ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಹೇಳ್ತಿದೆ ಬೆಂಗಳೂರಿನ 74 ರಸ್ತೆಗಳಲ್ಲಿ ಗುಂಡಿಗಳೇ ಇಲ್ಲವಂತೆ!

|
Google Oneindia Kannada News

ಬೆಂಗಳೂರು, ಮಾರ್ಚ್ 06: ನಗರದ 74 ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ ಎಂದು ಬಿಬಿಎಂಪಿ ಕರ್ನಾಟಕ ಹೈಕೋರ್ಟ್‌ಗೆ ಮಾಹಿತಿ ನೀಡಿದೆ. ರಸ್ತೆಗುಂಡಿ ತಪ್ಪಿಸಲು ಹೋಗಿ 19 ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ಸಾವಿನ ಬಳಿಕ ಹೈಕೋರ್ಟ್ ಈ ರಸ್ತೆಗುಂಡಿಗಳ ವಿಚಾರವನ್ನು ತುಂಬಾ ಗಂಭೀರವಾಗಿ ತೆಗೆದುಕೊಂಡಿತ್ತು.

ನಗರದಲ್ಲಿರುವ ರಸ್ತೆಗುಂಡಿಗಳ ಸಮೀಕ್ಷೆ ಮಾಡಿ ವರದಿ ನೀಡುವಂತೆ ಬಿಬಿಎಂಪಿ ತಿಳಿಸಿತ್ತು, ಹಾಗೆಯೇ ಹೈಕೋರ್ಟ್ ತಂಡವನ್ನೂ ರಚಿಸಿತ್ತು.

ರಸ್ತೆಗುಂಡಿ ದುರಸ್ತಿ: ಮತ್ತೊಂದು ಡೆಡ್‌ಲೈನ್ ಮಿಸ್‌ ಮಾಡಿದ ಬಿಬಿಎಂಪಿರಸ್ತೆಗುಂಡಿ ದುರಸ್ತಿ: ಮತ್ತೊಂದು ಡೆಡ್‌ಲೈನ್ ಮಿಸ್‌ ಮಾಡಿದ ಬಿಬಿಎಂಪಿ

ಸಮೀಕ್ಷೆಯಲ್ಲಿ 5435 ಮಂದಿ ನಾಗರಿಕರಿಂದ ಮಾಹಿತಿಗಳು ಬಂದಿವೆ, ಕೆಟ್ಟ ರಸ್ತೆಗಳು ಇವೆ ಎಂಬುದು ತಿಳಿದುಬಂದಿದೆ. ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಕೆಲವು ವಿಚಾರಗಳು ಬಹಿರಂಗಗೊಂಡಿವೆ.

Bengaluru’s BBMP Said No Potholes On 74 Roads

ನಗರದಲ್ಲಿ ನಡೆಸಲಾದ ಸಮೀಕ್ಷೆಗಳಿಂದ ನಗರದಲ್ಲಿರುವ ಕೆಟ್ಟ ರಸ್ತೆಗಳು, ಫೂಟ್‌ಪಾತ್‌ಗಳು ಹಾಗೂ ಗುಂಡಿಗಳು ಎದ್ದು ಕಾಣುತ್ತವೆ. 2020ರ ಫೆಬ್ರವರಿಯಲ್ಲಿ ಕರ್ನಾಟಕ ಹೈಕೋರ್ಟ್ ಸ್ವಯಂಸೇವಕರನ್ನು ಬಳಸಿಕೊಂಡು ಸಮೀಕ್ಷೆ ನಡೆಸುವಂತೆ ಕೆಎಸ್‌ಎಲ್‌ಎಸ್‌ಎಗೆ ನಿರ್ದೇಶನ ನೀಡಲಾಗಿತ್ತು.

ಕೆಎಸ್‌ಎಲ್‌ಎಸ್‌ಎ ಸಾರ್ವಜನಿಕರಿಗೆ ರಸ್ತೆಗುಂಡಿಗಳ ಫೋಟೊಗಳನ್ನು ಕಳುಹಿಸಿಕೊಡುವಂತೆ ಮನವಿ ಮಾಡಿತ್ತು. ಬಳಿಕ ಇದೀಗ ಬಿಬಿಎಂಪಿಯು ನಗರದ 74 ರಸ್ತೆಗಳಲ್ಲಿ ಗುಂಡಿಗಳೇ ಇಲ್ಲ ಎಂದು ಹೇಳಿಕೆ ನೀಡಿದೆ. ಈಗ ಕೆಎಸ್‌ಎಲ್‌ಎಸ್‌ಎ 74 ರಸ್ತೆಗಳಲ್ಲಿ ಪರಿಶೀಲನೆಗಾಗಿ 24 ರಸ್ತೆಗಳನ್ನು ಆಯ್ಕೆ ಮಾಡಿಕೊಂಡಿದೆ.

ಕೆಟ್ಟ ರಸ್ತೆಗಳ ಕುರಿತು 5435 ಅರ್ಜಿಗಳು ಬಂದಿವೆ, 4998 ಪ್ರಕರಣಗಳು ಪಾದಚಾರಿ ಮಾರ್ಗಗಳ ಕುರಿತಾಗಿದೆ. 1443 ಹದಗೆಟ್ಟ ಫೂಟ್‌ಪಾತ್‌ಗಳಾಗಿವೆ, 3531 ಫೂಟ್‌ಬಾತ್ ಅತಿಕ್ರಮಣವಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
A crackdown by the Karnataka high court following the death of a 19-year-old medical student, and hearings of Public Interest Litigations (PILs) have revealed that there are at least 5,435 potholes, bad roads or bad footpaths in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X