ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭೋಪಾಲ್‌ನಿಂದ ನಾಪತ್ತೆಯಾಗಿದ್ದ ಅಪ್ರಾಪ್ತ ಬಾಲಕಿಯನ್ನು ರಕ್ಷಿಸಿದ ಬೆಂಗಳೂರು ರೈಲ್ವೆ ಪೊಲೀಸರು

|
Google Oneindia Kannada News

ಬೆಂಗಳೂರು, ನವೆಂಬರ್ 11: ಭೋಪಾಲ್‌ನಲ್ಲಿ ಕಾಣೆಯಾಗಿದ್ದ 16 ವರ್ಷದ ಬಾಲಕಿಯನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದಾರೆ.

ಬಾಲಕಿ ಭೋಪಾಲ್‌ನ ಕಮಲಾನಗರದಿಂದ ನಾಪತ್ತೆಯಾಗಿದ್ದಳು, 5 ತಾಸಿನೊಳಗೆ ಕಾರ್ಯಾಚರಣೆ ನಡೆಸಿ ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ. ನವದೆಹಲಿ-ಬೆಂಗಳೂರು ಫೆಸ್ಟಿವಲ್ ಸೂಪರ್ ಫಾಸ್ಟ್ ಎಕ್ಸ್ ಪ್ರೆಸ್ ನಿಂದ ಯಲಹಂಕ ಸಮೀಪ ಆಕೆಯನ್ನು ರಕ್ಷಿಸಿದ್ದಾರೆ.

ಹಣಕ್ಕಾಗಿ ಅಪಹರಣದ ನಾಟಕವಾಡಿ ಹೆತ್ತವರನ್ನೇ ಬೇಸ್ತು ಬೀಳಿಸಿದ ಬಾಲಕ ಹಣಕ್ಕಾಗಿ ಅಪಹರಣದ ನಾಟಕವಾಡಿ ಹೆತ್ತವರನ್ನೇ ಬೇಸ್ತು ಬೀಳಿಸಿದ ಬಾಲಕ

ಐಪಿಸಿಯ ಸೆಕ್ಷನ್ 363 ರ ಅಡಿಯಲ್ಲಿ ಅಪಹರಣದ ಪ್ರಕರಣವನ್ನು ಆಕೆಯ ಪೋಷಕರು ಭಾನುವಾರ ಭೋಪಾಲ್ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದಾರೆ ಮತ್ತು ಜಬಲ್ಪುರದ ಆರ್ ಪಿ ಎಫ್ ವಲಯ ಕಚೇರಿ ಬೆಂಗಳೂರಿನ ಪೊಲೀಸರಿಗೆ ಮಾಹಿತಿ ನೀಡಿತ್ತು.

Bengaluru Railway Police Rescue Minor Kidnapped From Bhopal

ಸೋಮವಾರ ಮಧ್ಯಾಹ್ನ 1.30 ರ ಸುಮಾರಿಗೆ ಕರೆ ಬಂದ ಹಿನ್ನೆಲೆಯಲ್ಲಿ ಆರ್‌ಪಿಎಫ್ ತಂಡಗಳನ್ನು ರಚಿಸಿ ಉತ್ತರ ಭಾರತದಿಂದ ಬೆಂಗಳೂರು ವಿಭಾಗಕ್ಕೆ ಪ್ರವೇಶಿಸುವ ರೈಲುಗಳನ್ನು ಪರಿಶೀಲಿಸಿತು.

ಬಾಲಕಿಯನ್ನು ಆಕೆಯ ಸಹಪಾಠಿ ಮನವೊಲಿಸಿ ತನ್ನ ಜೊತೆ ಊರು ಬಿಟ್ಟು ಬರುವಂತೆ ತಿಳಿಸಿದ್ದಾನೆ. 17 ವರ್ಷ ವಯಸ್ಸಿನ ಬಾಲಕನ ಮಾತು ಕೇಳಿದ ಆಕೆ ನಗರ ಬಿಟ್ಟು ಬರಲು ನಿರ್ಧರಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆ ನಾಪತ್ತೆಯಾಗಿದ್ದಾಳೆ ಎಂದು ತಿಳಿದ ನಂತರ ಪೋಷಕರು ಪ್ರಕರಣ ದಾಖಲಿಸಿದ್ದಾರೆ.

06528 ಸಂಖ್ಯೆಯ ರೈಲು ಹಿಂದೂಪುರ ಮತ್ತು ಯಲಹಂಕ ನಡುವೆ ಸಾಗುವಾಗ ಎಸ್ 8 ಬೋಗಿಯಲ್ಲಿ 38ನೇ ನಂಬರಿನ ಸೀಟಿನಲ್ಲಿ ಬಾಲಕಿ ಮತ್ತು 40ನೇ ಸೀಟಿನಲ್ಲಿ ಬಾಲಕ ಕುಳಿತಿದ್ದು ಕಂಡು ಬಂತು ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರನ್ನು ಕಂಡೊಡನೆ ಆಕೆ ಗೊಂದಲಕ್ಕೆ ಒಳಗಾದ ಆಕೆ ಬೆಂಗಳೂರಿಗೆ ಕರೆ ತಂದಿದ್ದಾನೆ ಎಂದು ಭಾವಿಸಿರಲಿಲ್ಲ, ಭೋಪಾಲ್ ಪೊಲೀಸರು ಭದ್ರತೆಯೊಂದಿಗೆ ಇಬ್ಬರನ್ನು ವಾಪಸ್ ಕರೆದೊಯ್ದಿದ್ದಾರೆ. ಬಾಲಕ ಕೂಡ ಅಪ್ರಾಪ್ತನಾಗಿದ್ದು, ಇಬ್ಬರ ವಿರುದ್ದ ವಿಭಿನ್ನ ಕೇಸ್ ಗಳನ್ನು ದಾಖಲಿಸಲಾಗಿದೆ.

Recommended Video

ಹೆಂಡತಿಯ challenge ಒಪ್ಪಿ ತೇಜ್ ಎನ್ ಮಾಡಿದ್ರು ಗೊತ್ತಾ ? | Oneindia Kannada

ಸಂಜೆ 6 ರ ಸುಮಾರಿಗೆ ಇವರಿಬ್ಬರನ್ನು ಯಲಹಂಕ ನಿಲ್ದಾಣದಲ್ಲಿ ಇಳಿಸಲಾಯಿತು ಮತ್ತು ಪ್ಲಾಟ್ ಫಾರ್ಮ್ ನಲ್ಲಿ ಕಾಯುತ್ತಿದ್ದ ಪೊಲೀಸರು ಅಲ್ಲಿಂದ ಅವರನ್ನು ಕರೆದೊಯ್ದರು ಎಂದು ಮತ್ತೊಬ್ಬ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

English summary
Within five hours of getting an alert that a 16-year-old girl was missing from Kamla Nagar in Bhopal and was suspected to be taken by someone on a train to Bengaluru, the Railway Protection Force (RPF) and the Government Railway Police rescued her from the New Delhi-Bengaluru Festival Superfast Express when it neared Yelahanka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X