ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿಗೆ ಹೊಸ ವರ್ಷದ ಕೊಡುಗೆ ನೀಡಿದ ನೈಋತ್ಯ ರೈಲ್ವೆ

|
Google Oneindia Kannada News

ಬೆಂಗಳೂರು, ಜನವರಿ 05 : ನೈಋತ್ಯ ರೈಲ್ವೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಕೊಡುಗೆಯೊಂದನ್ನು ನೀಡಿದೆ. ಇದರಿಂದಾಗಿ ನೀರಿನ ಉಳಿತಾಯವಾಗಲಿದ್ದು, ಪರಿಸರ ಸಂರಕ್ಷಣೆಗೂ ಸಹಾಯಕವಾಗಲಿದೆ.

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಲ್ಲಿ ರೈಲುಗಳನ್ನು ಸ್ವಚ್ಛಗೊಳಿಸುವ ಅತ್ಯಾಧುನಿಕ ಆಟೋಮ್ಯಾಟಿಕ್ ಯಂತ್ರಗಳನ್ನು ಸ್ಥಾಪನೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಬೆಂಗಳೂರಲ್ಲಿ ಇಂತಹ ಯಂತ್ರ ಸ್ಥಾಪಿಸಲಾಗಿದೆ.

ರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಎಲ್ಲಿಗೆ?; ವೇಳಾಪಟ್ಟಿರೈಲು ನಿಲ್ದಾಣದಿಂದ ಬಿಎಂಟಿಸಿ ಬಸ್ ಎಲ್ಲಿಗೆ?; ವೇಳಾಪಟ್ಟಿ

Automatic coach washing plant ಮೂಲಕ ಒಂದು ರೈಲನ್ನು 15 ನಿಮಿಷಗಳಲ್ಲಿ ಸ್ವಚ್ಛಗೊಳಿಸಬಹುದು. ಕಾರ್ಮಿಕರ ಮೂಲಕ ಸ್ವಚ್ಛಗೊಳಿಸುವ ಪ್ರಕ್ರಿಯೆಗೆ ಹೋಲಿಕೆ ಮಾಡಿದರೆ ಶೇ 50 ರಿಂದ 60ರಷ್ಟು ನೀರಿನ ಉಳಿತಾಯವಾಗಲಿದೆ.

ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?ದೇಶದಲ್ಲಿ ಓಡಾಡಲಿದೆ ಖಾಸಗಿ ರೈಲು: ಎಲ್ಲೆಲ್ಲಿ ಇರಲಿದೆ ಸಂಚಾರ?

Bengaluru Railway Station Gets Automatic Coach Washing Plant

24 ಬೋಗಿಗಳ ರೈಲನ್ನು ಸ್ವಚ್ಛಗೊಳಿಸಲು 1440 ಲೀಟರ್‌ಗಳಷ್ಟು ನೀರು ಬೇಕೆಂದು ಅಂದಾಜಿಸಲಾಗಿದೆ. ಒಂದು ಕೋಚ್‌ಗೆ ಸುಮಾರು 60 ಲೀಟರ್ ನೀರು ಬೇಕು. ಕಾರ್ಮಿಕರು ಸ್ವಚ್ಛಗೊಳಿಸಿದರೆ 3600 ಲೀಟರ್ ನೀರು ಬೇಕಾಗಿತ್ತು.

ರೈಲು ಪ್ರಯಾಣ ದರ ಹೆಚ್ಚಳಕ್ಕೆ ಪ್ರಧಾನಿ ಕಾರ್ಯಾಲಯ ಒಪ್ಪಿಗೆರೈಲು ಪ್ರಯಾಣ ದರ ಹೆಚ್ಚಳಕ್ಕೆ ಪ್ರಧಾನಿ ಕಾರ್ಯಾಲಯ ಒಪ್ಪಿಗೆ

ಆಟೋ ಮ್ಯಾಟಿಕ್ ಯಂತ್ರಗಳ ಮೂಲಕ ರೈಲು ಗಂಟೆಗೆ 10 ಕಿ. ಮೀ. ವೇಗದಲ್ಲಿ ಸಂಚಾರ ನಡೆಸಲಿದೆ. ಹೊಸ ವರ್ಷದ ಆರಂಭದಲ್ಲಿಯೇ ನೈಋತ್ಯ ರೈಲ್ವೆ ಬೆಂಗಳೂರಿಗೆ ಈ ಕೊಡುಗೆ ನೀಡಿದೆ.

English summary
South Western Railway get its first automatic coach washing plant in Krantiveera sangolli rayanna railway station, Bengaluru. Plant will save 50 to 60 percent of water compared to manual cleaning.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X