ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು: ಮಹಿಳೆಯರ ರಕ್ಷಣೆಗಾಗಿ 50 ಸುರಕ್ಷತಾ ಪ್ರದೇಶ ನಿರ್ಮಾಣ

|
Google Oneindia Kannada News

ಬೆಂಗಳೂರು, ಫೆಬ್ರವರಿ 13 : ಬಿಬಿಎಂಪಿ ಹಾಗೂ ನಗರ ಪೊಲೀಸ್ ಇಲಾಖೆಯು ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ಪ್ರಾಯೋಗಿಕವಾಗಿ 50 ಸುರಕ್ಷತಾ ಪ್ರದೇಶಗಳನ್ನು ನಿರ್ಮಿಸಲು ಮುಂದಾಗಿದೆ.

ಆಯ್ದ ಕೊಳೆಗೇರಿ, ಬಸ್ ನಿಲ್ದಾಣ ಹಾಗೂ ಮಾರುಕಟ್ಟೆಗಳನ್ನು ಸುರಕ್ಷತಾ ಪ್ರದೇಶಗಳನ್ನಾಗಿ ಪರಿವರ್ತಿಸಲಾಗುತ್ತಿದೆ. ಮಹಿಳೆಯರು ಸಂಕಷ್ಟದ ಸಮಯದಲ್ಲಿ ಪೊಲೀಸರನ್ನು ಸುಲಭವಾಗಿ ಸಂಪರ್ಕಿಸಲು ಸಾಧ್ಯವಾಗುವಂತೆ ಈ ಯೋಜನೆಯನ್ನು ರೂಪಿಸಲಾಗಿದೆ.

ಈ ಪ್ರದೇಶದಲ್ಲಿ ಎರಡು ಸಿಸಿಟಿವಿ ಕ್ಯಾಮರಾಗಳು, ಎಲ್ ಇಡಿ ದೀಪಗಳು, ಪ್ಯಾನಿಕ್ ಬಟನ್ ಮತ್ತು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗುತ್ತಿದೆ. ಇವು ನಗರ ಪೊಲೀಸ್ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸುತ್ತದೆ. ಇಲ್ಲಿ 2 ಗಂಟೆಯಷ್ಟು ವಿದ್ಯುತ್ ಒದಗಿಸುವ ಯುಪಿಎಸ್ ವ್ಯವಸ್ಥೆಯೂ ಇರಲಿದೆ.

Bengaluru police will built 50 woman safety zone

ಸುರಕ್ಷತಾ ಅಪ್ಲಿಕೇಷನ್ ಸಹಾಯವನ್ನು ಪಡೆಯಬೇಕಾದರೆ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇರಲೇಬೇಕು, ಆದರೆ ಎಲ್ಲರ ಬಳಿಯೂ ಸ್ಮಾರ್ಟ್ ಇರುವುದಿಲ್ಲ. ಇನ್ನೂ ಕೆಲವರ ಬಳಿ ಬ್ಯಾಂಡ್ ಇರುವುದಿಲ್ಲ. ಇಂತಹ ಮಹಿಳೆಯರಿಗೆ ಈ ಸುರಕ್ಷತಾ ಪ್ರದೇಶಗಳು ಸಹಾಯಕ್ಕೆ ಬರುತ್ತದೆ ಎಂದು ನಗರ ಪೊಲೀಸ್ ಕಮಿಷನರ್ ಟಿ. ಸುನೀಲ್ ಕುಮಾರ್ ತಿಳಿಸಿದರು.

ಪೊಲೀಸ್‌ ಸಹಾಯವಾಣಿ ಕೇಂದ್ರಕ್ಕೆ ಹೆಚ್ಚು ದೂರುಗಳು ಬಂದಿರುವ ಸ್ಥಳಗಳನ್ನು ಗುರುತಿಸಲಾಗಿದೆ. ಸುರಕ್ಷತಾ ಪ್ರದೇಶಗಳ ಬಗ್ಗೆ ಸಾರ್ವಜನಿಕರಿಗೆ ಶೀಘ್ರದಲ್ಲೇ ಮಾಹಿತಿ ನೀಡಲಾಗುತ್ತದೆ ಎಂದರು.

English summary
To ensure women safety in Bengaluru city police department and BBMP decides to built 50 safety in and around the city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X