• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಕ್ಕಳ ಅಶ್ಲೀಲ ವಿಡಿಯೋ ಪೋಸ್ಟ್ ಮಾಡುತ್ತಿದ್ದ ರೌಡಿ ಶೀಟರ್ ಬಂಧನ

|

ಬೆಂಗಳೂರು, ಜುಲೈ 25: ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ 24 ವರ್ಷದ ರೌಡಿ ಶೀಟರ್‌ನನ್ನು ಸಿಸಿಬಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

      ಭಾರತದಲ್ಲಿ ಚೀನಾ ವ್ಯವಹಾರ ಇನ್ನು ಮುಂದೆ ಸುಲಭವಲ್ಲ | Oneindia Kannada

      ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

      ಬಂಧಿತ ವ್ಯಕ್ತಿಯನ್ನು ಚಾಮರಾಜಪೇಟೆಯ ಮಂಜುನಾಥ್ ಎಂದು ಗುರುತಿಸಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಟ್ವೀಟ್ ಮಾಡಿದ್ದಾರೆ.

      ಅನುಮತಿ ಪಡೆಯದೆ ಪುರಾತನ ಮೂರ್ತಿ ಇಟ್ಟುಕೊಂಡ ಆರೋಪ: ಕಲಾವಿದೆ ಬಂಧನ

      2014ರಿಂದ ರೌಡಿ ಶೀಟರ್ ಮಂಜುನಾಥ್ ಮೇಲೆ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನ, ವಂಚನ ಪ್ರಕರಣ ಸೇರಿದಂತೆ ಸುಮಾರು ಏಂಟು ಕೇಸ್ ದಾಖಲಾಗಿದೆ. ಈತ ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋ ಸಹ ಪೋಸ್ಟ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ ಎಂದು ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

      ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

      ರಾಷ್ಟ್ರೀಯ ಅಪರಾಧ ದಾಖಲೆಗಳ ಇಲಾಖೆಯ (ಎನ್‌ಸಿಆರ್‌ಬಿ) ಸೈಬರ್ ಟಿಪ್‌ಲೈನ್ ಸಹಾಯದ ಮೂಲಕ ಆರೋಪಿ ಮಂಜುನಾಥ್ ಫೇಸ್‌ಬುಕ್‌ನಲ್ಲಿ ಮಕ್ಕಳ ಅಶ್ಲೀಲ ವಿಡಿಯೋಗಳ ಅಪ್‌ಲೌಡ್‌ ಮಾಡುತ್ತಿದ್ದ ಬಗ್ಗೆ ಬೆಂಗಳೂರು ಕೇಂದ್ರ ಅಪರಾಧ ವಿಭಾಗದ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಈ ಮಾಹಿತಿ ಅನ್ವಯ ಆತನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

      ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

      ಇದೀಗ, ಬೆಂಗಳೂರು ಪೊಲೀಸರು ಮಂಜುನಾಥ್ ವಿರುದ್ಧ ಐಟಿ ಕಾಯ್ದೆಯಡಿ ಬೆಂಗಳೂರಿನ ಬಸವೇಶ್ವರ ನಗರದಲ್ಲಿರುವ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

      English summary
      Rowdy sheeter arrest by bengaluru police for uploading child pornography videos on Facebook.
      ತಾಜಾ ಸುದ್ದಿ ತಕ್ಷಣ ಪಡೆಯಿರಿ
      Enable
      x
      Notification Settings X
      Time Settings
      Done
      Clear Notification X
      Do you want to clear all the notifications from your inbox?
      Settings X