ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ರಿಸ್ ಮಸ್ ಸೊಗಸಿಗೆ ಸಿಲಿಕಾನ್ ಸಿಟಿಯ ಬಿನ್ನಾಣ!

|
Google Oneindia Kannada News

ಬೆಂಗಳೂರು, ಡಿಸೆಂಬರ್ 22 : ಕ್ರಿಸ್ ಮಸ್ ಹಬ್ಬಕ್ಕೆ ಇನ್ನು ಎರಡೇ ದಿನ ಬಾಕಿ ಇದೆ. ಇಡೀ ನಗರ ಕ್ರಿಸ್ ಮಸ್ ಹಬ್ಬದ ಆಗಮನಕ್ಕೆ ಸಜ್ಜಾಗುತ್ತಿದೆ. ಮಾರುಕಟ್ಟೆಯಲ್ಲಿ ನಾನಾ ಬಗೆಯ ನಕ್ಷತ್ರಗಳ ಮಾದರಿ , ಬಲೂನುಗಳು, ಕ್ರಿಸ್ ಮಸ್ ಟ್ರೀ, ಕ್ರಿಬ್ ಗಳು, ಸಾಂತಾ ಕ್ಲಾಸ್, ಉಡುಗೆ, ಶುಭ ಸಂಕೇತ ಗಂಟೆಗಳ ಮಾರಾಟ ಜೋರಾಗಿದೆ.

ಕ್ರಿಸ್ ಮಸ್ ಸ್ವಾಗತಕ್ಕಾಗಿ ಬಂದು ನಿಂತಿದೆ ಗೇಟ್ ವೇ ಆಫ್ ಇಂಡಿಯಾ !ಕ್ರಿಸ್ ಮಸ್ ಸ್ವಾಗತಕ್ಕಾಗಿ ಬಂದು ನಿಂತಿದೆ ಗೇಟ್ ವೇ ಆಫ್ ಇಂಡಿಯಾ !

ವಿವಿಧ ಮಳಿಗೆಗಳಲ್ಲಿ ಕ್ರಿಸ್ ಮಸ್ ಆಚರಣೆಯ ಸಾಮಗ್ರಿಗಳನ್ನು ಆಕರ್ಷಕವಾಗಿ ಜೋಡಿಸಿಟ್ಟು ಗ್ರಾಹಕರನ್ನು ಸೆಳೆಯಲಾಗುತ್ತದೆ. ಕ್ರಿಸ್ ಮಸ್ ಸಂದೇಶದ ಕಾರ್ಡ್ ಗಳು ಉಡುಗೊರೆಗಳು, ವಿಭಿನ್ನ ವಿನ್ಯಾಸ ಹಾಗೂ ಬಣ್ಣದ ಕ್ಯಾಲೆಂಡರ್ ಗಳು ಗೃಹಲಂಕಾರಕ್ಕೆ ಅಗತ್ಯವಾದ ತೋರಣ ಎಲ್ಲೆಲ್ಲೂ ಕಳೆ ಕಟ್ಟಿದೆ. ಶಿವಾಜಿನಗರ, ಜಯನಗರ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ , ಗಾಂಧಿ ಬಜಾರ್ ಮತ್ತಿತರೆಡೆಗಳಲ್ಲಿ ಕ್ರಿಸ್ ಮಸ್ ಹಬ್ಬಕ್ಕೆಂದೇ ಪ್ರತ್ಯೇಕ ಮಳಿಗೆಗಳನ್ನು ಹಾಕಲಾಗಿದೆ. ಉಳಿದ ಫ್ಯಾನ್ಸಿ ಸ್ಟೋರ್ ಗಳಲ್ಲಿ ಮಾರಾಟ ಜೋರಾಗಿದೆ.

ವಿರಾಟ್-ಅನುಷ್ಕಾ ಕೇಕ್ ಚಿತ್ತಾರ

ವಿರಾಟ್-ಅನುಷ್ಕಾ ಕೇಕ್ ಚಿತ್ತಾರ

ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಪ್ರಾರಂಭವಾಗಿರುವ ಕೇಕ್ ಶೋನಲ್ಲಿ ವಿರುಷ್ಕಾ ಜೋಡಿ ಮೋಡಿ ಮಾಡಿದೆ. ವಿರುಷ್ಕಾ ಮಾದರಿಯನ್ನು ಕೇಕ್ ನಲ್ಲಿ ತಯಾರಿಸಿದ್ದಾರೆ. ಕಣ್ಮನ ತುಂಬುವಂತೆ ಮಾಡುತ್ತಿದೆ. ವಿರುಷ್ಕಾ ಕೇಕ್ ಜೋಡಿ ನೋಡಲು ಜನರು ಮುಗಿಬೀಳುತ್ತಿದ್ದಾರೆ. ಅನುಷ್ಕಾ- ವಿರಾಟ್ ರನ್ನು ಮದುವಣಗಿತ್ತಿ-ಮದುಮಗನ ರೀತಿಯಲ್ಲಿ ರಚಿಸಲಾಗಿದೆ.

ಕ್ಯಾರಲ್ ಸಿಂಗಿಂಗ್ ನ ಇಂಪು

ಕ್ಯಾರಲ್ ಸಿಂಗಿಂಗ್ ನ ಇಂಪು

ನಗರದ ಹಲವು ಚರ್ಚ್ ಗಳಲ್ಲಿ ಬೆಳಗ್ಗೆ ಮತ್ತು ಸಂಜೆ ಕ್ಯಾರೆಲ್ ಸಿಂಗಿಂಗ್ ಗಳು ನಡೆಯುತ್ತದೆ. ಹಲವು ಚರ್ಚ್ ಗಳಲ್ಲಿ ಒಂದು ಬಾರಿ ಕನ್ನಡದಲ್ಲಿ ಮತ್ತೊಂದು ಬಾರಿ ಇಂಗ್ಲಿಷ್ ನಲ್ಲಿ ಪ್ರಾರ್ಥನೆ ನಡೆಡಯುವುದು ವಿಶೇಷ. ಡಿ.೧ರಿಂದಲೂ ಮನೆ ಮನೆಗೆ ತೆರಳಿ ಕ್ಯಾರೆಲ್ ಸಿಂಗಿಂಗ್ ಮೂಲಕ ಯೇಸು ಕ್ರಿಸ್ತನ ಸಂದೇಶ ಸಾರಲಾಗುತ್ತದೆ. ಪ್ರತಿ ಭಾನುವಾರ ಸ್ಪರ್ಧೆಗಳು ಹಾಗೂ ಪೂರಕ ಆಚರಣೆಗಳು ನಡೆಯುತ್ತಿದೆ.

ಶಾಲಾ ಕಾಲೇಜುಗಳಲ್ಲಿ ಕಾರ್ನಿವಲ್ ಉತ್ಸವಗಳು ಜೋರು

ಶಾಲಾ ಕಾಲೇಜುಗಳಲ್ಲಿ ಕಾರ್ನಿವಲ್ ಉತ್ಸವಗಳು ಜೋರು

ನಗರದ ವಿವಿಧ ಚರ್ಚ್ ಗಳು ಸಿಂಗಾರಗೊಳ್ಳುತ್ತಿದೆ. ಕ್ರಿಶ್ಚಿಯನ್ ಸಮುದಾಯ,ದ ಆಡಳಿತ ಮಂಡಳಿ ಇರುವ ಶಾಲೆ-ಕಾಲೇಜುಗಳಲ್ಲಿ ಕ್ರಿಸ್ ಮಸ್ ಸಡಗರ ಹೆಚ್ಚಿದೆ. ಝಗಮಗಿಸುವ ಸ್ಟಾರ್ ಗಳು ಕ್ರಿಸ್ ಮಸ್ ಟ್ರೀಗಳನ್ನು ಜೋಡಿಲಸಾಗಿದೆ. ಹಬ್ಬಕ್ಕೆಂದೇ ವಿದ್ಯಾರ್ಥಿ ಮತ್ತು ಪೋಷಕರಿಗಾಗಿ ಕಾರ್ನಿವಲ್ ನಡೆಯುತ್ತದೆ.

ವಿವಿಧ ಬಗೆಯ ಕೇಕ್ ಗಳು

ವಿವಿಧ ಬಗೆಯ ಕೇಕ್ ಗಳು

ಕ್ರಿಸ್ ಮಸ್ ಎಂದರೆ ಬಗೆ ಬಗೆಯ ನಾನಾ ವಿನದಯಾ, ಮತ್ತು ಸ್ವಾದದ ಕೇಕ್ ಗಳು ಕಣ್ಮುಂದೆ ಸುಳಿಯುತ್ತದೆ. ಈ ಸಂಭ್ರಮಕ್ಕೆ ಬೇಕರಿ ಯವರು ಈಗಾಗಲೇ ತರಹೇವಾರಿ ಕೇಕುಗಳನ್ನು ತಯಾರಿಸಿದ್ದಾರೆ. ಫಲ್ಂ ಕೇಕ್, ಬ್ಲ್ಯಾಕ್

ಫಾರೆಸ್ಟ್, ತುಪ್ಪದಲ್ಲಿ ತಯಾರಿಸಿದ ಘೀ ಕೇಕ್, ಅನಾನಸ್, ಬಟರ್ ಸ್ಕಾಚ್, ಸ್ಟ್ರಾಬೆರ್ರಿ ಚಾಕಲೇಟ್ ವೆನಿಲಾ ಸೇರಿದಂತೆ ಅನೇಕ ಕೇಕ್ ಲಭ್ಯವಿದೆ.

ಕ್ರಿಸ್ ಮಸ್ ತಯಾರಿಯಲ್ಲಿರುವ ನಗರದ ಚರ್ಚ್ ಗಳು

ಕ್ರಿಸ್ ಮಸ್ ತಯಾರಿಯಲ್ಲಿರುವ ನಗರದ ಚರ್ಚ್ ಗಳು

ಮಾಡಿದ ತಪ್ಪುಗಳನ್ನು ಕ್ಷಮಿಸಿ ಮುನ್ನಡೆಸು ಎಂದು ಏಸುವಿನಲ್ಲಿ ಮೊರೆ ಇಡುವಘಳಿಗೆ ಸಮೀಪಿಸುತ್ತಿದೆ. ಕ್ರಿಸ್ಮಸ್ ಆಚರಣೆಯಮೊದಲ ಹಂತದ ಆಗಮ ಕಾಲ ಪೂರ್ಣಗೊಳ್ಳುತ್ತಿದ್ದು,ನಗರದ ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚ್ ಗಳಲ್ಲಿ ಹಾಗೂ ಮನೆಗಳಲ್ಲಿ ಭರ್ಜರಿ ಸಿದ್ಧತೆ ನಡೆಯುತ್ತಿದೆ.

ಕ್ಯಾಥೋಲಿಕರ ಅತ್ಯಂತ ಪ್ರಾಚೀನ ಚರ್ಚ್‌ಗಳಲ್ಲಿ ಒಂದಾದ ಶಿವಾಜಿನಗರದ ಸಂತ ಮರಿಯ ಬೆಸಿಲಿಕ(ಪುಣ್ಯ ಕ್ಷೇತ್ರ) ಚರ್ಚ್, ಫ್ರೇಜರ್ಟೌನ್ನಲ್ಲಿರುವ ಸೇಂಟ್ ಫ್ರಾನ್ಸಿಸ್ ಕ್ಸೇವಿಯರ್ ಕೆಥೆಡ್ರಲ್ ಚರ್ಚ್,ಬ್ರಿಗೇಡ್ ರಸ್ತೆಯಲ್ಲಿರುವ ಸಂತ ಪ್ಯಾಟ್ರಿಕ್ಸ್ ಚರ್ಚ್,ಸೇಂಟ್ ಮಾರ್ಕ್ಸ್ ಕೆಥೆಡ್ರಲ್, ಚಾಮರಾಜಪೇಟೆಯಸೇಂಟ್ ಜೋಸೆಫ್ ಚರ್ಚ್, ಎಂ.ಜಿ ರಸ್ತೆಯಚರ್ಚ್ಗಳು, ಸೇಂಟ್ ಜಾನ್ಸ್ ಚರ್ಚ್ ಸೇರಿದಂತೆನಗರದ ಹಲವು ರೋಮನ್ ಕೆಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಚರ್ಚ್‌ಗಳು (ಸಿಎಸ್ಐ) ಕ್ರಿಸ್ಮಸ್ಆಚರಣೆಗೆ ಸಂಭ್ರಮದ ತಯಾರಿ ನಡೆಸಿವೆ. ಚರ್ಚ್‌ಗಳ ಒಳ ಮತ್ತು ಹೊರಾಂಗಣಗಳು ದೀಪಾಲಂಕಾರದೊಂದಿಗೆ ಝಗಮಗಿಸುತ್ತಿವೆ.

English summary
Silicon city of the country, Bengaluru is now preparing for the celebration of merry Christmas on Monday. Many historical churches and streets are decorated and shopping is in full swing all over the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X