ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜಗತ್ತಿನ ಡೈನಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರು ನಂಬರ್ ಒನ್

|
Google Oneindia Kannada News

ಬೆಂಗಳೂರು, ಜನವರಿ 8: ಜಾಗತಿಕ ಶ್ರೇಯಾಂಕದ ಟಾಪ್ ಇಪ್ಪತ್ತು ಡೈನಮಿಕ್ ನಗರಗಳ ಪಟ್ಟಿಯಲ್ಲಿ ಬೆಂಗಳೂರಿಗೆ ಮೊದಲ ಸ್ಥಾನ ಲಭಿಸಿದೆ. ಈ ಬಾರಿ ಹೈದರಾಬಾದ್ ಗೆ ಕೂಡ ಸ್ಥಾನ ದೊರೆತಿದೆ. ವಿಶ್ವ ಆರ್ಥಿಕ ಒಕ್ಕೂಟ ಬಿಡುಗಡೆ ಮಾಡಿದ ವರದಿಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ. ಡಬ್ಲ್ಯುಇಎಫ್ ವಾರ್ಷಿಕ ಸಭೆಯಲ್ಲಿ ಹೈದರಾಬಾದ್ ಗೆ ಎರಡನೇ ಸ್ಥಾನ ದೊರೆತಿದೆ.

ಅಲ್ಪಾವಧಿಯಲ್ಲಿ ಅಭಿವೃದ್ಧಿ ಕಂಡ ವಿಭಾಗದಲ್ಲಿ ಇನ್ನೂ ಬಿಡುಗಡೆ ಆಗಬೇಕಾದ ಜೆಎಲ್ ಎಲ್ ಸಿಟಿ ಮುಮೆಂಟಮ್ ಸೂಚ್ಯಂಕ (ಸಿಎಂಐ)- 2019ರಲ್ಲಿ ಹೈದರಾಬಾದ್ ಸ್ಥಾನ ಪಡೆದಿದೆ. ಜೆಎಲ್ ಎಲ್ ಸಿಎಂಐ- 2019ರ ಶ್ರೇಯಾಂಕ ಪಟ್ಟಿಯಲ್ಲಿ ಜಗತ್ತಿನಾದ್ಯಂತ ಇರುವ, ಬಹಳ ವೇಗವಾಗಿ ಬೆಳೆಯುತ್ತಿರುವ 131 ಪ್ರಮುಖ ವಾಣಿಜ್ಯ ನಗರಗಳ ಪಟ್ಟಿ ಮಾಡಿಕೊಳ್ಳಲಾಗಿತ್ತು. ಅದೂ ಅಲ್ಪಾವಧಿಯಲ್ಲೇ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿ ಹೈದರಾಬಾದ್ ಗೆ ಎರಡನೇ ಸ್ಥಾನ ಲಭಿಸಿದೆ.

ಸಾಫ್ಟ್‌ವೇರ್ ಹಿಂದಿಕ್ಕಿದ ಹಾರ್ಡ್‌ವೇರ್‌ಗೆ ಹೆಚ್ಚು ಸಂಬಳ: ಬೆಂಗಳೂರೇ ಅಗ್ರಗಣ್ಯಸಾಫ್ಟ್‌ವೇರ್ ಹಿಂದಿಕ್ಕಿದ ಹಾರ್ಡ್‌ವೇರ್‌ಗೆ ಹೆಚ್ಚು ಸಂಬಳ: ಬೆಂಗಳೂರೇ ಅಗ್ರಗಣ್ಯ

ಸಮಾಜೋ ಆರ್ಥಿಕ, ವಾಣಿಜ್ಯ ರಿಯಲ್ ಎಸ್ಟೇಟ್ ಸೂಚ್ಯಂಕಗಳನ್ನು ಅಲ್ಪಾವಧಿ ಯಶಸ್ಸಿನ ಮಾನದಂಡವಾಗಿ ಪರಿಗಣಿಸಲಾಗಿದೆ. ರಿಯಲ್ ಎಸ್ಟೇಟ್ ನ ಬೆಳವಣಿಗೆ ಹೈದರಾಬಾದ್ ನ ಶ್ರೇಯಾಂಕ ಮೇಲಕ್ಕೆ ಏರಲು ಪ್ರಮುಖ ಕಾರಣವಾಗಿದೆ. ಕಳೆದ ಹನ್ನೆರಡು ತಿಂಗಳ ಅವಧಿಯಲ್ಲಿ ಏರಿಕೆಯಾದ ಸ್ವತ್ತು/ಮನೆಗಳ ಬೆಲೆಗಳ ಆಧಾರದ ಮೇಲೆ ಹೈದರಾಬಾದ್ ಗೆ ಇತ್ತೀಚೆಗೆ ಜಗತ್ತಿನ ಟಾಪ್ ಐದು ನಗರಗಳ ಪೈಕಿ ಒಂದು ಸ್ಥಾನ ಲಭಿಸಿತ್ತು. ಅದು ಆಸ್ತಿ ಮೌಲ್ಯ ಏರಿಕೆ ಆಧಾರದಲ್ಲಿ.

Bengaluru ranked first most dynamic city in the world

ಇನ್ನು ಈ ಬಾರಿ ಡೈನಮಿಕ್ ನಗರಗಳ ಪಟ್ಟಿ ಮಾಡುವ ಸಲುವಾಗಿ ಅನ್ವೇಷಣಾ ಸಾಮರ್ಥ್ಯ, ಸ್ಟಾರ್ಟ್ ಅಪ್ಸ್, ಪೇಟೆಂಟ್ ಅರ್ಜಿ, ಸಾರ್ವಜನಿಕ ಮೂಲಸೌಕರ್ಯ, ಪರಿಸರದ ಗುಣಮಟ್ಟವನ್ನು ಸಹ ಗಣನೆಗೆ ತೆಗೆದುಕೊಳ್ಲಲಾಗಿದೆ. ಸ್ಟಾರ್ಟ್ ಅಪ್ಸ್ ಗಳಲ್ಲಿನ ಬೆಳವಣಿಗೆ, ವ್ಯಾಪಾರಕ್ಕೆ ಪೂರಕ ವಾತಾವರಣ, ಬೇರೆ ಮೆಟ್ರೋಗಳಿಗಿಂತ ಉತ್ತಮವಾದ ಪರಿಸರವು ಶ್ರೇಯಾಂಕದಲ್ಲಿ ಕಾಣಿಸಿಕೊಳ್ಳಲು ಹೈದರಾಬಾದ್ ಗೆ ನೆರವಾಗಿದೆ.

ಭಾರತೀಯರು ಹೆಚ್ಚು ಚಿಂತೆಗೀಡಾಗಿರುವುದು ಯಾವುದರ ಬಗ್ಗೆ ಗೊತ್ತೇ?ಭಾರತೀಯರು ಹೆಚ್ಚು ಚಿಂತೆಗೀಡಾಗಿರುವುದು ಯಾವುದರ ಬಗ್ಗೆ ಗೊತ್ತೇ?

ಡೈನಮಿಕ್ ನಗರಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ದೆಹಲಿ, ಐದರಲ್ಲಿ ಪುಣೆ, ಏಳರಲ್ಲಿ ಚೆನ್ನೈ, ಹದಿನೈದನೇ ಸ್ಥಾನದಲ್ಲಿ ಕೋಲ್ಕತ್ತಾ ಇದೆ.

English summary
Bengaluru stands second in global rankings as one among the top 20 most dynamic cities in the world. According to a report published by World Economic Forum as part of the WEF Annual Meeting. Hyderabad has been ranked second in the yet to be released JLL City Momentum Index (CMI)-2019, in the short-term growth category
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X