ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಟ್ರಾಫಿಕ್ ಜಾಮ್: ವಿಶ್ವದಲ್ಲೇ ಬೆಂಗಳೂರಿಗೆ ಅಗ್ರಸ್ಥಾನ

|
Google Oneindia Kannada News

Recommended Video

Bengaluru's traffic is the worst in the world | Bangalore | Traffic | No 1 | World

ಬೆಂಗಳೂರು, ಜನವರಿ 30: ಟ್ರಾಫಿಕ್ ಜಾಮ್‌ನಲ್ಲಿ ಬೆಂಗಳೂರು ವಿಶ್ವದಲ್ಲೇ ನಂಬರ್ ಒನ್ ನಗರವಾಗಿದೆ.

ಉದ್ಯಾನ ನಗರಿ, ಸಿಲಿಕಾನ್ ಸಿಟಿ, ಐಟಿ ರಾಜಧಾನಿ ಎಂಬೆಲ್ಲಾ ಹೆಸರಿನಿಂದ ಖ್ಯಾತಿ ಪಡೆದಿರುವ ಬೆಂಗಳೂರು ಇದೀಗ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ನಗರವಾಗಿದೆ.

ಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶಬೈಕ್ ಸವಾರರಿಗೆ ಪೊಲೀಸರಿಂದ ನೆಮ್ಮದಿ ನೀಡಿದ ಹೈಕೋರ್ಟ್ ಆದೇಶ

ಟಾಂಟಾಂ ಸಂಚಾರ ಸೂಚ್ಯಂಕ ವರದಿ ಪ್ರಕಾರ ವಿಶ್ವದ 57 ರಾಷ್ಟ್ರಗಳ 416 ನಗರಗಳ ಪೈಕಿ ಬೆಂಗಳೂರು ಸಂಚಾರ ದಟ್ಟಣೆಯಿಂದಾಗಿ ಜನರು ಸಂಚಾರದಲ್ಲೇ ಹೆಚ್ಚುವರಿಯಾಗಿ ಸರಾಸರಿ ಶೇ.71ರಷ್ಟು ಸಮಯ ಕಳೆಯುತ್ತಿದ್ದಾರೆ.

2019ರ ಜುಲೈ ತಿಂಗಳಿನ ಅಂಕಿ ಅಂಶದ ಪ್ರಕಾರ ಬೆಂಗಳೂರು ಮಹಾನಗರದಲ್ಲಿ ಕನಿಷ್ಟ 82 ಲಕ್ಷಕ್ಕೂ ಅಧಿಕ ವಾಹನಗಳು ಪ್ರತಿನಿತ್ಯ ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ನಡುವೆ ಓಲಾ, ಊಬರ್ ಗಳಂತಹ ಟ್ಯಾಕ್ಸಿ ಕಂಪೆನಿಗಳ ಅಸ್ಥಿತ್ವದ ನಂತರ ಟ್ರಾಫಿಕ್ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆ. ಕಳೆದ 40 ವರ್ಷದಲ್ಲಿ ಬೆಂಗಳೂ ರಿನ ವಾಹನಗಳ ಸಂಖ್ಯೆ 65 ಪಟ್ಟು ಹೆಚ್ಚಾಗಿದೆ. ಪರಿಣಾಮ ರಾಜ್ಯ ರಾಜಧಾನಿ ರಸ್ತೆಗಳಲ್ಲಿನ ವಾಹನ ದಟ್ಟಣೆಯ ಪ್ರಮಾಣ ಶೇ.64 ರಷ್ಟು. ಇನ್ನೂ ವಾಹನದ ಸರಾಸರಿ ವೇಗ ಸೆಕೆಂಡಿಗೆ ಕೇವಲ 8.35 ಮೀಟರ್.

ಕೇಂದ್ರ ಸರ್ಕಾರ ನೀಡಿರುವ ಅಂಕಿಅಂಶಗಳ ಪ್ರಕಾರ ಭಾರತೀಯ ನಗರಗಳಲ್ಲಿನ ಟ್ರಾಫಿಕ್ ಕಾರಣದಿಂದಲೇ ವರ್ಷಕ್ಕೆ ಸುಮಾರು 1.5 ಲಕ್ಷ ಕೋಟಿ ರೂಪಾಯಿಗಳ ಆದಾಯ ನಷ್ಟವಾಗುತ್ತಿದೆ. 2019ರ ಅವಧಿಯಲ್ಲಿ ಟ್ರಾಫಿಕ್ ಮತ್ತು ರಸ್ತೆ ಅಪಘಾತದಿಂದ ಸಾವನ್ನಪ್ಪಿದವರ ಸಂಖ್ಯೆ 2015 ಎನ್ನುತ್ತಿದೆ ಕೇಂದ್ರ ಅಪರಾಧ ವಿಭಾಗಗಳ ವರದಿ. ಇನ್ನೂ ವಾಯು ಮಾಲಿನ್ಯ ಮತ್ತು ಶಬ್ಧ ಮಾಲಿನ್ಯದಿಂದಾಗಿ ಉಂಟಾಗುವ ನಷ್ಟಕ್ಕೆ ಬೆಲೆ ಕಟ್ಟಲು ಸಾಧ್ಯಗುತ್ತಿಲ್ಲ.

 ಮುಂಬೈನಲ್ಲೂ ಶೇ.65ರಷ್ಟು ಸಂಚಾರ ದಟ್ಟಣೆ

ಮುಂಬೈನಲ್ಲೂ ಶೇ.65ರಷ್ಟು ಸಂಚಾರ ದಟ್ಟಣೆ

ವಿಶ್ವದ ಅತಿಹೆಚ್ಚು ಸಂಚಾರ ದಟ್ಟಣೆ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಅಷ್ಟೇ ಅಲ್ಲದೆ, ಸರಾಸರಿ ಶೇ.65ರಷ್ಟು ಸಂಚಾರ ದಟ್ಟಣೆ ಇರುವ ವಾಣಿಜ್ಯ ರಾಜಧಾನಿ ಮುಂಬೈಗೆ ನಾಲ್ಕನೇ ಸ್ಥಾನ, ಶೇ.59 ಸಂಚಾರ ದಟ್ಟಣೆಯೊಂದಿಗೆ ಪುಣೆ ಐದನೇ ಸ್ಥಾನ, ಶೇ.56ರಷ್ಟು ದಟ್ಟಣೆಯೊಂದಿಗೆ ನವದೆಹಲಿ 8 ನೇ ಸ್ಥಾನ ಪಡೆದುಕೊಂಡಿದೆ.

 ವಿಶ್ವದ 57 ದೇಶಗಳ 416 ನಗರಗಳ ಪಟ್ಟಿ

ವಿಶ್ವದ 57 ದೇಶಗಳ 416 ನಗರಗಳ ಪಟ್ಟಿ

ವಾಹನಗಳ ನ್ಯಾವಿಗೇಶನ್ ವ್ಯವಸ್ಥೆ ಮಾಡುವ ಟಾಮ್ ಟಾಮ್ ಸಂಸ್ಥೆ ಕಳೆದ 9 ವರ್ಷಗಳಿಂದ ಟ್ರಾಫಿಕ್ ಇಂಡೆಕ್ಸ್ ಬಿಡುಗಡೆ ಮಾಡುತ್ತಾ ಬರುತ್ತಿದೆ. ಈ ವರ್ಷದ ಪಟ್ಟಿಯಲ್ಲಿ ವಿಶ್ವದ 57 ದೇಶಗಳ 416 ಪ್ರಮುಖ ನಗರಗಳನ್ನು ಪರಿಗಣಿಸಿದೆ. ಇದರ ಪ್ರಕಾರ, ವಿಶ್ವದಲ್ಲೇ ಅತಿ ಹೆಚ್ಚು ಟ್ರಾಫಿಕ್ ಬಾಧೆಗೆ ಒಳಗಾಗಿರುವುದು ಭಾರತವೇ ಅಂತೆ. ಅಗ್ರಸ್ಥಾನದಲ್ಲಿ ಬೆಂಗಳೂರು ನಗರವಿದೆ. ಟಾಪ್ 10 ಪಟ್ಟಿಯಲ್ಲಿ ಬೆಂಗಳೂರಿನ ಜೊತೆ ದೆಹಲಿ, ಮುಂಬೈ ಮತ್ತು ಪುಣೆ ಇವೆ.

 ಶೇ.71ರಷ್ಟು ಸಮಯ ವ್ಯರ್ಥ

ಶೇ.71ರಷ್ಟು ಸಮಯ ವ್ಯರ್ಥ

ಬೆಂಗಳೂರಿನಲ್ಲಿ ಟ್ರಾಫಿಕ್ ದಟ್ಟಣೆ ಶೇ. 71ರಷ್ಟಿದೆಯಂತೆ. ಅಂದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಪ್ರಯಾಣ ಮಾಡುವಾಗ, ಯಾವುದೇ ಟ್ರಾಫಿಕ್ ಇಲ್ಲದಾಗ ತಗುಲುವ ಸಮಯಕ್ಕಿಂತಲೂ ಶೇ. 71ರಷ್ಟು ಹೆಚ್ಚು ಸಮಯ ವ್ಯಯವಾಗುತ್ತದೆ. ಅಂದರೆ, ಬೆಂಗಳೂರಿನ ಖಾಲಿ ರಸ್ತೆಗಳಲ್ಲಿ ನೀವು ಒಂದು ಸ್ಥಳಕ್ಕೆ ಹೋಗಲು 1 ಗಂಟೆ ಬೇಕಾಗುತ್ತದೆ ಎಂದಾದರೆ, ಅದೇ ಮಾಮೂಲಿಯ ಟ್ರಾಫಿಕ್ ಇರುವ ವೇಳೆ ಅದೇ ಸ್ಥಳಕ್ಕೆ ಹೋಗಲು ಒಂದು ಗಂಟೆ 42 ನಿಮಿಷ ಬೇಕಾಗುತ್ತದೆ.

 ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ದೇಶಗಳು

ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ದೇಶಗಳು

1) ಬೆಂಗಳೂರು
2) ಮನೀಲಾ, ಪಿಲಿಪ್ಪೈನ್ಸ್
3) ಬೊಗೋಟಾ, ಕೊಲಂಬಿಯಾ4) ಮುಂಬೈ
5) ಪುಣೆ
6) ಮಾಸ್ಕೋ, ರಷ್ಯಾ
7) ಲಿಮಾ, ಪೆರು
8) ದೆಹಲಿ
9) ಇಸ್ತಾಂಬುಲ್ (ಟರ್ಕಿ)
10) ಜಕಾರ್ತ (ಇಂಡೋನೇಷ್ಯಾ)

English summary
Bengaluru has officially earned the dubious distinction of being the world’s most traffic congested city. India’s startup hub fared the worst in traffic conditions among 415 cities across 57 countries.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X