ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೆಹಲಿಯ ಅನಿಷ್ಟ ಮಾಲಿನ್ಯ ಬೆಂಗಳೂರಿಗೂ ಅಮರಿಕೊಂಡಿತೆ

By ವಿಕಾಸ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 12 : ಬೆಂಗಳೂರು ನಗರ ಭಾರತದ ಅತೀ ಮಾಲಿನ್ಯಕ್ಕೀಡಾದ ನಗರಗಳ ಪಟ್ಟಿಯಲ್ಲಿ ಸದ್ಯಕ್ಕಂತೂ ಇಲ್ಲ. ಆದರೆ ಸದ್ಯ ಉಂಟಾಗುತ್ತಿರುವ ಮಾಲಿನ್ಯವನ್ನು ಗಮನಿಸಿದರೆ ಮುಂದಿನ ಮೂರ್ನಾಲ್ಕು ವರ್ಷಗಳಲ್ಲೇ ದೇಶದಲ್ಲೇ ಅತಿ ಹೆಚ್ಚು ಮಾಲಿನ್ಯಕ್ಕೀಡಾಗುವ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆಯುವುದಂತೂ ಖಚಿತ.

ಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದಬೆಂಗಳೂರು ವಾಯು ಮಾಲಿನ್ಯ ನಿಯಂತ್ರಣಕ್ಕೆ ಲಂಡನ್ ಸಂಸ್ಥೆ ಜೊತೆ ಒಪ್ಪಂದ

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರು ನಗರ ಶೇ. 57 ರಷ್ಟು ಮಾಲಿನ್ಯ ಪ್ರಮಾಣದಲ್ಲಿ ಹೆಚ್ಚಳವನ್ನು ಸಾಧಿಸಿದೆ.
2010 ರಿಂದ 2014 ರ ಅವಧಿಯಲ್ಲಿ 10 ಪಿಎಂ ನಷ್ಟು ಹೆಚ್ಚಳ ಕಂಡುಬಂದಿದೆ. ಪಿಎಂ ಎಂದರೆ ಪಾರ್ಟಿಕಲ್ಸ್ ಮೆಜರಿಂಗ್ 2.5 ರಿಂದ 10 ರಷ್ಟು ಎಂದರ್ಥ.

ಕಸ ಮಾರಿ ಹಣ ಮಾಡಿ, ತ್ಯಾಜ್ಯ ವಿಲೇವಾರಿಗೆ ಹೊಸ ಮಂತ್ರಕಸ ಮಾರಿ ಹಣ ಮಾಡಿ, ತ್ಯಾಜ್ಯ ವಿಲೇವಾರಿಗೆ ಹೊಸ ಮಂತ್ರ

ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ನಡೆಸಿರುವ ಸಮೀಕ್ಷೆ ಪ್ರಕಾರ ಬೆಂಗಳೂರಿನಲ್ಲಿ ಪೀಣ್ಯ ಕೈಗಾರಿಕಾ ಪ್ರದೇಶ ಅತ್ಯಂತ ಮಾಲಿನ್ಯ ಪೀಡಿತ ಪ್ರದೇಶವೆಂದು ಗುರುತಿಸಲಾಗಿದ್ದು, ನಂತರದ ಸ್ಥಾನದಲ್ಲಿ ಕೆ.ಆರ್. ರಸ್ತೆ ಹಾಗೂ ಮಣಿಪಾಲ್ ಆಸ್ಪತ್ರೆ ಪ್ರದೇಶವನ್ನು ದಾಖಲಿಸಲಾಗಿದೆ.

ಮೆಟ್ರೋ ಮಾರ್ಗದ ಕೆಳಗೆ ಕಸಕ್ಕೆಬೆಂಕಿ

ಮೆಟ್ರೋ ಮಾರ್ಗದ ಕೆಳಗೆ ಕಸಕ್ಕೆಬೆಂಕಿ

ಜಯನಗರದ ಮೆಟ್ರೋ ಮಾರ್ಗದ ಬುಡದಲ್ಲೇ ರಸ್ತೆ ಕಸದ ರಾಶಿಗೆ ಬೆಂಕಿ ಹಚ್ಚಿರುವ ದೃಶ್ಯವನ್ನು ನೀವು ನೋಡಬಹುದು. ನಗರದ ಹೊರ ವಲಯ ಅಥವಾ ತ್ಯಾಜ್ಯ ಸಂಸ್ಕರಣ ಘಟಕಗಳಲ್ಲಿ ತ್ಯಾಜ್ಯವನ್ನು ಕೊಂಡೊಯ್ಯುವ ಬದಲು ರಸ್ತೆಯ ಪಕ್ಕದಲ್ಲೇ ತ್ಯಾಜ್ಯಕ್ಕೆ ಬೆಂಕಿ ಇಡುತ್ತಿದ್ದಾರೆ.

ದೇಶದ ಇತರೆ ಪ್ರಮುಖ ನಗರಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ಮಾಲಿನ್ಯದ ಪ್ರಮಾಣ ಕಡಿಮೆ ಇದೆಯಾದರೂ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿರುವ ನಿಯಮದ ಪ್ರಕಾರ ಬೆಂಗಳೂರು ನಗರವು ಕೂಡ ವಾಸಕ್ಕೆ ಯೋಗ್ಯವಾಗಿಲ್ಲ ಎಂದೇ ಹೇಳಲಾಗುತ್ತಿದೆ. ಚಿಂತೆಗೀಡು ಮಾಡಿರುವ ಸಂಗತಿಯೆಂದರೆ ಕನಿಷ್ಟ ಪಕ್ಷ ಬೆಂಗಳೂರಿನಲ್ಲಿ ನಗರ ಸ್ಥಳೀಯ ಸಂಸ್ಥೆಗಳು ನಗರದ ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ಯಾವುದೇ ಪ್ರಯತ್ನವನ್ನು ನಡೆಸಿಲ್ಲ.

ಆಟೋರಿಕ್ಷಾದಿಂದ ಮಾಲಿನ್ಯ

ಆಟೋರಿಕ್ಷಾದಿಂದ ಮಾಲಿನ್ಯ

ಬೆಂಗಳೂರಿನಲ್ಲಿ ಹಳೆಯ ಆಟೋ ರಿಕ್ಷಾಗಳಿಂದ ವಾಯು ಮಾಲಿನ್ಯ ಉಂಟಾಗುತ್ತಿದೆ. ಟೆಂಪೋ ಹಾಗೂ ಆಟೋಗಳು ಉಗುಳುವ ವಿಷಕಾರಕ ಹೊಗೆಯಿಂದ ಟ್ರಾಫಿಕ್ ಪೊಲೀಸರು ಸೇರಿದಂತೆ ಜನ ಸಾಮಾನ್ಯರು ಆರೋಗ್ಯಕ್ಕೆ ಬೆಲೆ ತೆರಬೇಕಾಗಿದೆ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ದೀಪಾವಳಿ ವೇಳೆ ಬೆಂಗಳೂರಿನಲ್ಲಿ ನಡೆಸಿದ ಸಮೀಕ್ಷೆ ಪ್ರಕಾರ122.4 ಮೈಕೋ ಗ್ರಾಂ. ಕ್ಯೂಬಿಕ್ ಮೀಟರ್ ನಷ್ಟು ಮಾಲಿನ್ಯ ಹೆಚ್ಚಳ ಕಂಡುಬಂದಿದ್ದು ಇದನ್ನು ಪ್ರತಿದಿನ 83.4 ರಷ್ಟು ಮೈಕ್ರೋ ಗ್ರಾಂ ಕ್ಯೂಬಿಕ್ ಮೀಟರ್ ಎಂದು ಅಂದಾಜಿಸಲಾಗಿದೆ.

ಬೆಂಗಳೂರು ನಗರದಲ್ಲಿ ಸಂಚರಿಸುವ ಪ್ರತಿಯೊಬ್ಬರು ರಸ್ತೆ ಬದಿ ಸುಡುವ ತ್ಯಾಜ್ಯದಿಂದ ಬರುವ ಹೊಗೆಯನ್ನು ಸೇವಿಸುವುದು ಅನಿವಾರ್ಯವಾಗಿದೆ. ಬಿಎಂಟಿಸಿ ಬಸ್ ಗಳು ಉಗುಳುವ ಹೊಗೆಯಂತೂ ಮನುಷ್ಯನಿಗೆ ಅತ್ಯಂತ ಹಾನಿಕಾರಕ ಎಂದೇ ಪರಿಸರ ತಜ್ಞರು ಹೇಳುತ್ತಿದ್ದಾರೆ.

ವೈದ್ಯಕೀಯ ವರದಿಗಳ ಪ್ರಕಾರ ದೆಹಲಿಯಲ್ಲಿ ಇತ್ತೀಚೆಗೆ ಜನಿಸುತ್ತಿರುವ ಮಕ್ಕಳಲ್ಲಿ ಶ್ವಾಸಕೋಶ ಸಂಬಂಧಿ ರೋಗಗಳು ಹೆಚ್ಚಾಗಿ ಕಂಡುಬರುತ್ತಿದೆ. ಹಲವು ಎಚ್ಚರಿಕೆಗಳ ಮಧ್ಯವೂ ದೆಹಲಿ ಪರಿಸ್ಥಿತಿ ಕ್ಷೀಣಿಸುತ್ತಾ ಸಾಗಿದೆ. ದುರಂತವೆಂದರೆ ಬೆಂಗಳೂರು ಕೂಡ ದೆಹಲಿ ನಗರದ ಹಾದಿಯಲ್ಲೇ ಸಾಗುತ್ತಿದೆ. ಪರಿಸರ ಸಂಬಂಧಿ ಜಾಗೃತಿ ಜನರಲ್ಲಿ ಈಗಲೂ ಮರೀಚಿಕೆಯಾಗಿಯೇ ಉಳಿದಿದೆ.

ರಸ್ತೆ ಬದಿಯಲ್ಲೇ ಕಸಕ್ಕೆ ಬೆಂಕಿ

ರಸ್ತೆ ಬದಿಯಲ್ಲೇ ಕಸಕ್ಕೆ ಬೆಂಕಿ

ಬೆಂಗಳೂರಿನ ಜಯನಗರ ಶುಚಿತ್ವಕ್ಕೆ ಹೆಸರುವಾಸಿಯಾಗಿರುವ ಪ್ರದೇಶವಾಗಿದೆ. ಆದರೆ ಇಂದು ಬಿಬಿಎಂಪಿಯಿಂದ ತ್ಯಾಜ್ಯ ನಿರ್ವಹಣೆ ಸಮರ್ಪಕವಾಗಿ ನಡೆಯದ ಕಾರಣ, ಜಯನಗರ ತ್ಯಾಜ್ಯನಗರಗಳ ಪಟ್ಟಿಯಲ್ಲಿ ಸೇರುವ ಸಂಭವ ಎದ್ದುಕಾಣುತ್ತಿದೆ.

ತ್ಯಾಜ್ಯವನ್ನು ರಸ್ತೆಬದಿಗಳಲ್ಲಿ ಅಥವಾ ಬಡಾವಣೆಗಳಲ್ಲಿ ಸುಟ್ಟುಹಾಕುವುದರಿಂದ ಪಾರ್ಟಿಕ್ಯೂಲ್ ಮೆಜರ್ಸ್ 10 ರಷ್ಟು ಪ್ರಮಾಣದಲ್ಲಿ ಪರಿಸರವು ನಿತ್ಯ ಹಾಳಾಗುತ್ತಿದೆ. ಬಿಬಿಎಂಪಿಯ ಪೌರ ಕಾರ್ಮಿಕರು ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಬದಲು ಎಲ್ಲೆಂದರಲ್ಲಿ ಸುಟ್ಟು ಹಾಕುವುದರಿಂದ ಪರಿಸರಕ್ಕೆ ಭರಿಸಲಾರದಷ್ಟು ನಷ್ಟ ಉಂಟಾಗುತ್ತಿದೆ.

ಕಸದ ತೊಟ್ಟಿಯಲ್ಲೇ ಕಸಕ್ಕೆ ಬೆಂಕಿ

ಕಸದ ತೊಟ್ಟಿಯಲ್ಲೇ ಕಸಕ್ಕೆ ಬೆಂಕಿ

ಈ ರೀತಿ ಸುಟ್ಟು ಹಾಕುವುರಿಂದ ಪರಿಸರದಲ್ಲಿ ಹತ್ತು ಪರ್ಟಿಕಲ್ ಮೆಜರ್ ಪ್ರ,ಆಣದಷ್ಟು ವಾಯು ಮಾಲಿನ್ಯ ಉಂಟಾಗುತ್ತದೆ, ಈ ಬಗ್ಗೆ ಸ್ಥಳೀಯ ಆಡಳಿತವನ್ನು ಮಾತ್ರವನ್ನು ಪೌರಕಾರ್ಮಿಕರನ್ನು ಸುಶಿಕ್ಷಿತಗೊಳಿಸುವ ಅನಿವಾರ್ಯತೆ ನಮ್ಮೆದುರು ಇದೆ. ಬೆಂಗಳೂರು ನಿವಾಸಿಗಳಿಗೆ ಎಚ್ಚೆತ್ತುಕೊಳ್ಳಲು ಇದು ಕೊನೆಯ ಅವಕಾಶ.

ಪರಿಸ್ಥಿತಿ ಇದೇ ರೀತಿ ಮುಂದುವರೆದರೆ. ಮುಂದೊಂದು ದಿನ ದೆಹಲಿಗಿಂತಲೂ ಭೀಕರವಾದ ಪರಿಸ್ಥಿತಿ ಬೆಂಗಳೂರಿಗೆ ಬಂದೊದಗಲದೆ. ದೆಹಲಿಗೆ ಹೋಲಿಸಿದರೆ ಬೆಂಗಲೂರು ನಗರ ದೆಹಲಿಗಿಂತ ಅತ್ಯಂತ ಇಕ್ಕಟ್ಟಾದ ರಸ್ತೆಗಳನ್ನು ಹೊಂದಿರುವ ನಗರ. ಹೀಗಾಗಿ ವಾಯುಮಾಲಿನ್ಯ ವಿಪರೀತಗೊಂಡರೆ ಇಲ್ಲಿನ ಜನರನ್ನು ಬದುಕಿಸಲು ಯಾರಿದಂದಲೂ ಸಾಧ್ಯವಿಲ್ಲ.

ಖಾಸಗಿ ವಾಹನದ ಹೊಗೆ

ಖಾಸಗಿ ವಾಹನದ ಹೊಗೆ

ಕೇವಲ ಸಮೂಹ ಸಾರಿಗೆ ವಾಹನ ಮಾತ್ರವಲ್ಲದೆ, ಖಾಸಗಿ ವಾಹನಗಳ ವಾಯು ಮಾಲಿನ್ಯದ ಮಿತಿ ಮೀರಿದ ಪ್ರಮಾಣಕ್ಕೂ ಬ್ರೇಕ್ ಹಾಕುವವರೇ ಇಲ್ಲದಾಗಿದೆ. ಪರಿಸರ ಮಾಲಿನ್ಯ ನಿಯಂತ್ರಿಸಲು ನಗರದ ಪ್ರತಿಯೊಬ್ಬರೂ ಪಣತೊಡಬೇಕು. ಇಲ್ಲವಾದಲ್ಲಿ ಮುಂದೊಂದು ದಿನ ದೆಹಲಿಯ ಸ್ಥಿತಿ ಬೆಂಗಳೂರಿಗೆ ಬರುವುದರಲ್ಲಿ ಸಂಶಯವೇ ಇಲ್ಲ.

English summary
Bengaluru pollution getting worst: Authorities keep mum, Burning garbage in the open area, garbage setting fire in roads, autos tempos and BMTC buses emitting smoke, these are the common scene in bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X