ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇಡಮ್ ಫೀಸ್ ಬೇಡವಾ.. ಹ ಹ...ಹಾ ಅಳತೆ ಮತ್ತು ತೂಕದ ಇಲಾಖೆ ಅಧಿಕಾರಿಯ ಹಫ್ತಾ ವಸೂಲಿ ಸೀಕ್ರೆಟ್ ವಿಡಿಯೋ ರಿಲೀಸ್ !

|
Google Oneindia Kannada News

ಬೆಂಗಳೂರು ಜು. 31: ಫೀಸ್ ಕೊಡಿ.. ಯಾರಿಗೆ.. ? ಮೇಡಮ್ ಗೆ ಮೇಡಮ್ ಫೀಸ್ ಬೇಕಿದ್ರೆ ಕೇಳೋದಲ್ವಾ...? ನಿಮ್ಮಂತಹ ಅಧಿಕಾರಿಗಳ ವಿಶ್ವಾಸ ಇದ್ರೆ ಜಾಸ್ತೀನಿ ಕೊಡ್ತೀವಿ ಬಿಡಿ.. !
ರಾಜಧಾನಿಯ ಪೆಟ್ರೋಲ್ ಬಂಕ್ ಗಳ ಅಳತೆಯನ್ನು ಪ್ರಮಾಣೀಕರಿಸಿ ಸಾರ್ವಜನಿಕರಿಗೆ ಒಂದು ಹನಿ ಇಂಧನ ಮೋಸ ಆಗದಂತೆ ಪೂರೈಕೆ ಮಾಡುವಂತೆ ಕಾರ್ಯ ನಿರ್ವಹಿಸುವುದು ಕಾನೂನು ಮತ್ತು ಮಾಪನ ಶಾಸ್ತ್ರ ಇಲಖೆಯ ಕರ್ತವ್ಯ. ಆದರೆ ಪೆಟ್ರೋಲ್ ಬಂಕ್ ಗಳು ಮಾಡುವ ಮೋಸವನ್ನು ಪ್ರಶ್ನಿಸದೇ ಅವರಿಂದ ಮಾಸಿಕ ಮಾಮೂಲಿ ವಸೂಲಿ ಮಾಡುತ್ತಾರೆ ಎಂಬ ಆರೋಪ ಪೃಷ್ಠೀಕರಿಸುವ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ. ಅಳತೆ ಮತ್ತು ಮಾಪನ ಶಾಸ್ತ್ರ ಇಲಾಖೆ ತನಿಖಾ ದಳದ ಸಹಾಯಕ ನಿಯಂತ್ರಕಿ ಫೀಸ್ ಹೆಸರಿನಲ್ಲಿ ಪೆಟ್ರೋಲ್ ಬಂಕ್ ನಲ್ಲಿ ಮಾತುಕತೆ ನಡೆಸಿ ತನ್ನ ಅಧೀನ ಸಿಬ್ಬಂದಿ ಮೂಲಕ ಹಣ ಪಡೆಯುತ್ತಿರುವ ವಿಡಿಯೋ ಇದೀಗ ಬಹಿರಂಗವಾಗಿದೆ. ಪೆಟ್ರೋಲ್ ಬಂಕ್ ನ ಇಂಧನ ಹಾಕುವ ಯಂತ್ರಗಳನ್ನು ತಪಾಸಣೆ ಮಾಡದೇ ಕೇವಲ ಮಾಮೂಲಿ ವಸೂಲಿ ಮಾಡಿಕೊಂಡು ಬಂದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಅತೆ ಮತ್ತು ತೂಕದ ಇಲಾಖೆಯ ತನಿಖಾ ದಳದ ಅಧಿಕಾರಿ ಸೀಮಾ. ಮಾಗಿ ಅವರು ಸರ್ಕಾರಿ ಜೀಪಿನಲ್ಲಿ ಹೊಸಕೋಟೆ ಸಮೀಪದ ಬೂದಿಗೆರೆ ಬಳಿ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಗೆ ಹೋಗಿದ್ದಾರೆ. ಅಲ್ಲಿ ಪೆಟ್ರೊಲ್ ಬಂಕ್ ಸಿಬ್ಬಂದಿ ಜತೆ ಮಾತುಕತೆ ನಡೆಸಿದ್ದು ಬಿಟ್ಟರೆ ಯಾವುದೇ ಮೀಟರ್ ತಪಾಸಣೆ ಮಾಡಿಲ್ಲ. ವಿಶೇಷ ಅಂದರೆ 2019 ರಲ್ಲಿ ಎಸಿಬಿ ದಾಳಿಗೆ ಒಳಗಾಗಿ ಬಂಧನಕ್ಕೆ ಒಳಗಾಗಿದ್ದ ಏಜೆಂಟ್ ಶಿವಕುಮಾರ್ ಎನ್ನಲಾದ ವ್ಯಕ್ತಿಯ ಜತೆಯಲ್ಲಿ ಈ ಅಧಿಕಾರಿ ಹೋಗಿದ್ದಾರೆ. ಇದೇ ಏಜೆಂಟ್ ಫೀಸ್ ಬಗ್ಗೆ ಪಸ್ತಾಪಿಸಿ ಹಣ ಕೊಡಿಸಿರುವುದು ವಿಡಿಯೋದಲ್ಲಿ ರೆಕಾರ್ಡ್ ಆಗಿದೆ. ಶಿವಕುಮಾರ್ ಸೇರಿದಂತೆ 20 ಏಜೆಂಟರ ವಿರುದ್ಧ ಎಸಿಬಿ ಪೊಲೀಸರು ದಾಖಲಿಸಿರುವ ಭ್ರಷ್ಟಾಚಾರ ಪ್ರಕರಣದ ತನಿಖೆ ಪೂರ್ಣ ಆಗಲ್ಲ. ಆರೋಪದಿಂದ ಮುಕ್ತವಾಗಿಲ್ಲ. ಅದಾಗಲೇ ಶಿವಕುಮಾರ್ ತನ್ನ ನೆಚ್ಚಿನ ಅಧಿಕಾರಿಗಳ ಜತೆಯಲ್ಲಿ ಪೆಟ್ರೋಲ್ ಬಂಕ್ ಗಳಿಗೆ ವಿಸಿಟ್ ಮಾಡಿ ವಸೂಲಿ ಆರಂಭಿಸಿದ್ದಾರೆ.

ಒಬ್ಬ ಏಜೆಂಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಕ್ಕಿಬಿದ್ದು ಜೈಲಿಗೆ ಹೋಗಿ ಬಂದಿದ್ದಾನೆ. ಆತನನ್ನು ಸರ್ಕಾರಿ ಜೀಪಿನಲ್ಲಿ ಕೂರಿಸಿಕೊಂಡು ಹೋಗುವುದು ಕಾನೂನು ಉಲ್ಲಂಘನೆ ಅಲ್ಲವೇ ? ಮಾತ್ರವಲ್ಲ ತಾನು ಅಳತೆ ಮತ್ತು ತೂಕದ ಇಲಾಖೆಯ ಇನ್‌ಸ್ಪೆಕ್ಟರ್ ಎಂದು ಕೆಲವಡೆ ಬಿಂಬಿಸಿಕೊಂಡು ಪೆಟ್ರೋಲ್ ಬಂಕ್ ಮಲೀಕರ ಬಳಿ ಹಣ ವಸೂಲಿ ಮಾಡಿಕೊಡುತ್ತಿದ್ದಾರೆ. ಶಿವಕುಮಾರ್ ಬಗ್ಗೆ ಎಸಿಬಿಯಲ್ಲಿ ಕೇಸು ದಾಖಲಾಗಿರುವುದು ಎಲ್ಲರಿಗೂ ಗೊತ್ತಿದೆ. ಆದರೂ ಆತನ ನೇತೃತ್ವದಲ್ಲಿ ಕೆಲವು ಅಧಿಕಾರಿಗಳು ವಸೂಲಿ ಮಾಡುತ್ತಿರುವ ಆರೋಪ ಕೇಳಿ ಬಂದಿದೆ.

Bengaluru: Secret Talks about Stealing Petrol in Bunk Video Released


ತನಿಖೆ ನಡೆಸಿ ಕ್ರಮದ ಭರವಸೆ: ಕಾನೂನು ಮಾಪನ ಶಾಸ್ತ್ರದ ಇಲಾಖೆಯ ಅಧಿಕಾರಿ ಪೆಟ್ರೋಲ್ ಬಂಕ್ ಬಳಿ ಹಣ ಪಡೆದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಕುರಿತು ಸಾಕ್ಷಾಧಾರಗಳು ಲಭ್ಯವಾದ ಕೂಡಲೇ ತನಿಖೆಗೆ ವಹಿಸುತ್ತೇನೆ. ತಪ್ಪು ಸಾಬೀತಾದರೆ ಕಟ್ಟ ನಿಟ್ಟಿನ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿಯಂತ್ರಕರಾದ ಶ್ರಿರೂಪಾ ಅವರು ಒನ್ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.

ಬೂದಿಗೆರೆ ರಸ್ತೆಯಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಮಾಲೀಕರ ಬಳಿ ಹಣ ವಸೂಲಿ ಮಾಡುವ ಬಗ್ಗೆ ನಡೆದಿರುವ ಮಾತುಕತೆ ವಿವರ ಇಲ್ಲಿದೆ.

ಇಲ್ಲಾ ಸಿರಾಜ್ ಗೆ ಎಲ್ಲ ಲಿಂಕ್ ಇದೆ ಮೇಡಮ್ .....
ಏಜೆಂಟ್ ಶಿವಕುಮರ್: ಫೀಸ್ ಕೊಡಿ..
ಪೆಟ್ರೋಲ್ ಬಂಕ್ ಸಿಬ್ಬಂದಿ : ಯಾರಿಗೆ
ಏಜೆಂಟ್ ಶಿವಕುಮಾರ್ : ಮೇಡಮ್ ಗೆ ..
ಪೆಟ್ರೋಲ್ ಬಂಕ್ ಸಿಬ್ಬಂದಿ: ಫೀಸ್ ಬೇಕಾ ? ಕೇಳೋದು ಅಲ್ವಾ ಮೇಡಮ್ ..
ಪೆಟ್ರೋಲ್ ಬಂಕ್ ಸಿಬ್ಬಂದಿ: ನಿಮ್ಮಂತವರ ವಿಶ್ವಾಸ ಇದ್ರೆ ಸ್ವಲ್ಪ ಜಾಸ್ತೀನೆ ಕೊಡ್ತೀವಿ..
ನೀನು ನೆಕ್ಷ ಬರೋ ಆಫೀಸರ್ ಫ್ಲೇಸ್ ಗಾ.. ?

English summary
Secret talks between Petrol Bunk staff and legal metrology officer about monthly mamuli in Bunks. Dealing with legal metrology Department Officers through Agent who was arrested by ACB in last year. Video goes viral on social media
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X