ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಿವೃತ್ತ ಡಿಜಿಪಿ ಇ ಮೇಲ್ ಐಡಿ ಹ್ಯಾಕ್ ಮಾಡಿ ವಂಚನೆ!

|
Google Oneindia Kannada News

ಬೆಂಗಳೂರು, ಫೆಬ್ರವರಿ 28: ಸೈಬರ್ ಕಳ್ಳರ ಕಣ್ಣು ನಿವೃತ್ತ ಪೊಲೀಸ್ ಅಧಿಕಾರಿಗಳ ಮೇಲೆ ಬಿದ್ದಂತಾಗಿದೆ. ನಿವೃತ್ತ ಡಿಜಿ ಅಜಯ್ ಕುಮಾರ್ ಸಿಂಗ್ ಅವರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಹಣ ದೋಚಿದ ಬೆನ್ನಲ್ಲೇ ಇದೀಗ ಮತ್ತೊಬ್ಬ ನಿವೃತ್ತ ಡಿಜಿ, ಐಜಿಪಿ ಶಂಕರ್ ಬಿದರಿ ಅವರ ಇ ಮೇಲ್ ಹ್ಯಾಕ್ ಮಾಡಿ ಅವರ ಆಪ್ತರಿಂದ ಸೈಬರ್ ಕಳ್ಳರು ಎತ್ತುವಳಿ ಮಾಡಿದ್ದಾರೆ.

ಶಂಕರ್ ಬಿದರಿ ಅವರು ಬಳಸುತ್ತಿದ್ದ ಇ ಮೇಲ್ ಐಡಿಯನ್ನು ಹ್ಯಾಕ್ ಮಾಡಿರುವ ಸೈಬರ್ ಕಿರಾತಕರು, ಹಣ ಕಳಿಸುವಂತೆ ಶಂಕರ್ ಬಿದರಿ ಆಪ್ತರಿಗೆ ಇ ಮೇಲ್ ಸಂದೇಶ ರವಾನಿಸಿದ್ದಾರೆ. ಇ ಮೇಲ್ ಜತೆಗೆ ಖಾಸಗಿ ಬ್ಯಾಂಕ್ ಖಾತೆ ಸಂಖ್ಯೆಯನ್ನು ಕಳಿಸಿದ್ದಾರೆ. ತುರ್ತಾಗಿ ಹಣ ಬೇಕಾಗಿದೆ ಎಂದು ಶಂಕರ್ ಬಿದರಿ ಸಂದೇಶ ನೋಡಿದ ಕೂಡಲೇ ಅದನ್ನು ಖಚಿತ ಪಡಿಸಿಕೊಳ್ಳದೇ ಆಪ್ತರೊಬ್ಬರು 25 ಸಾವಿರ ರೂಪಾಯಿ ಕಳಿಸಿದ್ದಾರೆ. ಇದೇ ರೀತಿ ಶಂಕರ್ ಬಿದರಿ ಇ ಮೇಲ್ ಮಾಡಿದ್ದಾರೆ ಎಂದು ಭಾವಸಿ ಅವರ ಆಪ್ತರು ಬ್ಯಾಂಕ್ ಖಾತೆಗೆ ಹಣ ಹಾಕಿದ್ದಾರೆ. ಇದು ಶಂಕರ್ ಬಿದರಿ ಅವರ ಗಮನಕ್ಕೆ ಹೋದ ಕೂಡಲೇ , ಸೈಬರ್ ಕ್ರಿಮಿನಲ್ ಗಳ ಕೃತ್ಯ ಎಂಬುದು ಬೆಳಕಿಗೆ ಬಂದಿದೆ. ಅವರು ಆಗ್ನೇಯ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮೋದಿಯನ್ನು ಬೆಂಬಲಿಸಿ ನಾನು ತಪ್ಪು ಮಾಡಿದೆ: ಶಂಕರ್ ಬಿದರಿಮೋದಿಯನ್ನು ಬೆಂಬಲಿಸಿ ನಾನು ತಪ್ಪು ಮಾಡಿದೆ: ಶಂಕರ್ ಬಿದರಿ

ಇ ಮೇಲ್ ಐಡಿ ಹ್ಯಾಕ್ ಮಾಡಿ ಆಪ್ತ ಸ್ನೇಹಿತರಿಗೆ ಸಂದೇಶ ಕಳಿಸಿ ಹಣ ಎತ್ತುವಳಿ ಮಾಡಿರುವ ಆರೋಪಿಗಳನ್ನು ಪತ್ತೆ ಮಾಡಿ ಕ್ರಮ ಜರುಗಿಸವುಂತೆ ದೂರಿನಲ್ಲಿ ಕೋರಿದ್ದಾರೆ. ಇತ್ತೀಚೆಗೆ ಮತ್ತೊಬ್ಬ ನಿವೃತ್ತ ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಅಜಯ್ ಕುಮಾರ್ ಸಿಂಗ್ ಅವರ ಬ್ಯಾಂಕ್ ಖಾತೆ ಹ್ಯಾಕ್ ಮಾಡಿ ಎರಡು ಲಕ್ಷ ರೂ. ವಂಚನೆ ಮಾಡಿದ್ದರು. ಈ ಕುರಿತು ಅಜಯ್ ಕುಮಾರ್ ಸಿಂಗ್ ಪುಲಿಕೇಶಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನು ಇತ್ತೀಚೆಗೆ ಪೂರ್ವ ವಿಭಾಗದ ಸೈಬರ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿತ್ತು.

bengaluru; Retired DGP Shankar Bidari e-mail id hacked

Recommended Video

ಕೈ ಕೊಟ್ಟ ಕೊರೊನಾ ವ್ಯಾಕ್ಸಿನ್‌ ಪೋರ್ಟಲ್‌..! ಸರ್ಕಾರದ ಅವ್ಯವಸ್ಥೆಗೆ ಹಿರಿಯನಾಗರಿಕರ ಬೇಸರ | Oneindia Kannada

ದಕ್ಷ ಪೊಲೀಸ್ ಅಧಿಕಾರಿಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಸೈಬರ್ ಕಳ್ಳರು, ಅವರ ಫೇಸ್ ಬುಕ್ ಖಾತೆ ಹ್ಯಾಕ್ ಮಾಡಿ ಆಪ್ತರಿಗೆ ಸಂದೇಶ ಕಳಿಸುವುದು, ಇಲ್ಲವೇ, ಅವರ ಖಾತೆಗಳಿಗೆ ನಾನಾ ರೀತಿಯ ಸಂದೇಶ ಕಳಿಹಿಸಿ ಬ್ಯಾಂಕ್ ನಿಂದಲೇ ಹಣ ಎಗರಿಸುವ ಕೃತ್ಯಗಳು ಬೆಂಗಳೂರಿನಲ್ಲಿ ಜಾಸ್ತಿಯಾಗುತ್ತಿವೆ. ಇತ್ತೀಚೆಗೆ ಹಲವು ಇನ್‌ಸ್ಪೆಕ್ಟರ್ ಗಳ ಫೇಸ್ ಬುಕ್ ಖಾತೆಗಳನ್ನು ಹ್ಯಾಕ್ ಮಾಡಿದ್ದ ಸೈಬರ್ ಕಳ್ಳರು, ಅವರ ಆಪ್ತ ಕೂಟಕ್ಕೆ ಗೂಗಲ್ ಪೇ ಮಾಡುವಂತೆ ಸಂದೇಶ ರವಾನಿಸಿದ್ದರು. ಈ ಕುರಿತು ಸರಣಿ ದೂರುಗಳು ದಾಖಲಾಗಿದ್ದವು. ಇದೀಗ ನಿವೃತ್ತ ಪೊಲೀಸ್ ಅಧಿಕಾರಿಗಳ ಸರದಿ ಆರಂಭವಾಗಿದೆ.

English summary
Cyber fraudsters have hacked the e-mail id of retired DG of Karnataka Shankara Bidari, case is registered in bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X