• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಈ ಹೋಟೆಲ್‌ನಲ್ಲಿ 10ರೂ ನಾಣ್ಯಕೊಟ್ಟು, ಶೇ.10ರಷ್ಟು ರಿಯಾಯಿತಿ ಪಡೆಯಿರಿ

|

ಬೆಂಗಳೂರು, ನವೆಂಬರ್ 30: ನೋಟು ಅಮಾನ್ಯೀಕರಣವಾದಾಗಿನಿಂದ ಇಲ್ಲಿಯವರೆಗೆ 2 ಸಾವಿರ ನೋಟು ರದ್ದತಿ, 10 ರೂ ನಾಣ್ಯದ ರದ್ದತಿ ಸೇರಿದಂತೆ ಹಲವು ಊಹಾಪೋಹದ ಮಾತುಗಳು ಕೇಳಿಬಂದಿದ್ದವು.

ಕೇಂದ್ರ ಸರ್ಕಾರ, ಆರ್‌ಬಿಐ ಇದ್ಯಾವುದೇ ವಿಷಯವನ್ನು ಪ್ರಸ್ತಾಪಿಸಿಲ್ಲವಾದರೂ ಜನರ ಬಾಯಿಂದ ಬಾಯಿಗೆ ಈ ಸುದ್ದಿ ಹರಡಿದೆ.

ಹಾಗೆಯೇ 10 ರೂ ನಾಣ್ಯವನ್ನು ರದ್ದುಮಾಡಲಾಗಿದೆ ಜನರು ನಂಬಿದ್ದಾರೆ. ಬಸ್‌ಗಳನ್ನು ಕಂಡೆಕ್ಟರ್ ಜನರ ಬಳಿ 10 ರೂ ನಾಣ್ಯ ಪಡೆಯುತ್ತಿರಲಿಲ್ಲ, ಇನ್ನು ಅಂಗಡಿಗಳು, ಹೋಟೆಲ್‌ಗಳಂತೂ ಕೇಳಬೇಕೆ ಹತ್ತು ರೂಪಾಯಿ ನಾಣ್ಯ ಬ್ಯಾನ್ ಆಗಿದ್ಯಂತೆ ನಾವಂತೂ ತೆಗೆದುಕೊಳ್ಳಲ್ಲ ಬೇರೆ ನೋಟು ಕೊಡಿ ಎಂದು ಕೇಳ್ತಿದ್ರು.

ಆದರೆ ಇದೇ ಮೊದಲ ಬಾರಿಗೆ ಬೆಂಗಳೂರಿನ ಹೋಟೆಲ್ ಒಂದು ಗ್ರಾಹಕರಿಗೆ ಹೊಸ ಆಫರ್ ನೀಡಿದೆ.ಹೋಟೆಲ್ ನಿಸರ್ಗಾ ಗ್ರ್ಯಾಂಡ್ ಹತ್ತು ರೂ ನಾಣ್ಯ ನೀಡಿದರೆ ಊಟದ ಮೇಲೆ ಶೇ.10ರಷ್ಟು ರಿಯಾಯಿತಿಗಳಿಸುವ ಆಫರ್‌ ಘೋಷಿಸಿದೆ.

,ಅಕ್ಟೋಬರ್ 1 ರಿಂದ ಈ ರಿಯಾಯಿತಿ ನೀಡಲಾಗುತ್ತಿದೆ ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಹೋಟೆಲ್ ಪ್ರೊಪ್ರೈಟರ್ ಕೃಷ್ಣರಾಜ್ ತಿಳಿಸಿದ್ದಾರೆ.

ಪ್ರತಿನಿತ್ಯ 2500 ನಾಣ್ಯಗಳು ಹೋಟೆಲ್‌ ಸೇರುತ್ತಿದೆ. ಸಾಕಷ್ಟು ಕಡೆ ಹತ್ತು ರೂ ನಾಣ್ಯವನ್ನು ತೆಗೆದುಕೊಳ್ಳುತ್ತಿಲ್ಲದ ಕಾರಣ ಆರ್‌ಬಿಐ ಹತ್ತು ರೂ ನಾಣ್ಯಗಳ ಮುದ್ರಣವನ್ನು ಕಡಿಮೆ ಮಾಡಿದೆ.

   ಬೆಳಗಾವಿ ಮುಖಂಡರಿಗೆ ಮುಖಭಂಗ !! | Lakshmi hebbalkar | Oneindia Kannada

   ಗ್ರಾಹಕರೊಬ್ಬರು ಬರೋಬ್ಬರಿ 75 ನಾಣ್ಯಗಳನ್ನು ನೀಡಿದ್ದರು. ಹೋಟೆಲ್‌ ನಿರ್ಧಾರಕ್ಕೆ ಬಿಬಿಎಂಪಿ, ಸಂಸದ ತೇಜಸ್ವಿ ಸೂರ್ಯ ಕೂಡ ಶ್ಲಾಘಿಸಿದ್ದಾರೆ ಸಲ್ಲಿಸಿದ್ದಾರೆ ಎಂದು ರಾಜ್ ತಿಳಿಸಿದ್ದಾರೆ. ನಿಸರ್ಗ ಗ್ರ್ಯಾಂಡ್ ಹೋಟೆಲ್ ನೃಪತುಂಗ ರಸ್ತೆಯಲ್ಲಿರು ವೈಎಂಸಿಎ ಗ್ರೌಂಡ್‌ನಲ್ಲಿದೆ.

   English summary
   Amid continuing reluctance by to accept Rs 10 not withstanding assertions by that they are legal tender, a restaurant Nisarga Grand on Nrupathunga Road has launched a campaign to encourage their use.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X