ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಗ್ರಾ.ಪಂ.ಚುನಾವಣೆ: ಬಿಜೆಪಿ ಅಬ್ಬರಕ್ಕೆ ಜೆಡಿಎಸ್, ಕಾಂಗ್ರೆಸ್ ಧೂಳೀಪಟ

|
Google Oneindia Kannada News

ಗ್ರಾಮ ಪಂಚಾಯಿತಿ ಚುನಾವಣೆ ಯಾವುದೇ ಪಕ್ಷದ ಚಿಹ್ನೆಯಡಿಯಲ್ಲಿ ನಡೆಯುವಂತದ್ದಲ್ಲ. ಆದರೆ, ನೇರವಾಗಿ ಇಲ್ಲದಿದ್ದರೂ, ಪರೋಕ್ಷವಾಗಿ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತರು ಕಣದಲ್ಲಿರುತ್ತಾರೆ. "ಒಟ್ಟಾರೆಯಾಗಿ ಶೇ.60ರಷ್ಟು ನಮ್ಮ ಬೆಂಬಲಿತರು ಗೆದ್ದಿದ್ದಾರೆ" ಎಂದು ಸಿಎಂ ಯಡಿಯೂರಪ್ಪ ಈಗಾಗಲೇ ಹೇಳಿದ್ದಾಗಿದೆ.

ಇನ್ನು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, "ಇನ್ನೂ ಹಲವು ಜಿಲ್ಲೆಗಳಲ್ಲಿ ಮತ ಎಣಿಕೆ ಕಾರ್ಯ ಪೂರ್ಣಗೊಂಡು ಫಲಿತಾಂಶ ಹೊರಬಂದಿಲ್ಲ. ನನಗಿರುವ ಮಾಹಿತಿ ಪ್ರಕಾರ ಗೆದ್ದ ಹೆಚ್ಚಿನ ಸಂಖ್ಯೆಯ ಪಂಚಾಯತಿ ಸದಸ್ಯರು ಕಾಂಗ್ರೆಸ್ ಕಾರ್ಯಕರ್ತರಾಗಿದ್ದಾರೆ" ಎಂದು ಹೇಳಿದ್ದಾರೆ.

ರಾಮನಗರದಲ್ಲಿ ಬಿಜೆಪಿ ಶೂನ್ಯದಿಂದ ಮೂರಂಕಿಗೆ: ಆದರೂ ಜಿಲ್ಲೆಯಲ್ಲಿ ಪಕ್ಷದ ಗುಂಪುಗಾರಿಕೆ, ಆತ್ಮಾವಲೋಕನ ಯಾವಾಗ? ರಾಮನಗರದಲ್ಲಿ ಬಿಜೆಪಿ ಶೂನ್ಯದಿಂದ ಮೂರಂಕಿಗೆ: ಆದರೂ ಜಿಲ್ಲೆಯಲ್ಲಿ ಪಕ್ಷದ ಗುಂಪುಗಾರಿಕೆ, ಆತ್ಮಾವಲೋಕನ ಯಾವಾಗ?

"ಚುನಾವಣೆಯಲ್ಲಿ ಈ ಹಂತದ ಸಾಧನೆ ಮಾಡಲು ನೆರವಾದವರು ಪಕ್ಷದ ತಳಮಟ್ಟದ ಕಾರ್ಯಕರ್ತರು. ರಾಜಕೀಯದ ಪ್ರತಿಕೂಲ ಪರಿಸ್ಥಿತಿಯ ನಡುವೆಯೂ ಕಾರ್ಯಕರ್ತರು ಕೆಚ್ಚೆದೆಯ ಹೋರಾಟ ತೋರಿದ್ದರ ಫಲವಾಗಿಯೇ ನಮ್ಮ ಅಭ್ಯರ್ಥಿಗಳು ಚುನಾವಣೆಯಲ್ಲಿ ಜಯಿಸಿದ್ದಾರೆ. ರಾಷ್ಟ್ರೀಯ ಪಕ್ಷಗಳ ಹಣ, ಅಧಿಕಾರದ ಹೊರತಾಗಿಯೂ ಪ್ರಾದೇಶಿಕ ಪಕ್ಷ ಜೆಡಿಎಸ್‌ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗಮನಾರ್ಹ ಸಾಧನೆಯನ್ನೇ ಮಾಡಿದೆ"ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ರಾಜಕೀಯ ದ್ವೇಷಕ್ಕೆ ಹೋಟೆಲ್‌ಗೆ ಬಿತ್ತು ಬೆಂಕಿ: ಹಳ್ಳಿಗಳಲ್ಲಿ ಹೊತ್ತಿದೆ ವೈಷ್ಯಮದ ಕಿಡಿ ರಾಜಕೀಯ ದ್ವೇಷಕ್ಕೆ ಹೋಟೆಲ್‌ಗೆ ಬಿತ್ತು ಬೆಂಕಿ: ಹಳ್ಳಿಗಳಲ್ಲಿ ಹೊತ್ತಿದೆ ವೈಷ್ಯಮದ ಕಿಡಿ

ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷದ ಬೆಂಬಲಿತರು ಹೆಚ್ಚು ಜಯ ಸಾಧಿಸಿದ್ದಾರೆ ಎನ್ನುವುದನ್ನು ನೋಡಿದಾಗ, ಬಿಜೆಪಿ ಅಭೂತಪೂರ್ವ ಜಯವನ್ನು ಸಾಧಿಸುವಲ್ಲಿ ಯಶಸ್ವಿಯಾಗಿದೆ. ಗ್ರಾಮಾಂತರ ವ್ಯಾಪ್ತಿಯ ನಾಲ್ಕು ವಿಭಾಗದಲ್ಲಿ ಪಕ್ಷಗಳ ಬಲಾಬಲ ಹೀಗಿದೆ:

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ

ಬೆಂಗಳೂರು ದಕ್ಷಿಣ (ಯಶವಂತಪುರ) ವ್ಯಾಪ್ತಿಯಲ್ಲಿ ಒಟ್ಟು 15 ಗ್ರಾಮ ಪಂಚಾಯಿತಿಗಳಿವೆ. ಇದರ ಒಟ್ಟಾರೆ ಸದಸ್ಯ ಬಲ 353. ಇಲ್ಲಿ ಪಕ್ಷಗಳ ಬೆಂಬಲಿತರು ಗೆದ್ದ ಸಂಖ್ಯೆ ಹೀಗಿದೆ:
ಒಟ್ಟು ಸ್ಥಾನಗಳು: 353
ಬಿಜೆಪಿ: 281
ಕಾಂಗ್ರೆಸ್: 28
ಜೆಡಿಎಸ್: 44
ಇತರರು: 00

ಯಲಹಂಕ/ ಬೆಂಗಳೂರು ಉತ್ತರ ತಾಲೂಕು

ಯಲಹಂಕ/ ಬೆಂಗಳೂರು ಉತ್ತರ ತಾಲೂಕು

ಯಲಹಂಕ/ ಬೆಂಗಳೂರು ಉತ್ತರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 22 ಗ್ರಾಮ ಪಂಚಾಯಿತಿಗಳಿವೆ. ಇದರ ಒಟ್ಟಾರೆ ಸದಸ್ಯ ಬಲ 466. ಇಲ್ಲಿ ಪಕ್ಷಗಳ ಬೆಂಬಲಿತರು ಗೆದ್ದ ಸಂಖ್ಯೆ ಹೀಗಿದೆ:
ಒಟ್ಟು ಸ್ಥಾನಗಳು: 466
ಬಿಜೆಪಿ: 295
ಕಾಂಗ್ರೆಸ್: 118
ಜೆಡಿಎಸ್: 25
ಇತರರು: 28

ಆನೇಕಲ್

ಆನೇಕಲ್

ಆನೇಕಲ್ ವ್ಯಾಪ್ತಿಯಲ್ಲಿ ಒಟ್ಟು 28 ಗ್ರಾಮ ಪಂಚಾಯಿತಿಗಳಿವೆ. ಇದರ ಒಟ್ಟಾರೆ ಸದಸ್ಯ ಬಲ 761. ಇಲ್ಲಿ ಪಕ್ಷಗಳ ಬೆಂಬಲಿತರು ಗೆದ್ದ ಸಂಖ್ಯೆ ಹೀಗಿದೆ:
ಒಟ್ಟು ಸ್ಥಾನಗಳು: 761
ಬಿಜೆಪಿ: 389
ಕಾಂಗ್ರೆಸ್: 318
ಜೆಡಿಎಸ್: 05
ಇತರರು: 49

ಬೆಂಗಳೂರು ಪೂರ್ವ

ಬೆಂಗಳೂರು ಪೂರ್ವ

ಬೆಂಗಳೂರು ಪೂರ್ವ ವ್ಯಾಪ್ತಿಯಲ್ಲಿ ಒಟ್ಟು 11 ಗ್ರಾಮ ಪಂಚಾಯಿತಿಗಳಿವೆ. ಇದರ ಒಟ್ಟಾರೆ ಸದಸ್ಯ ಬಲ 262. ಇಲ್ಲಿ ಪಕ್ಷಗಳ ಬೆಂಬಲಿತರು ಗೆದ್ದ ಸಂಖ್ಯೆ ಹೀಗಿದೆ:
ಒಟ್ಟು ಸ್ಥಾನಗಳು: 262
ಬಿಜೆಪಿ: 161
ಕಾಂಗ್ರೆಸ್: 88
ಜೆಡಿಎಸ್: 00
ಇತರರು: 13

Recommended Video

ಸಿದ್ದು ಪದೇಪದೆ BSY ಬಗ್ಗೆ ಯಾಕೆ ಹೀಗೆ ಹೇಳುತ್ತಿದ್ದಾರೆ? | Oneindia Kannada

English summary
Bengaluru Rural Limit Gram Panchayat Result: Which Party Supporters Won How Many Seats,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X