ಬೆಂಗಳೂರು: ಮಾಲೀಕನ ಅಮಾನವೀಯ ವರ್ತನೆ ಕ್ಯಾಮರಾದಲ್ಲಿ ಸೆರೆ
ಬೆಂಗಳೂರು, ಅಕ್ಟೋಬರ್ 15: ಬೆಂಗಳೂರಿನ ಸೆಕ್ಯುರಿಟಿ ಫರ್ಮ್ ವೊಂದರ ಮಾಲೀಕ ತನ್ನ ಉದ್ಯೋಗಿಗಳಿಗೆ ಬೂಟ್ ಕಾಲಿನಲ್ಲಿ ಒದೆಯುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸೆಕ್ಯುರಿಟಿ ಫರ್ಮ್ ಮಾಲೀಕ ಸಲೀಂ ಖಾನ್ ನನ್ನು ಬಂಧಿಸಲಾಗಿದೆ. ಎಚ್ ಎಸ್ ಆರ್ ಲೇಔಟ್ ನ ಬೆಂಗಳೂರು ಸೆಕ್ಯುರಿಟಿ ಫೋರ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಸಲೀಂ ಖಾನ್ ಭದ್ರತಾ ಸಿಬ್ಬಂದಿಗಳನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದು, ಅವರಿಗೆ ನಿರಂತರವಾಗಿ ಹಿಂಸೆ ನೀಡುತ್ತಿರುವ, ಮತ್ತು ತಮ್ಮದೇನೂ ತಪ್ಪಿಲ್ಲ, ಬಿಟ್ಟುಬಿಡಿ ಎಂದು ಅವರು ಅಂಗಲಾಚುತ್ತಿರುವ ವಿಡಿಯೋ ವೈರಲ್ ಆಗಿದೆ.
ಭದ್ರತಾ ಸಿಬ್ಬಂದಿ ಮೇಲೆ ಅಮಾನವೀಯ ಹಲ್ಲೆ ಮಾಡಿದ ಮಾಲೀಕ
ಇದೇ ಸಲೀಂ ಖಾನ್ ಹಲವು ಉದ್ಯೋಗಿಗಳ ಮೇಲೆ ಇದೇ ರೀತಿಯ ದೌರ್ಜನ್ಯ ನಡೆಸುತ್ತಿದ್ದಿದ್ದು ಬೆಳಕಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದ ಈ ವಿಡಿಯೋ ನೋಡಿ ಎಚ್ ಎಸ್ ಆರ್ ಲೇಔಟ್ ಪೊಲೀಸರು ಸ್ಯುಮೋಟೋ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಉದ್ಯೋಗಿಗಳ ಮೇಲೆ ಸಲೀಂ ಖಾನ್ ಈ ರೀತಿ ಅಮಾನವೀಯವಾಗಿ ಹಲ್ಲೆ ನಡೆಸುತ್ತಿದ್ದುದು ಏಕೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈ ವಿಡಿಯೋ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
|
ಆತನ ಸಂಸ್ಕಾರವೇ ಅದು!
ಆತ ಏನನ್ನು ಕಲಿತಿದ್ದಾನೋ ಅದನ್ನೇ ಪಾಲಿಸುತ್ತಿದ್ದಾನೆ ಅಷ್ಟೆ. ಇದನ್ನು ಗುಂಪುಹತ್ಯೆ ಎಂದು ಕರೆಯುವುದಕ್ಕೆ ಆಗುವುದಿಲ್ಲವೇ? ಆತ ತನ್ನ ಸಿಬ್ಬಂದಿಯ ತಲೆ ಮತ್ತು ಹೊಟ್ಟೆಯ ಮೇಲೆ ನಿಂತು ಹಿಂಸೆ ನೀಡುತ್ತಿದ್ದಾನೆ. ಆತನ ಸಂಸ್ಕಾರವೇ ಅದು ಎಮದಿದ್ದಾರೆ ಪ್ರಭಾತ್ ಯಾದವ್
|
ಅಮಾನವೀಯತೆಯ ಪರಾಕಾಷ್ಠೆ
ಆತ ತನ್ನ ಉದ್ಯೋಗಿಗಳನ್ನು ಎಷ್ಟು ಅಮಾನವೀಯವಾಗಿ ನಡೆಸಿಕೊಳ್ಳುತ್ತಿದ್ದಾನೆ ಎಂಬುದಕ್ಕೆ ಈ ವಿಡಿಯೋವೇ ಸಾಕ್ಷಿ ಎಂದಿದ್ದಾರೆ ನೆಹಾ ಭಾನ್.
ಹಿಂದುಗಳೇ ಟಾರ್ಗೆಟ್
ಸಲೀಂ ಅಲಿ ಬೆಂಗಳೂರಿನಲ್ಲಿ ಸೆಕ್ಯುರಿಟಿ ಏಜೆನ್ಸಿ ನಡೆಸುತ್ತಾನೆ. ಆತನ ಈ ಅಮಾನವೀಯ ವರ್ತನೆ ಇದೇ ಮೊದಲಲ್ಲ. ಆತ ಹಲವು ಹಿಂದುಗಳ ಮೇಲೆ ಹೀಗೆಯೇ ದೌರ್ಜನ್ಯ ನಡೆಸಿದ್ದಾನೆ. ಆತನ ಟಾರ್ಗೆಟ್ ಹಿಂದುಗಳು ಎಂದು ಜಯ ಮಹಾ ಕಾಳಿ ಎಂಬ ಟ್ವಿಟ್ಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ.
ನಡೆಸಿಕೊಳ್ಳುವ ರೀತಿ ಇದಲ್ಲ
ಉದ್ಯೋಗಿಗಳನ್ನು ನಡೆಸಿಕೊಳ್ಳುವ ರೀತಿ ಇದಲ್ಲ ಮಿಸ್ಟರ್ ಸಲೀಮ್ ಖಾನ್, ಸದ್ಯ ಪೊಲೀಸರು ಈತನನ್ನು ಬಂಧಿಸಿದ್ದಾರೆ ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.