ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ನಗರದಲ್ಲಿನ ಆಸ್ತಿ ಮಾಲೀಕರ ಗಮನಕ್ಕೆ

|
Google Oneindia Kannada News

ಬೆಂಗಳೂರು, ನವೆಂಬರ್ 16: ಬೆಂಗಳೂರು ನಗರದಲ್ಲಿನ ಆಸ್ತಿ ಮಾಲೀಕರಿಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸಿಹಿ ಸುದ್ದಿ ನೀಡಿದೆ. ಈ ಆಸ್ತಿ ಡಿಜಿ ಲಾಕರ್ ಮೂಲಕ ಆಸ್ತಿ ಪತ್ರವನ್ನು ಬಿಬಿಎಂಪಿ ನೀಡಲಿದೆ. ಪ್ರಾಯೋಗಿಕವಾಗಿ ಮೊದಲ ಹಂತದಲ್ಲಿ ಈ ಯೋಜನೆಯನ್ನು 100 ವಾರ್ಡ್‌ಗಳಲ್ಲಿ ಜಾರಿಗೆ ತರಲಾಗುತ್ತದೆ.

ಬಿಬಿಎಂಪಿ ಇನ್ನು ಮುಂದೆ ಕಾಗದ ರೂಪದಲ್ಲಿ ಆಸ್ತಿ ಮಾಲೀಕರಿಗೆ ಆಸ್ತಿ ಪ್ರಮಾಣ ಪತ್ರವನ್ನು ನೀಡುವುದನ್ನು ಸ್ಥಗಿತಗೊಳಿಸಲಿದೆ. ಪಾಲಿಕೆ ಡಿಜಿಟಲ್ ರೂಪಕ್ಕೆ ಬದಲಾವಣೆಯಾಗಲಿದ್ದು, ಆಸ್ತಿ ಮಾಲೀಕರಿಗೆ ಡಿಜಿ ಲಾಕರ್ ರೂಪದಲ್ಲಿ ಇನ್ನು ಮುಂದೆ ಪ್ರಮಾಣ ಪತ್ರ ಸಲ್ಲಿಸಲಿದೆ.

1200 ಕೋಟಿಗೂ ಅಧಿಕ ಆಸ್ತಿ ತೆರಿಗೆ ಬಾಕಿ, 20 ಸಂಸ್ಥೆ ಹೆಸರು ಬಹಿರಂಗ 1200 ಕೋಟಿಗೂ ಅಧಿಕ ಆಸ್ತಿ ತೆರಿಗೆ ಬಾಕಿ, 20 ಸಂಸ್ಥೆ ಹೆಸರು ಬಹಿರಂಗ

ಬೆಂಗಳೂರು ನಗರದಲ್ಲಿ ನಕಲಿ ಆಸ್ತಿ ದಾಖಲೆ ಸೃಷ್ಟಿ ಮಾಡುವುದು, ಸಹಿಯನ್ನು ನಕಲು ಮಾಡಿ ಆಸ್ತಿ ಮಾರಾಟ ಮಾಡುವ ಹಲವಾರು ಪ್ರಕರಣಗಳು ನಡೆದಿವೆ. ಡಿಜಿ ಲಾಕರ್ ವ್ಯವಸ್ಥೆಯಿಂದಾಗಿ ಇದಕ್ಕೆ ಕಡಿವಾಣ ಬೀಳಲಿದೆ ಎಂದು ಬಿಬಿಎಂಪಿ ಹೇಳಿದೆ.

ಬೆಂಗಳೂರು; ಗಿರಿಧಾಮ ಲೇಔಟ್ ಆಸ್ತಿ ವಿವಾದ ಏನು? ಬೆಂಗಳೂರು; ಗಿರಿಧಾಮ ಲೇಔಟ್ ಆಸ್ತಿ ವಿವಾದ ಏನು?

Bengaluru Property Owners To Get Certificates In Digi Locker

ನಗರದಲ್ಲಿ 'E-Aasthi' ಎಂಬ ಹೆಸರಿನಲ್ಲಿ ಆಸ್ತಿಗಳ ನೋಂದಣಿ ನಡೆಯಲಿದೆ. 100 ವಾರ್ಡ್‌ಗಳಲ್ಲಿ ಪ್ರಾಯೋಗಿಕವಾಗಿ ಇದನ್ನು ತಕ್ಷಣದಿಂದ ಜಾರಿಗೆ ತರಲಾಗುತ್ತದೆ ಎಂದು ಬಿಬಿಎಂಪಿ ಹೇಳಿದೆ. ಶಾಂತಿ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಯೋಜನೆಯನ್ನು ಮೊದಲು ಜಾರಿಗೆ ತರಲಾಗುತ್ತದೆ.

ಬೇನಾಮಿ ಆಸ್ತಿ ಪತ್ತೆ: ಕೆಎಎಸ್ ಅಧಿಕಾರಿ ಸುಧಾಗೆ ಇಡಿ ಉರುಳು ? ಬೇನಾಮಿ ಆಸ್ತಿ ಪತ್ತೆ: ಕೆಎಎಸ್ ಅಧಿಕಾರಿ ಸುಧಾಗೆ ಇಡಿ ಉರುಳು ?

ಯಾವ ವಾರ್ಡ್‌ಗಳು; ಬಿಬಿಎಂಪಿ ಮೊದಲ ಹಂತದಲ್ಲಿ ಶಾಂತಲ ನಗರ, ನೀಲಸಂದ್ರ, ಶಾಂತಿ ನಗರ ವಾರ್ಡ್‌ನಲ್ಲಿ ಇ-ಆಸ್ತಿ ನೋಂದಣಿಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಿದೆ. ಮುಂದಿನ ಆರು ತಿಂಗಳಿನಲ್ಲಿ ನಗರದ 100 ವಾರ್ಡ್‌ಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುತ್ತದೆ.

ಸದ್ಯ ಮೂರು ವಾರ್ಡ್‌ಗಳಲ್ಲಿ 23,000 ಆಸ್ತಿಗಳಿದ್ದು, ಅವುಗಳನ್ನು ಡಿಜಿ ಲಾಕರ್‌ನಲ್ಲಿ ಅಳವಡಿಕೆ ಮಾಡಲಾಗುತ್ತದೆ. 100 ವಾರ್ಡ್‌ಗಳಲ್ಲಿ 7.5 ಲಕ್ಷ ಆಸ್ತಿಗಳಿವೆ. ಪ್ರಸ್ತುತ ಬಿಬಿಎಂಪಿಯಲ್ಲಿ 198 ವಾರ್ಡ್‌ಗಳಿವೆ. ಉಳಿದ 98 ವಾರ್ಡ್‌ಗಳ ಆಸ್ತಿಯನ್ನು ಮುಂದಿನ ಹಂತದಲ್ಲಿ ಡಿಜಿಟಲೀಕರಣ ಮಾಡಲಾಗುತ್ತದೆ.

ಕಾಗದದ ದಾಖಲೆ ಕಸದ ಬುಟ್ಟಿಗೆ; ಆಸ್ತಿಗಳ ಡಿಜಿಟಲೀಕರಣ ಆಗುತ್ತಿದ್ದಂತೆ ಕಾಗದ ರೂಪದಲ್ಲಿ ನೀಡಿದ ಆಸ್ತಿಗಳ ಪ್ರಮಾಣ ಪತ್ರವನ್ನು ಬಿಬಿಎಂಪಿ ಕಸದ ಬುಟ್ಟಿಗೆ ಹಾಕಲಿದೆ. ಆಸ್ತಿಗಳ ಮಾಲೀಕರು ಬಿಬಿಎಂಪಿ ಜೊತೆ ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ಡಿಜಿಟಲೀಕರಣಗೊಳ್ಳುವ ಆಸ್ತಿ ವಿವರದಲ್ಲಿ ಆಸ್ತಿಯ ಚಿತ್ರ, ಮಾಲೀಕರ ಚಿತ್ರ ಸೇರಿದಂತೆ 46 ಅಂಶಗಳು ಇರಲಿವೆ. "ಆಸ್ತಿಗಳ ಮಾಲೀಕರಿಂದ ಈ ಪ್ರಕ್ರಿಯೆ ಕುರಿತು ಪ್ರತಿಕ್ರಿಯೆಯನ್ನು ಸಂಗ್ರಹ ಮಾಡಲಾಗುತ್ತಿದೆ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಆಸ್ತಿಗಳು ಡಿಜಿಟಲೀಕರಣಗೊಂಡ ಬಳಿಕ ಜನರು ಸಹಾಯಕ ಕಂದಾಯ ಅಧಿಕಾರಿಗಳನ್ನು ಸಂಪರ್ಕಿಸಿ ತಮ್ಮ ಆಸ್ತಿಗಳ ಡಿಜಿ ಲಾಕರ್ ವ್ಯವಸ್ಥೆಯನ್ನು ಪಡೆಯಬಹುದಾಗಿದೆ. ಈಗ ಆಯ್ಕೆ ಮಾಡಿರುವ 100 ವಾರ್ಡ್‌ಗಳಲ್ಲಿ ಕಾಗದ ರೂಪದಲ್ಲಿ ಆಸ್ತಿಗಳ ಪ್ರಮಾಣ ಪತ್ರ ನೀಡುವುದನ್ನು ನಿಲ್ಲಿಸುವಂತೆ ಬಿಬಿಎಂಪಿ ಕಂದಾಯ ಇಲಾಖೆಗೆ ತಿಳಿಸಿದೆ.

Recommended Video

ದೀಪಾವಳಿ ಸಮಯದಲ್ಲಿ ಮೋದಿ ಮಾಡಿದ್ದಾದರೂ ಏನು? | Oneindia Kannada

ಹೆಚ್ಚಿನ ಮಾಹಿತಿ, ವಿವರಗಳಿಗೆ ಬಿಬಿಎಂಪಿ ವೆಬ್ ಸೈಟ್‌ಗೆ ಭೇಟಿ ನೀಡಿ

English summary
Bruhath Bengaluru Mahanagara Palike has scrapped the existing practice of issuing property ownership certificates in the form of paper khatas. Property owners in the 100 wards of city will get digi-locker facility.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X