ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿಜೆ ಹಳ್ಳಿ ಗಲಭೆ ಪ್ರಕರಣ: ಮೂರು ಎಸ್‌ಡಿಪಿಐ ಕಚೇರಿಗಳ ಮೇಲೆ ಸಿಸಿಬಿ ದಾಳಿ

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 1: ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಯಲ್ಲಿ ಕಳೆದ ತಿಂಗಳು ನಡೆದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೇಂದ್ರ ಅಪರಾಧ ದಳದ ಪೊಲೀಸರು ಎಸ್‌ಡಿಪಿಐನ ಮೂರು ಕಚೇರಿಗಳ ಮೇಲೆ ಮಂಗಳವಾರ ದಾಳಿ ನಡೆಸಿದ್ದಾರೆ.

Recommended Video

CSK ಮಾಲೀಕನಿಗೆ ದೊಡ್ಡ ಭರವಸೆ ಕೊಟ್ಟ Dhoni | Oneindia Kannada

ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದಿದ್ದ ಸಿಸಿಬಿ ಪೊಲೀಸರು, ಡಿ.ಜೆ. ಹಳ್ಳಿ, ಕೆಜಿ ಹಳ್ಳಿ ಮತ್ತು ಹಲಸೂರು ಗೇಟ್‌ನಲ್ಲಿರುವ ಎಸ್‌ಡಿಪಿಐ ಪಕ್ಷದ ಕಚೇರಿಗಳ ಮೇಲೆ ದಾಳಿ ಮಾಡಿ ಪರಿಶೀಲನೆ ನಡೆಸಿದರು. ಕಚೇರಿ ದಾಳಿ ಸಂದರ್ಭದಲ್ಲಿ ಹಲವು ದಾಖಲೆ ಪತ್ರಗಳನ್ನು ಪರಿಶೀಲನೆ ಮಾಡಲಾಗಿದೆ ಎಂದು ಸಿಸಿಬಿ ಪೊಲೀಸ್ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.

ಬೆಂಗಳೂರು ಗಲಭೆ: ಬಂಧಿತ ವಾಜೀದ್ ಪಾಷಾಗೂ ನಮಗೂ ಸಂಬಂಧವೇ ಇಲ್ಲ ಎಂದ ಜೆಡಿಎಸ್ಬೆಂಗಳೂರು ಗಲಭೆ: ಬಂಧಿತ ವಾಜೀದ್ ಪಾಷಾಗೂ ನಮಗೂ ಸಂಬಂಧವೇ ಇಲ್ಲ ಎಂದ ಜೆಡಿಎಸ್

ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದ ಮೂರು ಪ್ರಕರಣಗಳು ಸಿಸಿಬಿಗೆ ವರ್ಗಾವಣೆಯಾಗಿದ್ದವು. ಎಸಿಪಿಗಳ ನೇತೃತ್ವದಲ್ಲಿ ಅವುಗಳ ತನಿಖೆ ನಡೆಯುತ್ತಿದೆ. ತನಿಖೆಯ ಭಾಗವಾಗಿ ಎಸ್‌ಡಿಪಿಐನ ಮೂರು ಕಚೇರಿಗಳ ಮೇಲೆ ದಾಳಿ ಮಾಡಲಾಗಿದೆ. ಪರಿಶೀಲನೆ ಮುಂದುವರಿಸಲಾಗಿದೆ. ತನಿಖೆ ಸಾಗುತ್ತಿರುವುದರಿಂದ ಅವುಗಳ ವಿವರಗಳನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

 Bengaluru Riots: CCB Conducting Search On 3 SDPI Offices In DJ Halli, KG Halli & Halasurgate

ಬೆಂಗಳೂರು ಹಿಂಸಾಚಾರಕ್ಕೆ ಬಳಸಿದ ಮಾರಕಾಸ್ತ್ರಗಳು ಜಪ್ತಿ ಬೆಂಗಳೂರು ಹಿಂಸಾಚಾರಕ್ಕೆ ಬಳಸಿದ ಮಾರಕಾಸ್ತ್ರಗಳು ಜಪ್ತಿ

ಹಲಸೂರು ಗೇಟ್‌ನಲ್ಲಿನ ಎಸ್‌ಡಿಪಿಐನ ಮುಖ್ಯ ಕಚೇರಿ ಮೇಲೆ ಸಹ ದಾಳಿ ನಡೆಸಲಾಗಿದೆ. ಎಸಿಪಿ ಜಗನ್ನಾಥ ರೈ ನೇತೃತ್ವದಲ್ಲಿ ಸುಮಾರು 30 ಅಧಿಕಾರಿಗಳ ತಂಡಗಳು ಈ ದಾಳಿಯಲ್ಲಿ ಭಾಗವಹಿಸಿವೆ. ಗಲಭೆಯಲ್ಲಿ ಭಾಗಿಯಾದ ಆರೋಪದಲ್ಲಿ ಎಸ್‌ಡಿಪಿಐ ಕಾರ್ಯದರ್ಶಿ ಸೇರಿದಂತೆ 32 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

English summary
Bengaluru Riots: CCB conducting search on 3 SDPI offices in DJ Halli, KG Halli & Halasurgate.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X