ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊವಿಡ್ ಮರಣ ದರ‌: ಮಹಾರಾಷ್ಟ್ರ, ದೆಹಲಿಗಿಂತ ರಾಜ್ಯವೇ ಉತ್ತಮ

|
Google Oneindia Kannada News

ಬೆಂಗಳೂರು, ಆಗಸ್ಟ್ 4: ಬೇರೆ ರಾಜ್ಯಗಳಿಗೆ ಅದರಲ್ಲೂ ಮೆಟ್ರೋ ಸಿಟಿಗಳಿಗೆ ಹೋಲಿಸಿದರೆ ಕರ್ನಾಟಕ ಹಾಗೂ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್ ಮರಣ‌ ದರ‌ ಕಡಿಮೆಯಾಗಿದೆ. ಇದು ಸಮಾಧಾನಕರ ವಿಚಾರ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು. 10 ಲಕ್ಷ ಜನಸಂಖ್ಯೆಗೆ ರಾಜ್ಯದಲ್ಲಿ 39 ಮತ್ತು ಬೆಂಗಳೂರಿನಲ್ಲಿ 115 ಕೋವಿಡ್ ಮರಣ‌ ದರವಿದೆ.

Recommended Video

Bengaluru Commissioner Kamal Pant Quarantine | Oneindia Kannada

"ಕರ್ನಾಟಕದಲ್ಲಿ ಕೋವಿಡ್ ಮರಣ ಪ್ರಮಾಣ ಇತರೆ ರಾಜ್ಯಗಳಿಗಿಂತ ಸಮಾಧಾನಕರವಾಗಿದೆ. ಪ್ರತಿ 10 ಲಕ್ಷ ಜನಸಂಖ್ಯೆಗೆ ಕೋವಿಡ್ ನಿಂದ ಮರಣ ಹೊಂದುತ್ತಿರುವವವರ ಸಂಖ್ಯೆ ಕರ್ನಾಟಕಕ್ಕಿಂತ ದೆಹಲಿಯಲ್ಲಿ 5 ಪಟ್ಟು ಮತ್ತು ಮಹಾರಾಷ್ಟ್ರದಲ್ಲಿ 3 ಪಟ್ಟು ಹೆಚ್ಚಿದೆ. ಬೆಂಗಳೂರಿನಲ್ಲಿ ಮರಣ ಪ್ರಮಾಣವು ಇತರೆ ಮಹಾನಗರಗಳಿಗಿಂತ ಕಡಿಮೆ ಇದೆ," ಎಂದು ಅವರು ತಿಳಿಸಿದ್ದಾರೆ.

Bengalurus Covid mortality per million population lowest among metros: Sudhakar

 ರಾಜ್ಯದಲ್ಲಿ ಗುಣಮುಖರಾಗುವವರ ಪ್ರಮಾಣದಲ್ಲಿ ಶೇ.5 ರಷ್ಟು ಏರಿಕೆ: ಸುಧಾಕರ್ ರಾಜ್ಯದಲ್ಲಿ ಗುಣಮುಖರಾಗುವವರ ಪ್ರಮಾಣದಲ್ಲಿ ಶೇ.5 ರಷ್ಟು ಏರಿಕೆ: ಸುಧಾಕರ್

ಅಧಿಕಾರಿಗಳಿಗೆ ಎಚ್ಚರಿಕೆ
ಆಸ್ಪತ್ರೆಗಳಲ್ಲಿ ರೋಗಿಗಳ ವಿಚಾರದಲ್ಲಿ ‌ನಿರ್ಲಕ್ಷ್ಯ ವಹಿಸುವ ವೈದ್ಯಾಧಿಕಾರಿಗಳ ವಿರುದ್ಧ ‌ಕ್ರಮ ಜರುಗಿಸುವುದಾಗಿ ಸಚಿವ ಡಾ.ಕೆ.ಸುಧಾಕರ್‌ ಎಚ್ಚರಿಕೆ‌ ನೀಡಿದ್ದಾರೆ.

ಇನ್ಫೋಸಿಸ್ ನೆರವಿನ ಬ್ರಾಡ್ ವೇ ಆಸ್ಪತ್ರೆ ಶೀಘ್ರ ಕಾರ್ಯಾರಂಭಇನ್ಫೋಸಿಸ್ ನೆರವಿನ ಬ್ರಾಡ್ ವೇ ಆಸ್ಪತ್ರೆ ಶೀಘ್ರ ಕಾರ್ಯಾರಂಭ

ಬೆಂಗಳೂರಿನ ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ‌ಮೃತದೇಹವನ್ನು ತೆಗೆದುಕೊಂಡು ಹೋಗಲು ವಿಳಂಬ ಮಾಡಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾಗುವಂತೆ ಸಚಿವರು ಅಧಿಕಾರಿಗಳಿಗೆ ಸೂಚನೆ‌ ನೀಡಿದರು.

"ಕೆ.ಸಿ.ಜನರಲ್ ಆಸ್ಪತ್ರೆಯಲ್ಲಿ ಮೃತದೇಹ ತೆರವುಗೊಳಿಸಲು ವಿಳಂಬ ಮಾಡಿರುವ ಘಟನೆ ನನ್ನ ಗಮನಕ್ಕೆ ಬಂದಿದೆ. ಇದನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಈ ರೀತಿ ನಿರ್ಲಕ್ಷ್ಯ ತೋರುವ ವೈದ್ಯಾಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು", ಎಂದು ಅವರು ಎಚ್ಚರಿಸಿದ್ದಾರೆ.

English summary
Bengaluru also records lowest mortality rate compared to other metros i.e 115 deaths said Medical Education Minister Dr.K.Sudhakar.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X