ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೆಲಮಂಗಲದಲ್ಲಿ ನೀರು ನುಗ್ಗಿ ಕೆಟ್ಟುನಿಂತ ಇಪ್ಪತ್ತೆಂಟು ಕಾರು

|
Google Oneindia Kannada News

ಬೆಂಗಳೂರು, ಅಕ್ಟೋಬರ್ 12: ಅದೊಂದು ಕಾರು ಷೋ ರೂಮ್. ಮಾರುತಿ ಸುಜುಕಿ ಕಂಪನಿಯವರ ಆ ಷೋ ರೂಮ್ ನಲ್ಲಿ ಹನ್ನೊಂದು ಕಾರು ಒಂದೇ ಕಾರಣಕ್ಕಾಗಿ ರಿಪೇರಿಗೆಂದು ಬಂದಿವೆ. ಇದೆಂಥ ಸ್ಥಿತಿ ಅಂದರೆ, ಮಳೆಯಲ್ಲಿ ನೆನೆದ ಮಕ್ಕಳು ಶೀತದ ಕಾರಣಕ್ಕೆ ಏಕ ಕಾಲಕ್ಕೆ ಆಸ್ಪತ್ರೆಗೆ ಬಂದಂತೆ.

ಆಯಾ ಕಾರಿನ ಮಾಲೀಕರಿಗೆ ಕನಿಷ್ಠ ಇಪ್ಪತ್ತು ದಿನಗಳ ಕಾಲ ಹಿಂತಿರುಗಿಸಲು ಸಾಧ್ಯವಿಲ್ಲ. ಇನ್ನೂ ಹೆಚ್ಚು ಕಡಿಮೆ ಆದರೆ ರಿಪೇರಿಗೆ ಒಂದು ತಿಂಗಳಿಗೂ ಹೆಚ್ಚು ಸಮಯ ಬೇಕಾಗುತ್ತದೆ. ಕೆಲವರು ಇನ್ಷೂರೆನ್ಸ್ ಕ್ಲೇಮ್ ಮಾಡಿರುವುದರಿಂದ ಆ ಕಂಪನಿಯಿಂದ ಬಂದು, ಕಾರನ್ನು ನೋಡಿ, ಫೋಟೋ ತೆಗೆದುಕೊಂಡು ಹೋಗುವವರೆಗೆ ರಿಪೇರಿ ಆರಂಭಿಸಲು ಸಾಧ್ಯವಿಲ್ಲ.

ನೆಲಮಂಗಲದಲ್ಲಿ ಮಳೆ ಆರ್ಭಟಕ್ಕೆ ಗಾಬರಿ ಬಿದ್ದವರು ಹೇಳಿಕೊಂಡ ಅನುಭವನೆಲಮಂಗಲದಲ್ಲಿ ಮಳೆ ಆರ್ಭಟಕ್ಕೆ ಗಾಬರಿ ಬಿದ್ದವರು ಹೇಳಿಕೊಂಡ ಅನುಭವ

ಹಾಗಂತ ಎಲ್ಲರೂ ಇನ್ಷೂರೆನ್ಸ್ ಕ್ಲೇಮ್ ಮಾಡಿಲ್ಲ. ಮೊನ್ನೆ ನೆಲಮಂಗಲದಲ್ಲಿ ಬಿದ್ದ ಮಳೆಗೆ ಹನ್ನೊಂದು ಕಾರುಗಳು ಹಾಳಾಗಿವೆ. ಮೂರು ಎರ್ಟಿಗಾ, ಒಂದು ಬ್ರೀಜಾ, ಎರಡು ಸ್ವಿಫ್ಟ್, ಆಲ್ಟೋ ಕೆ ಟೆನ್, ಆಲ್ಟೋ 800, ಇಕೋ ತಲಾ ಒಂದೊಂದು ರಿಪೇರಿಗಾಗಿ ಬಂದಿವೆ. ಒಂದು ಕಾರಿಗೆ ಕನಿಷ್ಠ ಮೂವತ್ತು ಸಾವಿರ ರುಪಾಯಿ ಖರ್ಚು ಬರಬಹುದು.

ಎಷ್ಟು ನೀರು ಹೋಗಿದೆ, ಅಷ್ಟು ಖರ್ಚು

ಎಷ್ಟು ನೀರು ಹೋಗಿದೆ, ಅಷ್ಟು ಖರ್ಚು

ಅದೆಷ್ಟು ನೀರು ಹೋಗಿದೆ, ಏನೇನು ಹಾಳಾಗಿವೆ ಎಂಬುದನ್ನು ನೋಡಿದ ಮೇಲೇನೆ ಇಷ್ಟು ಖರ್ಚು ಅಂತ ಹೇಳೋಕೆ ಸಾಧ್ಯ. ಕೆಲವರು ಕಾರನ್ನ ಸ್ಟಾರ್ಟ್ ಮಾಡಿಬಿಡ್ತಾರೆ. ಹಾಗೆ ಮಾಡುವುದರಿಂದ ಇನ್ನೂ ಜಾಸ್ತಿ ಸಮಸ್ಯೆಯಾಗುತ್ತದೆ. ನೀರು ಹೋಗಿದೆ ಅಂತ ಗೊತ್ತಾದ ಕೂಡಲೇ ಮತ್ತೊಂದು ವಾಹನದ ಮೂಲಕವೇ ಷೋ ರೂಮಿಗೆ ತರಬೇಕು ಎಂದರು ಕಾರಿನ ರಿಪೇರಿ ವಿಚಾರದಲ್ಲಿ ತಜ್ಞರಾದ ಅನಿಲ್ ಕುಮಾರ್.

ಮೂವತ್ತರಿಂದ ಮೂವತ್ತೈದು ಸಾವಿರ ಖರ್ಚು

ಮೂವತ್ತರಿಂದ ಮೂವತ್ತೈದು ಸಾವಿರ ಖರ್ಚು

ದಸರಾಗೆ ಮುಂಚೆ ಒಂದು ಸಲ ಭಾರೀ ಮಳೆಯಾಗಿತ್ತು. ಆಗಲೂ ನೀರು ತುಂಬಿಕೊಂಡಿದ್ದ ಮೂರು ಕಾರನ್ನು ಷೋ ರೂಮಿಗೆ ತಂದಿದ್ದರು. ಒಂದೊಂದಕ್ಕೆ ಮೂವತ್ತರಿಂದ ಮೂವತ್ತೈದು ಸಾವಿರ ಖರ್ಚಾಗಿತ್ತು. ಮಳೆ ಬಂದಾಗ ನೀರು ಜಾಸ್ತಿ ನಿಲ್ಲುವ ಜಾಗದಲ್ಲಿ ಗಾಡಿ ಇರಬಾರದು. ಗಾಡಿಯ ಎತ್ತರದ ಅರ್ಧಕ್ಕಿಂತ ಹೆಚ್ಚಿನ ಭಾಗ ನೀರು ತುಂಬಿಕೊಂಡರೆ ಸಮಸ್ಯೆ ಖಂಡಿತ ಆಗುತ್ತದೆ ಎನ್ನುತ್ತಾರೆ ಅನಿಲ್.

ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು

ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು

ಇನ್ನು ಈ ರೀತಿಯ ಸಮಸ್ಯೆಯಾದಾಗ ಇನ್ಷೂರೆನ್ಸ್ ಕ್ಲೇಮ್ ಮಾಡಬಹುದು. ಆದರೆ ಬಹಳ ಜನಕ್ಕೆ ಗೊತ್ತಿರಲ್ಲ. ಯಾವ ಬಿಡಿ ಭಾಗಕ್ಕೆ ಇನ್ಷೂರೆನ್ಸ್ ಕವರ್ ಆಗಿರುತ್ತದೆ ಮತ್ತು ಕ್ಲೇಮ್ ಮಾಡುವುದಕ್ಕೆ ಇರುವ ನಿಯಮಗಳೇನು ಅಂತ ತಿಳಿದುಕೊಟ್ಟು ಕೊಳ್ಳುವುದು ಒಳ್ಳೆಯದು. ಆಗುವ ಖರ್ಚಿನಲ್ಲಿ ಸ್ವಲ್ಪ ಭಾಗವಾದರೂ ಇನ್ಷೂರೆನ್ಸ್ ಕಂಪನಿಯವರಿಂದ ಬರುತ್ತದೆ ಎಂದು ಸಲಹೆ ನೀಡುತ್ತಾರೆ.

ಕಾರಿನಲ್ಲಿ ನೀರು ಹೋಗಿದೆ ಎಂದಾಕ್ಷಣ ಏನು ಮಾಡಬೇಕು?

ಕಾರಿನಲ್ಲಿ ನೀರು ಹೋಗಿದೆ ಎಂದಾಕ್ಷಣ ಏನು ಮಾಡಬೇಕು?

ಕಾರಿನಲ್ಲಿ ನೀರು ಹೋಗಿದೆ ಅಂತ ಗೊತ್ತಾದ ತಕ್ಷಣ ಯಾವ ಕಾರಣಕ್ಕೂ ಸ್ಟಾರ್ಟ್ ಮಾಡಬಾರದು. ಹೀಗೆ ಮಾಡಿದರೆ ಎಂಜಿನ್, ವೈರಿಂಗ್ ಹಾಗೂ ಸೈಲೆನ್ಸರ್ ಕೂಡ ಹಾನಿಯಾಗುತ್ತವೆ. ಅಷ್ಟೇ ಅಲ್ಲ, ಹೊಗೆ ಬರುವುದು ಜಾಸ್ತಿಯಾಗುತ್ತದೆ. ರಿಪೇರಿ ಖರ್ಚು ತುಂಬ ಹೆಚ್ಚಾಗುತ್ತದೆ. ಮೊದಲನೆಯದಾಗಿ ನೀರು ಕಾರೊಳಗೆ ನುಗ್ಗದಂತೆ ಇರುವ ಜಾಗದಲ್ಲಿ ನಿಲ್ಲಿಸಬೇಕು. ಒಂದು ವೇಳೆ ನೀರು ಹೋಗಿಬಿಟ್ಟರೆ ಮತ್ತೊಂದು ವಾಹನದ ಸಹಾಯದಿಂದಲೇ ಷೋ ರೂಮ್ ಗೆ ತರಬೇಕು.

ಇನ್ಷೂರೆನ್ಸ್ ಕ್ಲೇಮ್ ಮಾಡಿಕೊಳ್ಳುವ ಹಾಗಿದ್ದರೆ ಅದಕ್ಕೆ ಇರುವ ನಿಯಮಾವಳಿಗಳನ್ನು ತಿಳಿದುಕೊಂಡಿರಬೇಕು.

English summary
Due to heavy rain in and around Bengaluru many car owners facing the problem of water. Heavy repair expenses bearing by owners and it will take more than 20 days to repair. Here is the details shared by car showroom staffs about recent rain havoc.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X