ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಅಪಾರ್ಟ್‌ಮೆಂಟ್‌ ಮೇಲ್ಛಾವಣಿಯಲ್ಲಿ ಬೃಹತ್ ಸೌರವಿದ್ಯುತ್ ಸ್ಥಾವರ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 9: ಸಿಲಿಕಾನ್ ಸಿಟಿ ಯಶವಂತಪುರದ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್‌ನ ನಿವಾಸಿಗಳ ಸಂಘ ಗ್ರೀನ್ ಇನಿಶಿಯೇಟಿವ್ ಯೋಜನೆಯಡಿಯಲ್ಲಿ ಕ್ರಾಂತಿಕಾರಕ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ಬೆಂಗಳೂರಿನಲ್ಲೇ ಮೊಟ್ಟ ಮೊದಲ ಬಾರಿ ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್‌ನ ಮೇಲ್ಛಾವಣಿಯಲ್ಲಿ ರೆನ್ ಎಕ್ಸೆಲ್ ಇಕೊಟೆಕ್ ಸಂಸ್ಥೆಯು ನಿರ್ಮಿಸಿರುವ ಬೃಹತ್ ಸೌರವಿದ್ಯುತ್ ಸ್ಥಾವರವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಉದ್ಘಾಟಿಸಿದ್ದಾರೆ.

ಕೊರೊನಾ ಆತಂಕದ ಮಧ್ಯೆ ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂಕೊರೊನಾ ಆತಂಕದ ಮಧ್ಯೆ ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ ಕೊಟ್ಟ ಸಿಎಂ

"ಸಮಾಜಕ್ಕೆ ಒಳ್ಳೆ ಸಂದೇಶ ಕೊಡುವ ಕೆಲಸ ಬ್ರಿಗೇಡ್ ಗೇಟ್ ವೇ ಜನ ಮಾಡುತ್ತಿದ್ದಾರೆ. ಪ್ರಕೃತಿ ಕಾಪಾಡುವುದು, ನೀರನ್ನು ಪುನಶ್ಚೇತನಗೊಳಿಸುವುದು, ಕಸದ ಪುನಶ್ಚೇತನದ ಜೊತೆಗೆ ವಿದ್ಯುತ್ ಉತ್ಪಾದನೆಗೆ ಸ್ವಯಂ ಪ್ರಯತ್ನ ಮಾಡುತ್ತಿದ್ದಾರೆ," ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದರು.

Bengalurus First Solar Power Plant inaugurated on apartment top by Minister Ashwath Narayana

ಭಾರತದಲ್ಲಿ ಅತಿಹೆಚ್ಚು ವಿದ್ಯುತ್ ಕರೆಂಟ್ ಉತ್ಪಾದನೆ ಮಾಡುತ್ತಿರುವ ಅಪಾರ್ಟ್‌ಮೆಂಟ್‌ ಇದಾಗಿದೆ. ಇಲ್ಲಿ 354.4 ಕಿಲೊ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುತ್ತಿದ್ದಾರೆ," ಎಂದು ಸಚಿವರು ಶ್ಲಾಘಿಸಿದ್ದಾರೆ.

ಭವಿಷ್ಯದಲ್ಲಿ ನವೀಕರಿಸುವ ಶಕ್ತಿಮೂಲವೇ ಸೌರವಿದ್ಯುತ್

ಭವಿಷ್ಯದಲ್ಲಿ ನವೀಕರಿಸುವ ಶಕ್ತಿಮೂಲವೇ ಸೌರವಿದ್ಯುತ್

"ಹಸಿರು ಮೂಲಸೌಕರ್ಯವನ್ನು ನಿರ್ಮಿಸಲು ಅಪಾರ್ಟ್‌ಮೆಂಟ್‌ ಸಂಘದ ಜೊತೆ ಪಾಲುದಾರಿಕೆ ಹೊಂದಿದ್ದಕ್ಕೆ ತಮಗೆ ಸಂತೋಷವಾಗಿದೆ ಎಂದು ರೆನ್ಎಕ್ಸ್‌ಸೋಲ್ ಇಕೋಟೆಕ್ ಸಂಸ್ಥೆಯ ಮಾಲೀಕರು ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್‌ ಶ್ರೀನಿವಾಸ್ ಕುಮಾರ್ ಹೇಳಿದ್ದಾರೆ. ಬೆಂಗಳೂರು ಅಪಾರ್ಟ್‌ಮೆಂಟ್ ಛಾವಣಿ ಮೇಲ್ಭಾಗದ ಜಾಗ ಅಥವಾ ವಸತಿ ಮೇಲ್ಛಾವಣಿ ಜಾಗವನ್ನು ಹೇಗೆ ಸೋಲಾರ್ ಶಕ್ತಿಯ ಉತ್ಪಾದನೆಗೆ ಉಪಯೋಗಿಸಬಹುದು ಎನ್ನುವುದನ್ನು ಸಾಬೀತುಪಡಿಸಿದಂತಾಗಿದೆ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಇಂಧನ ಉತ್ಪಾದನೆ ಮಾಡುವ ಮೂಲಕ ನಾವು ನೇರವಾಗಿ ಸರ್ಕಾರಕ್ಕೆ ಸಹಾಯ ಮಾಡಬಹುದಾಗಿದೆ. ಏಕೆಂದರೆ ಭವಿಷ್ಯದಲ್ಲಿ ನವೀಕರಿಸಬಹುದಾದ ಏಕೈಕ ಶಕ್ತಿ ಮೂಲವೇ ಸೌರವಿದ್ಯುತ್ ಆಗಿದ್ದು, ಈ ಸಂಪನ್ಮೂಲವನ್ನು ಬಳಸಿಕೊಳ್ಳುವತ್ತ ಹೆಚ್ಚು ಗಮನಹರಿಸಬೇಕಿದೆ," ಎಂದು ಹೇಳಿದ್ದಾರೆ.

ವಾರ್ಷಿಕ ವಿದ್ಯುತ್ ಉತ್ಪಾದನೆ ಪ್ರಮಾಣ 4.78 ಲಕ್ಷ ಯೂನಿಟ್

ವಾರ್ಷಿಕ ವಿದ್ಯುತ್ ಉತ್ಪಾದನೆ ಪ್ರಮಾಣ 4.78 ಲಕ್ಷ ಯೂನಿಟ್

ಒಂದು ಅಂದಾಜಿನ ಪ್ರಕಾರ, ಬ್ರಿಗೇಡ್ ಗೇಟ್ ವೇ ರೂಫ್ ಟಾಪ್ ಪವರ್ ಪ್ಲಾಂಟ್‌ನಲ್ಲಿ ಅಂದಾಜು ವಾರ್ಷಿಕ 4.78 ಲಕ್ಷ ಯೂನಿಟ್ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ. ಪ್ರಸ್ತುತ ಅಂದಾಜು ಬಳಕೆಯ ಶೇ. 69ರವರೆಗೆ ಇಂಧನ ಉಳಿಸಲು ಮತ್ತು ವಾರ್ಷಿಕ 530 ಟನ್‌ಗಳಷ್ಟು ಇಂಗಾಲದ ಹೊರಸೂಸುವಿಕೆಯನ್ನು ತಗ್ಗಿಸಲು ಸಹಾಯವಾಗಿದೆ. "ಆಧುನಿಕ ತಾಂತ್ರಿಕತೆಯ ವೇಗದಲ್ಲಿ ನಾಗಾಲೋಟದಿಂದ ಚಲಿಸುತ್ತಿರುವ ವಿಶ್ವದರ್ಜೆಯ ಬೆಂಗಳೂರಿನಲ್ಲಿ ಈ ಬಗೆಯ ಸುಸ್ಥಿರ ಅಭಿವೃದ್ಧಿಯ ಪರಿಕ್ರಮಗಳು ನಿಜಕ್ಕೂ ಶ್ಲಾಘನೀಯವಾಗಿದೆ. ಈ ರೀತಿಯ ಪ್ರಕೃತಿ ಪ್ರಣೀತ ಅಭಿವೃದ್ಧಿ ಭವಿಷ್ಯದ ದೃಷ್ಟಿಕೋನದಲ್ಲಿ ಹೆಚ್ಚಿನ ಮಹತ್ವದ್ದಾಗಿದೆ," ಎಂದು ಬ್ರಿಗೇಡ್ ಗೇಟ್ ವೇ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಅಧ್ಯಕ್ಷ ಮಹೇಶ್ ಕುಮಾರ್ ಹೇಳಿದ್ದಾರೆ.

ಮೊದಲ ಬಾರಿ ಕಾರ್ಯಾರಂಭ ಮಾಡಿದ ಮೊದಲ ಸೌರವಿದ್ಯುತ್ ಸ್ಥಾವರ

ಮೊದಲ ಬಾರಿ ಕಾರ್ಯಾರಂಭ ಮಾಡಿದ ಮೊದಲ ಸೌರವಿದ್ಯುತ್ ಸ್ಥಾವರ

ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಕಾಲದಲ್ಲಿ ಲಾಕ್‌ಡೌನ್‌ ಹೊರತಾಗಿ 45-75 ದಿನಗಳ ದಾಖಲೆ ಅವಧಿಯಲ್ಲಿ ಪೂರ್ಣಗೊಳಿಸಿದ್ದು, 2021ರ ಸೆಪ್ಟೆಂಬರ್ 9ರಂದೇ ಕಾರ್ಯಾರಂಭ ಮಾಡಿದೆ. 1,255 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡ 13ಕ್ಕೂ ಹೆಚ್ಚು ವಸತಿ ಗೋಪುರಗಳಿರುವ ಬ್ರಿಗೇಡ್ ಗೇಟ್‌ವೇ ಅಪಾರ್ಟ್‌ಮೆಂಟ್‌ಗಳ ಈ ಸೋಲಾರ್ ಮೇಲ್ಛಾವಣಿ ಸ್ಥಾಪನೆ ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಕಾರ್ಯಗತಗೊಳಿಸಿರುವ ಒಂದು ಬೃಹತ್‌ ಸೋಲಾರ್ ಸ್ಥಾವರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಬೆಂಗಳೂರಿನಲ್ಲಿ ಸ್ಥಾಪಿಸಿದ ಸೌರವಿದ್ಯುತ್ ಸ್ಥಾವರದ ವಿಶೇಷತೆ

ಬೆಂಗಳೂರಿನಲ್ಲಿ ಸ್ಥಾಪಿಸಿದ ಸೌರವಿದ್ಯುತ್ ಸ್ಥಾವರದ ವಿಶೇಷತೆ

ಬೆಂಗಳೂರು ಯಶವಂತಪುರದ ಅಪಾರ್ಟ್‌ಮೆಂಟ್‌ ಮೇಲೆ ಸ್ಥಾಪನೆಯಾಗಿರುವ ರಾಜ್ಯದ ಬೃಹತ್ ಸೌರವಿದ್ಯುತ್ ಸ್ಥಾವರವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. 400Wp, 72 ಸೆಲ್‌ಗಳು, Enphase-USA ನಿರ್ಮಿತ ಸೋಲಾರ್ ಮೈಕ್ರೋ ಇನ್ವರ್ಟರ್‌ಗಳ ಜೊತೆ ಮೊನೊ PERC ಕ್ರಿಸ್ಟಲಿನ್ ಟೆಕ್ನಾಲಜಿ ಸೋಲಾರ್ ಪ್ಯಾನಲ್‌ಗಳು REC-ಸಿಂಗಾಪುರ್ ನಲ್ಲಿ ತಯಾರಿಸಲಾದ 354.4 kW ಮೇಲ್ಛಾವಣಿಯ ಸೌರ ವಿದ್ಯುತ್ ಸ್ಥಾವರ ವ್ಯವಸ್ಥೆಯ ವಿಶೇಷವಾಗಿದೆ.
ಪ್ರತಿ ಸೋಲಾರ್ ಪ್ಯಾನಲ್‌ನಲ್ಲಿ ಒಂದು ಮೈಕ್ರೋ ಇನ್ವರ್ಟರ್ ಅಳವಡಿಸಲಾಗಿದೆ. ಹೀಗಾಗಿ ಅತ್ಯುತ್ತಮ ಸೌರಶಕ್ತಿ ಉತ್ಪಾದನೆಗೆ ಪ್ರತ್ಯೇಕವಾಗಿ ಸೋಲಾರ್ ಪ್ಯಾನಲ್‌ನ ಹಿಂದೆ ಎಸಿ ಔಟ್ ಪುಟ್ ಒದಗಿಸುತ್ತದೆ. ಆ ಮೂಲಕ ಡಿಸಿ ವೋಲ್ಟೇಜ್ ಅನ್ನು ಪ್ಯಾನಲ್ ಮಟ್ಟಕ್ಕೆ ಮಾತ್ರ ಕಡಿಮೆ ಮಾಡುತ್ತದೆ. ಜಾಗತಿಕವಾಗಿ ಚಾಲ್ತಿಯಲ್ಲಿರುವ ವಿವಿಧ ಇನ್ವರ್ಟರ್ ತಂತ್ರಜ್ಞಾನಗಳಲ್ಲೇ ಇದು ಹೆಚ್ಚಿನ ಸುರಕ್ಷತೆ ಒದಗಿಸುತ್ತದೆ. ಇದು ವಸತಿ ಜಾಗಗಳಲ್ಲಿ ಅಳವಡಿಸಬಹುದಾದ ಉನ್ನತ ಮಟ್ಟದ ಅಗ್ನಿಶಾಮಕ ಸುರಕ್ಷತೆಯನ್ನು ಹೊಂದಿದೆ. ನೆಟ್ ಮೀಟರಿಂಗ್ ಸೋಲಾರ್ ಪಾಲಿಸಿ ಅಡಿಯಲ್ಲಿ ಕೆಇಆರ್‌ಸಿ ಮತ್ತು ಬೆಸ್ಕಾಂ ಮಾರ್ಗಸೂಚಿಗಳ ಪ್ರಕಾರ ಇದನ್ನು ಬೈ ಡೈರೆಕ್ಷನಲ್ ಮೀಟರಿಂಗ್ ಮೂಲಕ ಸ್ಥಳಾಂತರಿಸಲಾಗಿದೆ. ಕರ್ನಾಟಕ ಸರ್ಕಾರ ಮತ್ತು ಬೆಸ್ಕಾಂ ಹಸಿರು ಶಕ್ತಿ ಮತ್ತು ಸೌರಶಕ್ತಿ ಬಳಕೆಯನ್ನು ಉತ್ತೇಜಿಸುವಲ್ಲಿ ಈ ತಂತ್ರಜ್ಞಾನ ಮುಂಚೂಣಿಯಲ್ಲಿದೆ.

Recommended Video

ಕನ್ನಡಿಗ Robin Uthappa ಪಂದ್ಯ ಮುಗಿದಾದ ನಂತರ ಹೇಳಿದ್ದೇನು | Oneindia Kannada
ಇಂಧನ ಉಳಿತಾಯ, ನವೀಕರಿಸುವ ಇಂಧನ ಉತ್ಪಾದನೆ ಕಲ್ಪನೆ

ಇಂಧನ ಉಳಿತಾಯ, ನವೀಕರಿಸುವ ಇಂಧನ ಉತ್ಪಾದನೆ ಕಲ್ಪನೆ

ಬೃಹತ್ ಹಸಿರು ಶಕ್ತಿ ಉಪಕ್ರಮ ವಿದ್ಯುತ್ ಬಿಲ್ ಉಳಿತಾಯದ ಜೊತೆಗೆ ಮುಂದಿನ ಪೀಳಿಗೆಯ ಮಕ್ಕಳ ಭವಿಷ್ಯವನ್ನು ರಕ್ಷಿಸಲು ಸಹಕಾರಿಯಾಗಿದೆ. ಇದು ಪರೋಕ್ಷವಾಗಿ "ಇಂಧನ ಉಳಿತಾಯ, ನವೀಕರಿಸಬಹುದಾದ ಇಂಧನ ಉತ್ಪಾದನೆ" ಪರಿಕಲ್ಪನೆಯನ್ನು ಜಾರಿಗೆ ತಂದಿದೆ. ಆ ಮೂಲಕ ಉಳಿತಾಯದ ಶಕ್ತಿಯ ಉದ್ಯಮದ ಅಗತ್ಯವಿರುವ ಇತರ ಪ್ರದೇಶಗಳಲ್ಲಿ ಅಥವಾ ರೈತರು ಹಾಗೂ ಇತರ ವಸತಿ ನಿವಾಸಗಳಲ್ಲಿ ಇಂಧನ ಉತ್ಪಾದನೆ ಬಳಸಲು ಅನುವು ಮಾಡಿಕೊಡುತ್ತದೆ.
ಭಾರತ ಮತ್ತು ಅದರ ಸೌರಶಕ್ತಿ ಅವಕಾಶಗಳು ಸಂಪೂರ್ಣ ತಾಂತ್ರಿಕ ಸಾಮರ್ಥ್ಯ, ವಿಶ್ವಾಸಾರ್ಹತೆ ಹೊಂದಿವೆ. ಅನನ್ಯ ಸೌರವಿನ್ಯಾಸ, ಅತ್ಯುತ್ತಮ ಎಂಜಿನಿಯರಿಂಗ್ ಕೌಶಲ್ಯ ಮತ್ತು ಪರಿಪೂರ್ಣ ತರಬೇತಿ ಪಡೆದ ಮಾನವ ಸಂಪನ್ಮೂಲ ವಿಶ್ವದಲ್ಲೇ ಅತ್ಯುತ್ತಮವಾದ ಸೋಲಾರ್ ಪರಿಹಾರಗಳನ್ನು ಒದಗಿಸಲು ಮತ್ತು ದೀರ್ಘಾವಧಿಯ ಬಳಕೆಗೆ ಸ್ಪರ್ಧಿಸಲು ಸಮರ್ಥವಾಗಿದೆ. ಎಸ್ಕಾಂನ ಎಲ್ಲಾ ಗ್ರಾಹಕರಿಗೆ ಗ್ರಿಡ್ ಪವರ್ ಬಳಸಿ ವರ್ಷದಲ್ಲಿ ಕನಿಷ್ಠ 300 ದಿನಗಳವರೆಗೆ ಸೌರ ವಿದ್ಯುತ್ ಮೂಲಕ ತಮ್ಮ ದಿನದ ವಿದ್ಯುತ್ ಬಳಕೆಯಲ್ಲಿ ಭಾರೀ ಉಳಿತಾಯ ಗಳಿಸಿ ಮತ್ತು ಪ್ರಯೋಜನ ಪಡೆದುಕೊಳ್ಳುವ ಅವಕಾಶವಿದೆ.
ಇನ್ನು ಡೀಸೆಲ್ ಜನರೇಟರ್‌ಗಳನ್ನು ಬಳಸುವ ಗ್ರಾಹಕರು ಸಹ ಸೌರಶಕ್ತಿ ಅಳವಡಿಸಿಕೊಂಡು ಉಳಿತಾಯದ ಜೊತೆ ಹೆಚ್ಚು ಲಾಭ ಪಡೆದುಕೊಳ್ಳಬಹುದು. ಈಗಾಗಲೆ ಅಸ್ತಿತ್ವದಲ್ಲಿರುವ ಗ್ರಿಡ್ ಅಥವಾ ಡೀಸೆಲ್ ಜೆನ್‌ಸೆಟ್‌ಗಳೊಂದಿಗೆ ಸೌರಶಕ್ತಿ ಸಂಯೋಜನೆಯ ಸಿಂಕ್ರೊನೈಸೇಷನ್‌ ನಿಂದ ಕನಿಷ್ಠ 0.99 ಪ್ಲಸ್ ಅಧಿಕ ವಿದ್ಯುತ್ ಉಳಿಸಲು ಸಾಧ್ಯವಿದೆ.

English summary
Bengaluru's First Largescale Solar Power Plant inaugurated on apartment top by Minister Ashwath Narayana.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X