ರಾಸಾಯನಿಕ ಸೋರಿಕೆಯಿಂದಲೂ ಹತ್ತಾರು ಬೆಂಕಿ ದುರಂತಗಳು ಸಂಭವಿಸಿರುವುದು ಇಲಾಖೆ ನೀಡಿದ ಮಾಹಿತಿಯಿಂದ ತಿಳಿದುಬಂದಿದೆ.

(ಒನ್ಇಂಡಿಯಾ ಸುದ್ದಿ)

English summary
More thank 5000 fire incidents reported in Karnataka in last 5 years. Bangalore alone see 2847 incident during this period. But, Fire Dept is facing 68% staff shortage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X