ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮೈಸೂರು ಮೆಮು ರೈಲು ವೇಳಾಪಟ್ಟಿ, ನಿಲ್ದಾಣಗಳು

|
Google Oneindia Kannada News

ಬೆಂಗಳೂರು, ಡಿಸೆಂಬರ್ 23 : ಬೆಂಗಳೂರು-ರಾಮನಗರ-ಮೈಸೂರು ನಡುವಿನ ಮೆಮು ರೈಲು ಸಂಚಾರಕ್ಕೆ ಒಪ್ಪಿಗೆ ಸಿಕ್ಕಿದೆ. ಡಿಸೆಂಬರ್ 26ರಿಂದ ಈ ರೈಲು ವಾರದ ಎಲ್ಲಾ ದಿನಗಳ ಕಾಲ ಉಭಯ ನಗರಗಳ ನಡುವೆ ಸಂಚಾರ ನಡೆಸಲಿದೆ.

ವಿಶೇಷ ವಿದ್ಯುತ್ ರೈಲು (ಮೆಮು) ಸಂಚಾರಕ್ಕೆ ಭಾನುವಾರ ಚಾಲನೆ ನೀಡಲಾಗುತ್ತದೆ. ಡಿಸೆಂಬರ್ 26ರಿಂದ ಬೆಂಗಳೂರು, ಡಿಸೆಂಬರ್ 27ರಿಂದ ಮೈಸೂರಿನಿಂದ ಹೊಸ ರೈಲು ಸಂಚಾರ ನಡೆಸಲಿದೆ.

ರಾಮನಗರ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ ರಾಮನಗರ ಮೆಮು ರೈಲು ಮೈಸೂರಿನ ತನಕ ವಿಸ್ತರಣೆ

ಬೆಂಗಳೂರು-ಮೈಸೂರು ನಡುವೆ ಬುಧವಾರ, ಗುರುವಾರ, ಶುಕ್ರವಾರ ಹಾಗೂ ಶನಿವಾರ ರೈಲು ಸಂಚಾರ ನಡೆಸಲಿದೆ. ಮೈಸೂರು-ಬೆಂಗಳೂರು ನಡುವೆ ಗುರುವಾರ, ಶುಕ್ರವಾರ, ಶನಿವಾರ ಹಾಗೂ ಭಾನುವಾರ ಮೆಮು ರೈಲು ಸಂಚರಿಸಲಿದೆ.

ಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆಬೆಂಗಳೂರು-ಮೈಸೂರು ನಡುವೆ ರಾತ್ರಿ ರೈಲು ಸಂಚಾರಕ್ಕೆ ಬೇಡಿಕೆ

ಭಾನುವಾರ, ಸೋಮವಾರ ಮತ್ತು ಮಂಗಳವಾರ ರಾತ್ರಿ 8.30ಕ್ಕೆ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಬೆಂಗಳೂರು-ಕಾರವಾರ ರೈಲು ಮೈಸೂರಿಗೆ ಸಂಪರ್ಕ ಕಲ್ಪಿಸಲಿದೆ.

'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು' 'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು'

ಬೆಂಗಳೂರಿನಿಂದ ರಾತ್ರಿ 7.55 ಮೆಮು ರೈಲು ಹೊರಡಲಿದ್ದು, ರಾತ್ರಿ 10.50ಕ್ಕೆ ತಲುಪಲಿದೆ. ಬೆಳಗ್ಗೆ 4.45ಕ್ಕೆ ಮೈಸೂರಿನಿಂದ ಹೊರಡುವ ರೈಲು 8.30ಕ್ಕೆ ಬೆಂಗಳೂರನ್ನು ತಲುಪಲಿದೆ. 110 ಕಿ.ಮೀ.ರೈಲಿನ ಪ್ರಯಾಣದ ಅವಧಿ 2.55 ಗಂಟೆ.

'ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು''ಕ್ರಿಸ್ಮಸ್, ಹೊಸ ವರ್ಷ, ಸಂಕ್ರಾಂತಿ ಹೆಚ್ಚುವರಿ ರೈಲು ಬೇಕು'

ರೈಲಿನ ವೇಳಾಪಟ್ಟಿ

ರೈಲಿನ ವೇಳಾಪಟ್ಟಿ

ಬೆಂಗಳೂರಿನಿಂದ ರಾತ್ರಿ 7.55 ಮೆಮು ರೈಲು ಹೊರಡಲಿದ್ದು, ರಾತ್ರಿ 10.50ಕ್ಕೆ ತಲುಪಲಿದೆ. ಬೆಳಗ್ಗೆ 4.45ಕ್ಕೆ ಮೈಸೂರಿನಿಂದ ಹೊರಡುವ ರೈಲು 8.30ಕ್ಕೆ ಬೆಂಗಳೂರನ್ನು ತಲುಪಲಿದೆ. 110 ಕಿ.ಮೀ.ರೈಲಿನ ಪ್ರಯಾಣದ ಅವಧಿ 2.55 ಗಂಟೆ.

ಎಲ್ಲಿ, ಎಲ್ಲಿ ನಿಲ್ಲಿಸಲಿದೆ?

ಎಲ್ಲಿ, ಎಲ್ಲಿ ನಿಲ್ಲಿಸಲಿದೆ?

ಬೆಂಗಳೂರು ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡುವ ರೈಲು. ಕೃಷ್ಣದೇವರಾಯ ಹಾಲ್ಟ್, ನಾಯಂಡಹಳ್ಳಿ, ಜ್ಞಾನ ಭಾರತಿ ಹಾಲ್ಟ್‌, ಕೆಂಗೇರಿ, ಹೆಜ್ಜಾಲ, ಬಿಡದಿ, ಕೇತೋಹಳ್ಳಿ ಹಾಲ್ಟ್, ರಾಮಮನಗರ, ಚನ್ನಪಟ್ಟಣ, ಮಂಡ್ಯ, ಪಾಂಡವಪುರ, ಶ್ರೀರಂಗಪಟ್ಟಣ, ಮೈಸೂರು ಸೇರಲಿದೆ. ಮೈಸೂರಿನಿಂದ ಹೊರಡುವ ರೈಲು ಸಹ ಈ ಎಲ್ಲಾ ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ರಸ್ತೆಯೇ ಇಲ್ಲ, ರೈಲು ಹಳಿಯೇ ಎಲ್ಲ: ನಮಗೆ ದಯಾಮರಣ ನೀಡಿ ಎನ್ನುವ ಜನರು ರಸ್ತೆಯೇ ಇಲ್ಲ, ರೈಲು ಹಳಿಯೇ ಎಲ್ಲ: ನಮಗೆ ದಯಾಮರಣ ನೀಡಿ ಎನ್ನುವ ಜನರು

ಏನಿದು ಮೆಮು ರೈಲು?

ಏನಿದು ಮೆಮು ರೈಲು?

ಮೆಮು ಎಂದರೆ ಮೇನ್‌ಲೈನ್ ಎಲೆಕ್ಟ್ರಿಕ್ ಮಲ್ಟಿಪಲ್ ಯೂನಿಟ್ ಸಂಕ್ಷಿಪ್ತ ರೂಪ. ಗ್ರಾಮಾತರ ಮತ್ತು 2ನೇ ಹಂತದ ನಗರಗಳಿಗೆ ಸಂಪರ್ಕ ಕಲ್ಪಿಸಲು ಈ ರೈಲನ್ನು ಬಳಸಲಾಗುತ್ತದೆ. ಈ ರೈಲುಗಳಲ್ಲಿ ಬೋಗಿಗಳನ್ನು ಎಳೆಯಲು ಪ್ರತ್ಯೇಕ ಎಂಜಿನ್ ಇರುವುದಿಲ್ಲ. ವಿದ್ಯುತ್ ಮೋಟಾರ್ ಬೋಗಿಗಳಲ್ಲೇ ಇರುತ್ತದೆ. 'ಮೆಮು' ರೈಲುಗಳು ಸಾಂಪ್ರದಾಯಿಕ ರೈಲುಗಳಿಂದ ವೇಗವಾಗಿ ಸಂಚರಿಸುತ್ತದೆ.

ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ ಬೆಂಗಳೂರು ನಗರದ 2 ರೈಲ್ವೆ ಯೋಜನೆಗೆ ಇಲಾಖೆಯ ಒಪ್ಪಿಗೆ

ರಾಮನಗರ ತನಕ ಸಂಚಾರ

ರಾಮನಗರ ತನಕ ಸಂಚಾರ

ಮೆಮು ರೈಲು ಈಗಾಗಲೇ ಬೆಂಗಳೂರಿನಿಂದ ರಾಮನಗರದ ತನಕ ಸಂಚಾರ ನಡೆಸುತ್ತಿತ್ತು. ಈಗ ಅದನ್ನು ಮೈಸೂರಿನ ತನಕ ವಿಸ್ತರಣೆ ಮಾಡಲಾಗಿದೆ. ಬೆಂಗಳೂರಿನಿಂದ 8 ಗಂಟೆಗೆ ಹೊರಟು ರೈಲು ರಾಮನಗರ ತಲುಪುತ್ತಿತ್ತು. ಮೈಸೂರಿನ ತನಕ ವಿಸ್ತರಣೆ ಆದ ರೈಲಿನಲ್ಲಿ 12 ಬೋಗಿಗಳಿವೆ. 3,500 ಪ್ರಯಾಣಿಕರು ಪ್ರಯಾಣಿಸಬಹುದು.

ಅಟಲ್ ಹುಟ್ಟುಹಬ್ಬದಂದು ದೇಶದ ಅತೀವೇಗದ ರೈಲಿಗೆ ರೈಟ್ ರೈಟ್! ಅಟಲ್ ಹುಟ್ಟುಹಬ್ಬದಂದು ದೇಶದ ಅತೀವೇಗದ ರೈಲಿಗೆ ರೈಟ್ ರೈಟ್!

English summary
All set for Mainline Electric Multiple Unit (MEMU) train service between Bengaluru-Ramanagara-Mysuru. Train will run from December 26, 2018. Here is a schedule.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X