ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಅಕ್ಕಿ, ಮೊಟ್ಟೆ ಸಮಸ್ಯೆಯಿಲ್ಲ: ಸರ್ಕಾರ

ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಅಕ್ಕಿ, ಸಕ್ಕರೆ, ಮೊಟ್ಟೆ ಇಲ್ಲ ಎಂದು ಹೇಳಿದ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳು. ಬೆಂಗಳೂರಿನಲ್ಲಿ ವಿವಿಧೆಡೆ ಲಭ್ಯವಿರುವ ಅಕ್ಕಿ, ಮೊಟ್ಟೆ, ಸಕ್ಕರೆ ಪರೀಕ್ಷೆ ನಡೆಸಲಾಗಿದ್ದು, ಅದರಲ್ಲಿ ಯ

|
Google Oneindia Kannada News

ಬೆಂಗಳೂರು, ಜೂನ್ 10: ದೇಶದ ನಾಗರಿಕರಲ್ಲಿ ಆತಂಕ ಹುಟ್ಟಿಸಿರುವ ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿ ಸಮಸ್ಯೆಯು ಬೆಂಗಳೂರಿನಲ್ಲಿ ಇಲ್ಲ ಎಂದು ಆಹಾರ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಕರ್ನಾಟಕಕ್ಕೂ ಕಾಲಿಟ್ಟ ಪ್ಲಾಸ್ಟಿಕ್ ಸಕ್ಕರೆ, ತನಿಖೆಗೆ ಆದೇಶ ಕರ್ನಾಟಕಕ್ಕೂ ಕಾಲಿಟ್ಟ ಪ್ಲಾಸ್ಟಿಕ್ ಸಕ್ಕರೆ, ತನಿಖೆಗೆ ಆದೇಶ

ಇತ್ತೀಚೆಗೆ, ರಾಜ್ಯದ ಅಲ್ಲಲ್ಲಿ ಅನ್ನಭಾಗ್ಯ ಯೋಜನೆಯಡಿಯಲ್ಲೇ ನೀಡಲಾದ ಅಕ್ಕಿಯಲ್ಲಿಯೂ ಪ್ಲಾಸ್ಟಿಕ್ ಅಕ್ಕಿ ಮಿಶ್ರವಾಗಿದ್ದು ಪತ್ತೆಯಾಗಿತ್ತು. ಅಲ್ಲದೆ, ಗದಗ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಸಕ್ಕರೆ ಪತ್ತೆಯಾಗಿತ್ತು. ಇದರಿಂದಾಗಿ ನಾಗರಿಕರು ಆತಂಕಗೊಂಡಿದ್ದರು. ಮಾಗಡಿಯಲ್ಲಿ ಪ್ಲಾಸ್ಟಿಕ್ ಮೊಟ್ಟೆ ಸಿಕ್ಕಿತ್ತು.

Bengaluru safe from plastic Egg, Rice, Sugar: Govt

ಈ ಹಿನ್ನೆಲೆಯಲ್ಲಿ, ರಾಜ್ಯ ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆಯ ಆಹಾರ ಸುರಕ್ಷಿತ ದಳವು ನಗರದೆಲ್ಲೆಡೆ ಸಿಗುತ್ತಿರುವ ಅಕ್ಕಿ, ಮೊಟ್ಟೆ, ಸಕ್ಕರೆಗಳನ್ನು ವಶಪಡಿಸಿಕೊಂಡು ಅದನ್ನು ಪರೀಕ್ಷೆ ನಡೆಸಿದ್ದು, ಅವು ಕಲಬೆರಕೆಗೊಂಡಿಲ್ಲ ಹಾಗೂ ಸುರಕ್ಷಿತವಾಗಿವೆ ಎಂದಿದ್ದಾರೆ.

ಮಾಗಡಿಯಲ್ಲಿ ಸಿಕ್ಕಿದ್ದು ಪಾಸ್ಟಿಕ್ ಮೊಟ್ಟೆನಾ?ಮಾಗಡಿಯಲ್ಲಿ ಸಿಕ್ಕಿದ್ದು ಪಾಸ್ಟಿಕ್ ಮೊಟ್ಟೆನಾ?

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಹಾರ ಸುರಕ್ಷಿತ ದಳದ ಉಪ ಆಯುಕ್ತ ಡಾ. ಹರ್ಷವರ್ಧನ್ ಅವರು, ''ಸದ್ಯದ ಮಟ್ಟಿಗೆ ಬೆಂಗಳೂರಿನ ನಾಗರಿಕರು ಸೇಫ್ ಆಗಿದ್ದಾರೆ. ನಾವು ಎಲ್ಲೆಡೆ ದೊರಕುತ್ತಿರುವ ಅಕ್ಕಿ, ಮೊಟ್ಟೆ, ಸಕ್ಕರೆಗಳನ್ನು ಪರೀಕ್ಷೆ ಮಾಡಿದ್ದು ಅದರಲ್ಲಿ ಯಾವುದೇ ನಕಲಿ ಪದಾರ್ಥ ಅಥವಾ ಕಲಬೆರೆಕೆ ಪತ್ತೆಯಾಗಿಲ್ಲ'' ಎಂದು ತಿಳಿಸಿದ್ದಾರೆ.

English summary
Karnataka Food and Civil Supply department official said that, Benggaluru is safe from plastic egg, rice and sugar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X