• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರು ಟ್ರಾಫಿಕ್ ಜಾಮ್ ಆಗ್ನೇಯ ಏಷ್ಯಾದಲ್ಲೇ ಕುಖ್ಯಾತಿ!

|

ಬೆಂಗಳೂರು, ಏಪ್ರಿಲ್ 20: ಆಗ್ನೇಯ ಏಷ್ಯಾದ ಮೆಟ್ರೋ ನಗರಗಳಲ್ಲೇ ಬೆಂಗಳೂರು ಅತಿ ಹೆಚ್ಚು ವಾಹನ ದಟ್ಟಣೆ ಹೊಂದಿದ 2ನೇ ನಗರವೆಂಬುದು ಇತ್ತೀಚೆಗಿನ ಸಮೀಕ್ಷೆಯೊಂದರಿಂದ ಬಹಿರಂಗಗೊಂಡಿದೆ.

ಅಲ್ಲದೆ ರಾಷ್ಟ್ರ ರಾಜಧಾನಿ ದೆಹಲಿ, ಚೀನಾದ ಹಾಂಕಾಂಗ್ , ವಿಯೆಟ್ನಾಂ ರಾಜಧಾನಿ ಹನೋಯ್ ಮತ್ತು ಫಿಲಿಪೀನ್ಸ್ ರಾಜಧಾನಿ ಮನಿಲಾದಲ್ಲಿಯೂ ಭಾರೀ ವಾಹನಗಳ ದಟ್ಟಣೆ ಇದ್ದು, ಈ ಬಗ್ಗೆ ಎಚ್ಚೆತ್ತುಕೊಂಡು ಆಯಾ ರಾಷ್ಟ್ರದ ಸರ್ಕಾರಗಳು ಕ್ರಮ ಕೈಗೊಳ್ಳದಿದ್ದರೆ, ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ ಎಂದು ಸಮೀಕ್ಷೆ ಎಚ್ಚರಿಸಿದೆ.

ಸಂಚಾರ ದಟ್ಟಣೆ ಭೀತಿ: ಜಯದೇವ ಮೇಲ್ಸೇತುವೆ ತೆರವು ಸದ್ಯಕ್ಕಿಲ್ಲ

ಅಪ್ಲಿಕೇಷನ್ ಆಧಾರಿತ ಕ್ಯಾಬ್ ಸೇವೆ ನೀಡುವ ಊಬರ್ ರಚಿಸಿದ ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್ ನಡೆಸಿದ ಈ ಸಮೀಕ್ಷೆಯಲ್ಲಿ ಕ್ರಿಪ್ರವಾಗಿ ಅಭಿವೃದ್ಧಿ ಪಥದತ್ತ ಸಾಗುತ್ತಿರುವ ನವದೆಹಲಿ, ಮುಂಬೈ, ಕೋಲ್ಕತ್ತ ಮತ್ತು ಬೆಂಗಳೂರಿನ ತಲಾ 300 ಮಂದಿ ಪ್ರತಿಕ್ರಿಯೆ ನೀಡಿದ್ದಾರೆ.

ಸಮೀಕ್ಷೆಗೆ ಪ್ರತಿಕ್ರಿಯಿಸಿದ ಬೆಂಗಳೂರು ಮತ್ತು ಕರ್ನಾಟಕಸ ಇತರ ಭಾಗದ ಜನರ ಪೈಕಿ ಶೇ.89 ಮಂದಿ ಮುಂದಿನ ಐದು ವರ್ಷಗಳಲ್ಲಿ ಕಾರು ಖರೀದಿಸಲು ಯೋಜನೆ ಹಾಕಿಕೊಂಡಿದ್ದಾರೆ. ಹೀಗಾದಲ್ಲಿ ಸಂಚಾರ ದಟ್ಟಣೆ ಮತ್ತಷ್ಟು ಹದಗೆಡಲಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಹೆಚ್ಚು ವಾಹನಗಳ ಬಳಕೆ ಮಾಡಲದಂತೆ ಮತ್ತು ಶೇರಿಂಗ್ ವಾಹನಗಳನ್ನು ಸಂಚಾರ ಸೇರಿದಂತೆ ಹಲವು ಸಲಹೆಗಳನ್ನು ಸಮೀಕ್ಷೆಯಲ್ಲಿ ನೀಡಲಾಗಿದೆ.

ಮಹಾನಗರದಗಳಲ್ಲಿ ಹೆಚ್ಚುತ್ತಿರುವ ವಾಹನಗಳ ಸಂಖ್ಯೆ ಕೇವಲ ಸಂಚಾರ ದಟ್ಟಣೆಗಷ್ಟೇ ಕಾರಣವಾಗುವುದಲ್ಲದೆ, ಪರಿಸರ ಮಾಲಿನ್ಯ, ಸಂಚಾರ ವಿಳಂಬ, ಹೆಚ್ಚು ಇಂಧನ ಬಳಕೆ, ಅಪಘಾತ, ನೇರ ಆರ್ಥಿಕ ನಷ್ಟ ಸೇರಿದಂತೆ ಇತರ ಸಮಸ್ಯೆಗಳಿಗೂ ಕಾರಣವಾಗಲಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ವಾಹನ ದಟ್ಟಣೆಯಿಂದಾಗಿ ದೆಹಲಿಯಲ್ಲಿ ವಾರ್ಷಿಕ 60 ಸಾವಿರ ಕೋಟಿ ರೂ. ಸಾಮಾಜಿಕ ವೆಚ್ಚವಾಗುತ್ತಿದೆ. ಬೆಂಗಳೂರಲ್ಲಿ ಈ ವೆಚ್ಚ 37 ಸಾವಿರ ಕೋಟಿ ರೂ. ಆಗಿದೆ. ಭಾರತದ ನಾಲ್ಕು ನಗರಗಳ ರಸ್ತೆಗಳಲ್ಲಿ ಕಿಕ್ಕಿರಿಸ ವಾಹನಗಳ ಸಂಚಾರವಿರುತ್ತದೆ. ಇನ್ನು, ತೀವ್ರ ಚಟುವಟಿಕೆ ಇರುವ ಅವಧಿಯಲ್ಲಿ ನಾಗರಿಕರು ಒಂದು ಕಡೆಯಿಂದ ಮತ್ತೊಂದು ಕಡೆ ಸಾಗುವುದು ಭಾರೀ ದುಸ್ತರವಾಗುತ್ತದೆ ಎಂದು ಸಮೀಕ್ಷೆ ವಿಶ್ಲೇಷಿಸಿದೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru's traffic jam has become most notorious and stands second in in south east Asia comparing to other metro cities in this region, the survey revealed. Interestingly, the datas revealed that five more lakhs of people planning to buy new car in Bengaluru as well in Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more